ಸಿದ್ದು-ಭಾವನಾ ದೂರವಾಗೋ ಟೈಂ ಬಂದೇ ಬಿಡ್ತು; ಜವರೇಗೌಡನ ಸಂಚಿಗೆ ಬಲಿಯಾಗ್ತಾರಾ ಜನ ಮೆಚ್ಚಿದ ಜೋಡಿ

Published : Nov 04, 2025, 01:16 PM IST

Lakshmi Nivasa: ಮೊದಲಿನಿಂದಲೂ ಭಾವನಾಳನ್ನು ಹೇಗಾದರೂ ಮಾಡಿ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದವರಿಗೆ ದೊಡ್ಡ ತಡೆಗೋಡೆಯಾಗಿದ್ದು ಭಾವನಾ ಗಂಡ ಸಿದ್ದೇಗೌಡ. ಹಾಗಾಗಿ ಗಂಡನೇ ಅಕೆಯನ್ನ ಆಚೆ ಹಾಕುವಂತೆ ಷಡ್ಯಂತ್ರ ಹೂಡಿದ್ದಾನೆ ದುಷ್ಟ ಮಾವ. 

PREV
17
ಬದಲಾದಳು ಅಳುಮುಂಜಿ ಭಾವನಾ

ಮನೆಯವರೆಲ್ಲಾ ಮಾಡುತ್ತಿರುವ ಪಿತೂರಿ ತಿಳಿದ ಮೇಲೆ ಹೇಗೋ ಭಾವನಾ ಎಚ್ಚೆತ್ತುಕೊಂಡು ಅತ್ತೆ, ಮಾವ, ನೀಲು, ಅಜ್ಜಿ ಎಲ್ಲರನ್ನೂ ಎದುರು ಹಾಕಿಕೊಂಡಿದ್ದಳು. ಸಮಯಕ್ಕೆ ತಕ್ಕಂತೆ ಭಾವನಾ ಟಾಂಗ್ ಕೊಡುವುದನ್ನ ನೋಡಿ ನಮ್ಮ ವೀಕ್ಷಕರು ಅಂತೂ ನಮ್ಮ ಅಳುಮುಂಜಿ ಭಾವನಾ ಬದಲಾದಳು ಎಂದು ಸಿಕ್ಕಾಪಟ್ಟೆ ಖುಷಿಯಾಗಿದ್ದರು.

27
ಮನೆಯಿಂದ ಓಡಿಸಲು ಸಂಚು

ಮೊದಮೊದಲು ಅತ್ತೆ-ನೀಲು-ಭಾವನಾ ನಡುವೆಯೇ ನಡೆಯುತ್ತಿದ್ದ ಜಟಾಪಟಿ ಕೊನೆಗೆ ಮಾವ ಜವರೇಗೌಡನ ತನಕ ಹೋಯಿತು. ಮಾವನಿಗೂ ಸರಿಯಾಗಿಯೇ ಅವಾಜ್ ಹಾಕಿದ್ದಳು ಭಾವನಾ. ಇದನ್ನೆಲ್ಲಾ ಸಹಿಸಿಕೊಳ್ಳದ ಮಾವ ಈಗ ದೊಡ್ಡ ಪ್ಲಾನ್ ಮಾಡಿ ಭಾವನಾಳನ್ನು ಮನೆಯಿಂದ ಓಡಿಸಲು ಸಂಚುಹೂಡಿದ್ದಾನೆ.

37
ಷಡ್ಯಂತ್ರ ಹೂಡಿದ್ದಾನೆ ದುಷ್ಟ ಮಾವ

ಮೊದಲಿನಿಂದಲೂ ಭಾವನಾಳನ್ನು ಹೇಗಾದರೂ ಮಾಡಿ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದವರಿಗೆ ದೊಡ್ಡ ತಡೆಗೋಡೆಯಾಗಿದ್ದು ಭಾವನಾ ಗಂಡ ಸಿದ್ದೇಗೌಡ. ಹಾಗಾಗಿ ಗಂಡನೇ ಅಕೆಯನ್ನ ಆಚೆ ಹಾಕುವಂತೆ ಷಡ್ಯಂತ್ರ ಹೂಡಿದ್ದಾನೆ ದುಷ್ಟ ಮಾವ.

47
ಅಜ್ಜಿ-ಮಗಳ ಕುತಂತ್ರ

ಸದ್ಯ ಓರ್ವ ಅಜ್ಜಿ-ಮಗಳನ್ನು ರೆಡಿ ಮಾಡಿರುವ ಮಾವ ಜವರೇಗೌಡ, ಅವರ ಮೂಲಕ ಭಾವನಾಳನ್ನು ಸಿಕ್ಕಿಹಾಕಿಸಲು ತಯಾರಿ ನಡೆಸಿದ್ದಾನೆ. ಅಂತೆಯೇ ಈಗ ಭಾವನಾ ನಡೆದುಬರುವ ದಾರಿಯಲ್ಲಿ ಆ ಅಜ್ಜಿ-ಮಗಳು ಸಿಕ್ಕು ತಮ್ಮ ಗೋಳನ್ನ ಭಾವನಾ ಬಳಿ ತೋಡಿಕೊಂಡಿದ್ದಾರೆ.

57
ನಂಬಿದ ಭಾವನಾ

ಎಲ್ಲವೂ ಜವರೇಗೌಡನ ಪ್ಲಾನ್ ಪ್ರಕಾರ ನಡೆಯುತ್ತಿದೆ. ಅಜ್ಜಿ ಭಾವನಾ ಬಳಿ "ನನ್ನ ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲಾಗುತ್ತಿದೆ. ಹಾಗಾಗಿ ಕಂಪ್ಲೆಂಟ್ ಕೊಡಬೇಕು. ನಮಗೆ ಬರೆಯಲು ಬರುವುದಿಲ್ಲ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ತನ್ನ ಮಗಳು ಹೆಸರು ಭಾವನಾ ಎಂದು ಅಜ್ಜಿ ಹೇಳುತ್ತಾಳೆ" ಇದನ್ನೆಲ್ಲಾ ನಂಬುವ ಭಾವನಾ, ಕಂಪ್ಲೆಂಟ್ ಕೊಡುತ್ತಾಳೆ.

67
ಆಚೆಹಾಕ್ತನಾ ಸಿದ್ದೇಗೌಡ

ಈಗ ನೋಡಿದರೆ ಪೊಲೀಸರು ಮನೆಗೆ ಬಂದು "ನಿಮ್ಮ ಸೊಸೆ ಭಾವನಾ ನಿಮ್ಮೆಲ್ಲರ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾಳೆ" ಎಂದು ಹೇಳುತ್ತಾರೆ". ಇದನ್ನ ತಿಳಿದ ಮನೆಯವರು ಶಾಕ್ ಆಗಿದ್ದಾರೆ. ಅಂದರೆ ಸಿದ್ದೇಗೌಡ "ನಮ್ಮ ಮನೆಯವರ ಮೇಲೆ ಭಾವನಾ ಪೊಲೀಸ್‌ ಕಂಪ್ಲೆಂಟ್ ಕೊಟ್ಟಿದ್ದಾಳೆಂದು ತಿಳಿದು, ಅವಳನ್ನು ಆಚೆ ಹಾಕುತ್ತಾನೆ" ಎಂಬುದು ಇವರ ಅಭಿಪ್ರಾಯ.

77
ದೂರವಾಗ್ತಾರಾ, ಒಂದಾಗಿರುತ್ತಾರಾ?

ಹಾಗಾಗಿ ಸಹಜವಾಗಿ ವೀಕ್ಷಕರು ಮುಂದೇನಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಬೇಸರದ ವಿಷಯವೆಂದರೆ ಒಂದು ವೇಳೆ ತನ್ನ ಅಪ್ಪ-ಅಮ್ಮ ಆಡುತ್ತಿರುವ ಈ ನಾಟಕವನ್ನೆಲ್ಲಾ ಸಿದ್ದೇಗೌಡ ನಂಬಿದ್ದೇ ಆದಲ್ಲಿ ಭಾವನಾ-ಸಿದ್ದು ದೂರವಾಗುವುದಲ್ಲಿ ಸಂಶಯವೇ ಇಲ್ಲ. ಆದರೆ ವೀಕ್ಷಕರು ಹೆಚ್ಚು ಇಷ್ಟಪಡುವ ಈ ಜೋಡಿ ದೂರವಾಗ್ತಾರಾ, ಒಂದಾಗಿರುತ್ತಾರಾ? ಎಂಬುದನ್ನ ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories