ಮದ್ವೆಯಾಗಿ 3 ತಿಂಗ್ಳು ಕಳೆದಿಲ್ಲ, ನಿತ್ಯಾ ಐದು ತಿಂಗಳ ಗರ್ಭಿಣಿ; ಸತ್ಯ ಭೇದಿಸಲು ಪ್ಲಾನ್ ಮಾಡ್ತಿದಾಳೆ ನಿಧಿ

Published : Nov 28, 2025, 12:36 PM IST

Karna serial latest episode: ಕರ್ಣನ ಬಳಿ ಅತ್ತು ಕಿರುಚಿ ಜಗಳವಾಡಿ ಬಂದು ಒಂದು ಮೂಲೆಯಲ್ಲಿ ಕುಳಿತಿರುವಾಗ ಕರ್ಣನ ಚಿಕ್ಕಮ್ಮ ಫೋನ್‌ನಲ್ಲಿ "ನಿತ್ಯಾ ಮದ್ವೆಯಾಗಿ ಮೂರು ತಿಂಗಳು. ಆದರೀಗ ಆಕೆಗೆ ಐದು ತಿಂಗಳು" ಎನ್ನುತ್ತಾಳೆ. 

PREV
17
ಕಂ ಬ್ಯಾಕ್ ಆದ ನಿಧಿ

ಇನ್ನೇನು ನಿಧಿ ಅಳುಮುಂಜಿಯಾದಳು ಎನ್ನುವಷ್ಟರಲ್ಲಿ ಗಟ್ಟಿಗಿತ್ತಿಯಾಗಿ ಮತ್ತೆ ಕಂ ಬ್ಯಾಕ್ ಆಗಿರುವುದನ್ನು ಧಾರವಾಹಿಯಲ್ಲಿ ನೋಡುತ್ತಲೇ ಇದ್ದೇವೆ. ಕಳೆದ ಎರಡು ಸಂಚಿಕೆಯಲ್ಲೂ ಹಾಗೆಯೇ ಆಗುತ್ತಿದೆ. ಆಕೆಗೆ ಕರ್ಣನ ತಮ್ಮ ಸಂಜಯ್‌ನಿಂದ ಪದೇ ಪದೇ ಹರ್ಟ್ ಆಗುತ್ತಲೇ ಇದೆ. ಸಮಯಕ್ಕೆ ಸರಿಯಾಗಿ ನಿತ್ಯಾ ಅಥವಾ ಕರ್ಣ ಅಲ್ಲಿಗೆ ಬಂದು ಆಕೆಯನ್ನ ಬಚಾವ್ ಮಾಡುತ್ತಲೇ ಇದ್ದಾರೆ.

27
ತರಾಟೆಗೆ ತೆಗೆದುಕೊಂಡ ನಿತ್ಯಾ

ನಿಧಿಗೆ ಸಹಾಯ ಮಾಡಲೆಂದು ಕರ್ಣ ಆಕೆಯ ಬೆಡ್‌ರೂಂಗೆ ಹೋಗಿದ್ದ. ಆದರೆ ನಿದ್ದೆ ಬಂದು ಅಲ್ಲೇ ಸೈಡಲ್ಲಿ ಮಲಗಿದ್ದಕ್ಕೆ ಕರ್ಣನ ಚಿಕ್ಕಪ್ಪ ಚಿಕ್ಕಮ್ಮ ಅದನ್ನೇ ಕಡ್ಡಿ ಗುಡ್ಡ ಮಾಡಿದ ಹಾಗೆ ಮಾಡ್ತಾರೆ. ಅವರಿಬ್ಬರಿಗೂ ಇಲ್ಲಸಲ್ಲದ ಸಂಬಂಧ ಕಲ್ಪಿಸ್ತಾರೆ. ಇದನ್ನು ಸಹಿಸದ ನಿತ್ಯಾ, ತಂಗಿಯ ಪರವಾಗಿ ಮಾತನಾಡಿ ಸಂಜಯ್‌ ಸಮೇತ ಎಲ್ಲರಿಗೂ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ನಿಧಿ ಒಬ್ಬ ಹುಡುಗನನ್ನ ಲವ್ ಮಾಡುತ್ತಿರುವುದಾಗಿ ಎಲ್ಲರ ಮುಂದೆ ಹೇಳ್ತಾಳೆ ನಿತ್ಯಾ.

37
ನಿತ್ಯಾಗೆ ವಾಕರಿಕೆ

ಕರ್ಣನ ಅಪ್ಪ ರಮೇಶ್ ಗ್ಯಾಂಗ್‌ ಹೊರತುಪಡಿಸಿ ಅಜ್ಜಿಯಂದಿರು, ನಿತ್ಯಾಗೆ ಕರ್ಣನ ಲವರ್ ಯಾರೆಂದು ತಿಳಿದುಕೊಳ್ಳಬೇಕೆಂದು ಅನ್ನುವಷ್ಟರಲ್ಲಿ ಈಗ ನಿತ್ಯಾನೇ ಪೇಚಿಗೆ ಸಿಲುಕಿಕೊಂಡಿದ್ದಾಳೆ. ಹೌದು. ನಿತ್ಯಾ ಪ್ರಗ್ನೆಂಟ್ ಆಗಿರುವುದರಿಂದ ಅಡುಗೆ ಮನೆಯಲ್ಲಿನ ಒಗ್ಗರಣೆ ಪರಿಮಳ ಕೇಳಿ ಅವಳಿಗೆ ಹೊಟ್ಟೆ ತೊಳೆಸಿದಂತಾಗಿದೆ. ಅದಕ್ಕೆ ಅವಳಿಗೆ ವಾಕರಿಗೆ ಬಂದಂತಾಗಿದೆ.

47
ನಿಧಿ ಶಾಕ್

ಇಷ್ಟು ಸಿಕ್ಕ ಮೇಲೆ ಸುಮ್ಮನಿರುತ್ತಾಳಾ ಕರ್ಣನ ಚಿಕ್ಕಮ್ಮ, "ಅಯ್ಯೋ ನನಗೂ ಹೀಗೆ ಆಗುತ್ತಿತ್ತು. ಆ ನಂತರ ಪರೀಕ್ಷೆ ಮಾಡಿಸಿದಾಗ ಪ್ರಗ್ನೆಂಟ್ ಎಂಬುದು ಗೊತ್ತಾಯ್ತು ಅಂದಿದ್ದಾಳೆ. ಇದನ್ನ ಅಲ್ಲಿಯೇ ಇದ್ದ ನಿಧಿ, ಕರ್ಣ ಇಬ್ಬರೂ ಕೇಳಿಸಿಕೊಳ್ಳುತ್ತಾರೆ. ಕರ್ಣನಿಗೆ ವಿಷಯ ಎಲ್ಲರಿಗೂ ಗೊತ್ತಾಗುವ ಸಮಯದ ಬಂತು ಎಂದು ಆತಂಕಗೊಂಡರೆ ನಿಧಿಗೆ ಒಂದು ರೀತಿ ಶಾಕ್ ಆಗುತ್ತದೆ.

57
ಪ್ರಗ್ನೆಂಟ್ ವಿಚಾರ ರಿವೀಲ್

ಈಗ ಆಸ್ಪತ್ರೆಯಲ್ಲೂ ನಿತ್ಯಾ ವೈದ್ಯರ ಬಳಿ ಚೆಕ್‌ ಮಾಡಿಸಿಕೊಂಡು ಹೊರಬರುವಾಗ ಅಕ್ಕ ಪ್ರಗ್ನೆಂಟ್ ಎಂಬ ವಿಚಾರ ನಿಧಿಗೆ ತಿಳಿಯುತ್ತದೆ. ಕರ್ಣ ಬೇರೆ ವೈದ್ಯರ ಬಳಿ ನಿತ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತಾನೇ ತಂದೆ ಎಂದು ಹೇಳಿಕೊಂಡಿದ್ದರಿಂದ ನಿಧಿಗೆ ಶಾಕ್ ಮೇಲೆ ಶಾಕ್. ಏತನ್ಮಧ್ಯೆ ಕರ್ಣನ ಚಿಕ್ಕಮ್ಮ ಫೋನ್‌ನಲ್ಲಿ ಮಾತನಾಡುವುದನ್ನ ಕೇಳಿಸಿಕೊಳ್ಳುತ್ತಾಳೆ ನಿಧಿ.

67
ಮದ್ವೆಯಾಗಿ ಮೂರೇ ತಿಂಗಳು

ಇದಕ್ಕೂ ಮುನ್ನ ನಿತ್ಯಾ ಪ್ರಗ್ನೆಂಟ್ ಆಗುವುದಕ್ಕೆ ಕಾರಣ ಕರ್ಣ ಎಂದು ತಪ್ಪು ತಿಳಿಯುವ ನಿಧಿ, ಕರ್ಣನ ಬಳಿ ಅತ್ತು ಕಿರುಚಿ ಜಗಳವಾಡಿ ಬಂದು ಒಂದು ಮೂಲೆಯಲ್ಲಿ ಕುಳಿತಿರುವಾಗ ಕರ್ಣನ ಚಿಕ್ಕಮ್ಮ ಫೋನ್‌ನಲ್ಲಿ "ನಿತ್ಯಾ ಮದ್ವೆಯಾಗಿ ಮೂರು ತಿಂಗಳು. ಆದರೀಗ ಆಕೆಗೆ ಐದು ತಿಂಗಳು" ಎನ್ನುತ್ತಾಳೆ. ಇದನ್ನು ಕೇಳಿಸಿಕೊಳ್ಳುವ ನಿಧಿಗೆ ಹೌದಲ್ವಾ "ಅಕ್ಕ ಮದ್ವೆಯಾಗಿ ಮೂರು ತಿಂಗಳಾಗಿದೆ" ಇದೆಲ್ಲಾ ಹೇಗೆ ಸಾಧ್ಯ ಎಂದು ಯೋಚಿಸುತ್ತಾ ಕೂರುತ್ತಾಳೆ.

77
ಸತ್ಯ ಹುಡುಕುತ್ತಾಳಾ?

ಅಲ್ಲಿಗೆ ಮಾರಿಗುಡಿಗೆ ಹೋದಾಗ ದೇವಿ ನಿಧಿ ಕಿವಿಯಲ್ಲಿ ಹೇಳಿದ್ದನ್ನ ಆಕೆ ನಿಜ ಮಾಡ್ತಾಳಾ ಎಂಬುದನ್ನ ನೋಡಬೇಕಿದೆ. ತಾನಿದ್ದ ಜಾಗದಿಂದಲೇ ಸತ್ಯ ಏನೆಂದು ಹುಡುಕಿ, ಅಕ್ಕನನ್ನ ತೇಜಸ್‌ ಜೊತೆ ಒಂದು ಮಾಡಿ, ರಮೇಶ್ ಗ್ಯಾಂಗ್ ಮಾಡುವ ಕುತಂತ್ರ ಹಿಮ್ಮೆಟ್ಟಿ ಕರ್ಣನನ್ನ ಹೇಗೆ ವರಿಸುತ್ತಾಳೆ ಎಂಬುದನ್ನ ಕಾದು ನೋಡಬೇಕಿದೆ.

Read more Photos on
click me!

Recommended Stories