ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದು, ಈ ವೇಳೆ ಅಶ್ವಿನಿ ಗೌಡ ಅವರು ಮೋಕ್ಷಿತಾ ಪೈ ಅವರ ಕಾಲನ್ನು ಒತ್ತುತ್ತಿರುವ ವಿಡಿಯೋ ವೈರಲ್ ಆಗಿದೆ. ಹಿರಿಯರಾದ ಅಶ್ವಿನಿ ಬಳಿ ಈ ರೀತಿ ಕಾಲು ಒತ್ತಿಸಿಕೊಂಡಿದ್ದಕ್ಕೆ ಮೋಕ್ಷಿತಾ ವಿರುದ್ಧ ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ಬಾಸ್ (Bigg Boss 12)ನಲ್ಲಿ ಅಶ್ವಿನಿ ಗೌಡ ಅವರ ಹವಾ ಜೋರಾಗಿಯೇ ನಡೆಯುತ್ತಿದೆ. ಅಶ್ವಿನಿ ಗೌಡ ಎಂದರೆ ಜಗಳಕ್ಕೇ ಫೇಮಸ್ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಕಮೆಂಟ್ಗಳೇ ಹೆಚ್ಚು ಬರುತ್ತಿದ್ದರೂ, ನಿಜವಾಗಿಯೂ ಅಶ್ವಿನಿ ಕ್ಯಾರೆಕ್ಟರ್ ಹೀಗಿಲ್ಲ, ಅವರು ತುಂಬಾ ಒಳ್ಳೆಯವರು ಬಿಗ್ಬಾಸ್ಗೆ ಹೋಗಿದ್ದೇ ತಪ್ಪು ಎಂದು ಅವರ ಅಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ.
26
ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ
ಅಷ್ಟಕ್ಕೂ, ಬಿಗ್ಬಾಸ್ನಲ್ಲಿ ಸದ್ಯ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಹಾವು ಮುಂಗುಸಿ ರೀತಿಯಲ್ಲಿಯೇ ವರ್ತಿಸುತ್ತಿದ್ದಾರೆ. ಒಬ್ಬರದ್ದು ಸಿಕ್ಕಾಪಟ್ಟ ಗರಂ ನೇಚರ್, ಇನ್ನೊಬ್ಬರದ್ದು ಕಾಮಿಡಿ ನೇಚರ್. ಹೀಗಾಗಿ ಇಬ್ಬರ ನಡುವೆ ತಿಕ್ಕಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಕಳೆದ ಒಂದೆರಡು ಸಂಚಿಕೆಯಿಂದ ಇವರಿಬ್ಬರಲ್ಲಿಯೂ ಫ್ರೆಂಡ್ಷಿಪ್ ಆಗಿದ್ದು, ವೀಕ್ಷಕರಿಗೆ ಖುಷಿ ಕೂಡ ಕೊಡುತ್ತಿದೆ.
36
ಮಾಜಿ ಸ್ಪರ್ಧಿಗಳ ಎಂಟ್ರಿ
ಇದರ ನಡುವೆಯೇ, ‘ಬಿಗ್ ಬಾಸ್’ ಮನೆಗೆ ಬಿಗ್ಬಾಸ್ 11ರ ಸ್ಪರ್ಧಿಗಳಾಗಿರುವ ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ರಜತ್ ಆಗಮಿಸಿದ್ದಾರೆ. ಉಗ್ರಂ ಮಂಜು ಅವರ ಮದುವೆ ಫಿಕ್ಸ್ ಆಗಿರೋ ಕಾರಣ, ಬ್ಯಾಚುಲರ್ ಪಾರ್ಟಿ ಮಾಡಲು ಬಂದಿದ್ದಾರೆ.
ಮಾಜಿ ಮತ್ತು ಹಾಲಿ ಸ್ಪರ್ಧಿಗಳ ನಡುವೆಯೂ ಮಾತಿನ ಚಕಮಕಿಯೂ ನಡೆದಿದೆ. ಆದರೆ ಇವುಗಳಲ್ಲಿ ಗಮನ ಸೆಳೆದದ್ದು, ಮೋಕ್ಷಿತಾ ಪೈ ಅವರ ಕಾಲನ್ನು ಅಶ್ವಿನಿ ಗೌಡ ಅವರು ಒತ್ತುತ್ತಿರುವುದು. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಮೋಕ್ಷಿತಾ ವಿರುದ್ಧ ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
56
ಮೋಕ್ಷಿತಾ ಕಾಲು ಮಸಾಜ್
ಸ್ಪಾ ಹೆಸರಿನಲ್ಲಿ ವೇಯ್ಟರ್ ಅಶ್ವಿನಿ ಗೌಡ ಅವರಿಂದ ಮೋಕ್ಷಿತಾ ಪೈ ಕಾಲು ಮಸಾಜ್ ಮಾಡಿಸಿಕೊಂಡಿದ್ದಾರೆ. ಅಶ್ವಿನಿ ಗೌಡ ಅವರು ತುಂಬಾ ದೊಡ್ಡವರು. ಇವರ ಬಳಿಯಿಂದ ಮೋಕ್ಷಿತಾ ಹೀಗೆ ಕಾಲನ್ನು ಒತ್ತಿಸಿಕೊಂಡಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ದೊಡ್ಡವರು, ಚಿಕ್ಕವರು ಎನ್ನುವುದನ್ನೂ ನೋಡದೇ ಈ ರೀತಿ ಮಾಡಿಸಿಕೊಳ್ಳುವುದು ಎಷ್ಟು ಸರಿ ಎಂದು ಹಲವರು ಮೋಕ್ಷಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
66
ಉತ್ತರ ಕೊಡಲಿ ಮೋಕ್ಷಿತಾ
ಹೀಗೆ ಕಾಲು ಒತ್ತಿಸಿಕೊಂಡಿದ್ದು ಏಕೆ, ಏನಾದ್ರೂ ಟಾಸ್ಕ್ ಇತ್ತಾ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಟಿವಿಯಲ್ಲಿ ಈ ದೃಶ್ಯ ವೀಕ್ಷಣೆ ಮಾಡಿರುವವರು ಇದರ ವಿಡಿಯೋ ಶೇರ್ ಮಾಡಿದ್ದು, ಟ್ರೋಲ್ ಮಾಡುತ್ತಿದ್ದಾರೆ. ಇದರ ಬಗ್ಗೆ ಮೋಕ್ಷಿತಾ ಅವರೇ ಹೊರಕ್ಕೆ ಬಂದು ಉತ್ತರ ಕೊಡಬೇಕಿದೆ ಎನ್ನುತ್ತಿದ್ದಾರೆ.