ಈ ವಾರ ನಾಮಿನೇಟ್ ಆಗಿರುವ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ಮತಯಾಚನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮನೆಯಿಂದ ಹೊರಬಂದಂತೆ ತೋರಿಸಿದ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ.
ಬಿಗ್‌ಬಾಸ್ ಮನೆ ಪ್ರವೇಶಕ್ಕೂ ಮುನ್ನವೆ ಸ್ಪರ್ಧಿಗಳು ಮತ ಕೇಳುವ ವಿಡಿಯೋಗಳನ್ನು ಮಾಡಿರುತ್ತಾರೆ. ನಾಮಿನೇಟ್ ಆಗಿರುವ ಸಂದರ್ಭದಲ್ಲಿ ಸ್ಪರ್ಧಿಗಳ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಈ ವಾರ ನಾಮಿನೇಟ್ ಆಗಿರುವ ಅಶ್ವಿನಿ ಗೌಡ ಅವರ ಇನ್‌ಸ್ಟಗ್ರಾಂನಲ್ಲಿ ಮತಯಾಚಿಸುವ ವಿಡಿಯೋ ಹಂಚಿಕೊಳ್ಳಲಾಗಿದೆ.
25
ಅಶ್ವಿನಿ ಗೌಡ ಮನವಿ
ಸರಿ ದಾರೀಲಿ ಇದ್ದಾರೆ ಅನ್ನೋಕೆ ಆತ್ಮವಿಶ್ವಾಸ ಸಾಕು, ಅದೇ ದಾರೀಲಿ ಗುರಿ ಸೇರೋಕೆ ನಿಮ್ಮ Votes ಬೇಕು. ಈ ತಕ್ಷಣವೇ VOTE ಮಾಡಿ ಎಂದು ಅಶ್ವಿನಿ ಗೌಡ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಅಶ್ವಿನಿ ಗೌಡ ಅವರ ಅಭಿಮಾನಿಗಳು ಹಾರ್ಟ್ ಎಮೋಜಿ ಹಾಕಿದ್ದಾರೆ. ಮನೆಯಲ್ಲಿರುವ ಅರ್ಹ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಅವರಿಗೆ ವೋಟ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ.
35
ಫಾಲೋವರ್ಸ್ ಸಂಖ್ಯೆ ಬಗ್ಗೆ ವಾದ
ಇನ್ನು ಒಂದಿಷ್ಟು ನೆಟ್ಟಿಗರು, ನಿಜವಾದ ಬಕೆಟ್. ನಾವು ನಗುತ್ತಾ ನಿಮಗೆ ವೋಟ್ ಮಾಡಲ್ಲ, ಡೋಂಟ್ ವರಿ ಎಂದು ಕಮೆಂಟ್ ಮಾಡಿದ್ದಾರೆ. ಗಣೇಶ್ ಕಾಮತ್ ಎಂಬವರು 100 ಸಿನಿಮಾ ಮಾಡಿದೋರಿಗೆ 176k ಫಾಲೋವರ್ಸ್, ಒಂದೇ ಒಂದು ಸಿನಿಮಾ ಮಾಡದವರಿಗೆ 400k ಫಾಲೋವರ್ಸ್. ಬೇರೆಯವರ ಯೋಗ್ಯತೆ ಬಗ್ಗೆ ಮಾತನಾಡುವ ಮುಂಚೆ ನಿಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು ಎಂದು ಮಾತಿನ ಚಾಟಿ ಬೀಸಿದ್ದಾರೆ.
ಗಣೇಶ್ ಕಾಮತ್ ಅವರ ಮೇಲಿನ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ನಿತಿಶ್ ಮನು ಗೌಡ ಎಂಬವರು, ಸಾಕು ಮುಚಪ್ಪ. ಫಾಲೋವರ್ಸ್ ಇದ್ರೆ ಎಲ್ಲಾ ಅಲ್ಲ. ನೆಗಟಿವೆಗೂ ಇರ್ತಾರೆ. ಪಾಸಿಟಿವ್‌ಗೂ ಇರ್ತಾರೆ. ಕಿಪಿ ಕೀರ್ತಿಗೂ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ನಿಶಾಂತ್ ಮನು ಗೌಡ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಅಶ್ವಿನಿ ಗೌಡ ಹೊರಗಡೆ ಹೋಗುತ್ತಿರೋದನ್ನು ಸೋಮವಾರದ ಸಂಚಿಕೆಯಲ್ಲಿ ತೋರಿಸಲಾಗಿತ್ತು. ಹೊರ ಹೋಗಿರುವ ಅಶ್ವಿನಿ ಗೌಡ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯಾ ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.