Bigg Boss Kannada 12: ಗಿಲ್ಲಿಗೆನೇ ಪಂಚ್ ಕೊಟ್ಟ ವಂಶದ ಕುಡಿ ರಕ್ಷಿತಾ ಶೆಟ್ಟಿ; ನಟ ಶಾಕ್

Published : Nov 28, 2025, 03:04 PM IST

ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿಯನ್ನು 'ಹೌಸ್ ಕೀಪಿಂಗ್' ಎಂದು ಕರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ರಕ್ಷಿತಾ,  ಪಂಚ್ ನೀಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

PREV
15
ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ

ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಗಿಲ್ಲಿ ನಟ ಯಾವುದೇ ಮಾತುಗಳಿಗೆ ಆ ಕ್ಷಣದಿಂದಲೇ ರಿಯಾಕ್ಟ್ ಮಾಡೋದರಿಂದ ನೋಡುಗರಿಗೆ ಇಷ್ಟವಾಗುತ್ತದೆ. ಇದೇ ರೀತಿ ರಕ್ಷಿತಾ ಶೆಟ್ಟಿ ತಮ್ಮ ಮಾತುಗಳಿಂದಲೇ ಎದುರಾಳಿಗಳನ್ನು ರೋಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೀಗ ಗಿಲ್ಲಿ ನಟ ಅವರಿಗೆ ರಕ್ಷಿತಾ ಶೆಟ್ಟಿ ಮಾತಿನ ಪಂಚ್ ಕೊಟ್ಟಿದ್ದಾರೆ.

25
ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬಿಬಿ ಪ್ಯಾಲೇಸ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಹೌಸ್ ಕೀಪಿಂಗ್ ಕೆಲಸ ಮಾಡಿದ್ದರು. ಗಿಲ್ಲಿ ನಟ ಅವರು ಹೆಡ್ ವೇಟರ್ ಆಗಿದ್ದರು. ಇಬ್ಬರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಪಾತ್ರೆ ತೊಳೆಯುವುದು, ಮನೆ ಕ್ಲೀನಿಂಗ್ ಮಾಡೋದರಿಂದ ರಕ್ಷಿತಾ ಶೆಟ್ಟಿ ಅಧಿಕವಾಗಿ ಕಾಣಿಸಿಕೊಳ್ಳಲಿಲ್ಲ. ವೇಟರ್ ಆದ್ರು ಗಿಲ್ಲಿ ತಮ್ಮ ಮಾತುಗಳಿಂದಲೇ ಅತಿಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಟಾಸ್ಕ್ ವೇಳೆ ಗಿಲ್ಲಿ ಮತ್ತು ರಕ್ಷಿತಾ ಸಂಭಾಷಣೆಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

35
ಗಿಲ್ಲಿಗೆ ಕೀಪಿಂಗ್ ಅಲ್ಲ

ಕಿಚನ್‌ ನಲ್ಲಿರುವ ಡಸ್ಟ್‌ಬಿನ್ ತುಂಬಿದಾಗ ಧ್ರುವಂತ್ ಬಾತ್‌ರೂಮ್‌ನಲ್ಲಿರುವ ಬುಟ್ಟಿಗೆ ಹಾಕಿ ಬರುವಂತೆ ರಕ್ಷಿತಾ ಶೆಟ್ಟಿ ಅವರಿಗೆ ಹೇಳುತ್ತಾರೆ. ನಂತರ ಡಸ್ಟ್‌ಬಿನ್ ತೆಗೆದುಕೊಂಡು ರಕ್ಷಿತಾ ಶೆಟ್ಟಿ ಹೋಗುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಗಿಲ್ಲಿ ನಟ, ಏಯ್ ಹೌಸ್ ಕೀಪಿಂಗ್ ಬಾ ಇಲ್ಲಿ ಎಂದು ಕರೆಯುತ್ತಾರೆ. ಇದಕ್ಕೆ ತಿರುಗೇಟು ನೀಡಿದ ರಕ್ಷಿತಾ ಶೆಟ್ಟಿ, ನಾನು ಮನೆಗೆ ಹೌಸ್ ಕೀಪಿಂಗ್, ಗಿಲ್ಲಿಗೆ ಕೀಪಿಂಗ್ ಅಲ್ಲ ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ.

45
ಪಂಚ್‌ಗೆ ಶಾಕ್

ರಕ್ಷಿತಾ ಕೊಟ್ಟ ಪಂಚ್‌ಗೆ ಶಾಕ್ ಆದ ಗಿಲ್ಲಿ ನಟ, ನನ್ನ ವಂಶದ ಕುಡಿಯೇ ತಿರುಗಿ ಮಾತನಾಡುತ್ತಿದೆಯೆಲ್ಲಾ ಎಂದು ತಲೆ ಕರೆದುಕೊಳ್ಳುತ್ತಾ ಪೌಡರ್ ರೂಮ್‌ನತ್ತ ತೆರಳುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇಬ್ಬರಿಗೂ ಬೇರೆ ಯಾರು ಸರಿಸಾಟಿ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12 ಮನೆಯಲ್ಲಿ ಮಾಳು ಅಬ್ಬರ: ತನ್ನ ವಾದವನ್ನು ಮುಂದಿಟ್ಟು ಹೊರಟ ರಕ್ಷಿತಾ

55
ರಕ್ಷಿತಾ ಶೆಟ್ಟಿ ವಾಗ್ದಾಳಿ

ಸಿಂಕ್‌ನಲ್ಲಿ ಟಿಶ್ಯೂ ಪೇಪರ್ ಎಸೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧ್ರುವಂತ್ ಮತ್ತು ರಕ್ಷಿತಾ ನಡುವೆ ಜಗಳ ನಡೆದಿತ್ತು. ಟಿಶ್ಯೂ ಪೇಪರ್ ಎಸೆದ್ರೆ ನೀರು ಬ್ಲಾಕ್ ಆಗುತ್ತದೆ. ಇದು ನಾನ್‌ಸೆನ್ಸ್ ಕೆಲಸ. ಟಿಶ್ಯೂ ಪೇಪರ್ ಎಲ್ಲಿ ಎಸೆಯಬೇಕು ಎಂಬುವುದು ಇವರಿಗೆ ಗೊತ್ತಿಲ್ಲ ಎಂದು ರಕ್ಷಿತಾ ಶೆಟ್ಟಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: BBK 12: ಚೈತ್ರಾ ಕುಂದಾಪುರ ಮಾತಿನಿಂದ ಬಯಲಾಯ್ತು ಅತಿಥಿಗಳ ರಹಸ್ಯ! ಇದೇನಾ ಐವರ ಸೀಕ್ರೆಟ್?

Read more Photos on
click me!

Recommended Stories