ಬಿಗ್ ಬಾಸ್ ಮನೆಗೆ ಬಂದು ಗುಣಗಳನ್ನೇ ಬದಲಿಸಿಕೊಂಡ ಸ್ಪರ್ಧಿ; ನಾನು ವಿಲನ್ ಆಗ್ತೀನಿ ಸಪೋರ್ಟ್ ಮಾಡಿ ಎಂದ ಮಹಾಶಯ!

Published : Jan 15, 2026, 04:18 PM IST

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಯೊಬ್ಬರು ತಾನು ಸಿನಿಮಾಗಳಲ್ಲಿ ದೊಡ್ಡ ವಿಲನ್ ಆಗ್ತೇನೆ. ಆಗಲೂ ನೀವು ನನಗೆ ಬೆಂಬಲಿಸಬೇಕು ಎಂದು ಬಿಗ್ ಬಾಸ್ ವೀಕ್ಷಕರ ಮುಂದೆ ಬೆಂಬಲವನ್ನು ಕೋರಿದ್ದಾರೆ. ಆದರೆ ಈ ವ್ಯಕ್ತಿ ಮನೆಯೊಳಗೆ ಬರುವಾಗ ಇದ್ದ ಗುಣಗಳನ್ನು ಬದಲಿಸಿಕೊಂಡಿದ್ದಾರೆ.

PREV
18

ಬಿಗ್ ಬಾಸ್ ಸೀಸನ್ 12 ಇನ್ನೇನು ಮೂರ್ನಾಲ್ಕು ದಿನಗಳಲ್ಲಿ ಮುಕ್ತಾಯವಾಗಲಿದೆ. ಆದರೆ, ಈ ಸೀಸನ್‌ನ ಒಬ್ಬ ಸ್ಪರ್ಧಿ ನಾನು ದೊಡ್ಡ ವಿಲನ್ ಆಗ್ತೀನಿ. ನನಗೆ ಬಿಗ್ ಬಾಸ್ ಸ್ಪರ್ಧೆಗೆ ಬಂದಾಗ ಎಷ್ಟು ಪ್ರೀತಿ ತೋರಿಸಿದ್ದೀರೋ, ಅಷ್ಟೇ ಪ್ರೀತಿಯನ್ನು ವಿಲನ್ ಆದಾಗಲೂ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

28

ಹೀಗೆ, ನಾನು ವಿಲನ್ ಆಗ್ತೀನೆಂದು ಹೇಳಿದ ಸ್ಪರ್ಧಿ ಬೇರಾರೂ ಅಲ್ಲ, ಅಜಾನುಬಾಹು ಹಾಗೂ ಕ್ರೀಡಾಪಟು ಮ್ಯೂಟೆಂಟ್ ರಘು ಅವರು. ಫಿನಾಲೆಗೆ ತಲುಪಿದ ಟಾಪ್ 7 ಸ್ಪರ್ಧಿಗಳನ್ನು ಅಭಿಮಾನಿಗಳ ಮುಂದೆ ಮಾತನಾಡಲು ಬಿಟ್ಟಾಗ ರಘು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

38

ನಾನು ರಾಜ್ಯಕ್ಕಾಗಿ ಒಂದು ಮೆಡಲ್ ಗೆದ್ದುಕೊಂಡು ಬಂದಾಗ ಫ್ಲೈಟ್ ಇಳಿದು ಬಂದರೆ ಒಬ್ಬರೇ ಒಬ್ಬ ಅಭಿಮಾನಿಯೂ ನನ್ನನ್ನು ಗುರುತಿಸಲಿಲ್ಲ. ಒಬ್ಬ ಅಭಿಮಾನಿ ಬಂದು ನನ್ನ ಬಳಿ ಸೆಲ್ಫಿ ಕೇಳಲಿಲ್ಲವೆಂಬ ಕೊರಗಿತ್ತು. ಆದರೆ, ಬಿಗ್‌ ಬಾಸ್ ಮನೆಗೆ ಬಂದಾಕ್ಷಣ ಲಕ್ಷಾಂತರ, ಅಭಿಮಾನಿಗಳು ನನ್ನನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿ ನಿಮ್ಮ ಅಭಿಮಾನ ನೋಡಿ ನಾನು ತುಂಬಾ ಸಂತಸಗೊಂಡಿದ್ದೇನೆ.

48

ನಾನು ಹೊರಗೆ ಬಂದು ಸಿನಿಮಾದಲ್ಲಿ ದೊಡ್ಡ ವಿಲನ್ ಆಗ್ತೇನೆ. ನೀವೆಲ್ಲರೂ ನಾನು ಸಿನಿಮಾ ವಿಲನ್ ಆದಾಗಲೂ ಈಗ ಕೊಟ್ಟಿರುವುದಕ್ಕಿಂತ ಜಾಸ್ತಿ ಪ್ರೀತಿಯನ್ನೇ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ರಘು ಅವರು ಸ್ವಲ್ಪ ಹೆಸರನ್ನು ಕೂಡ ಗಳಿಸಿದ್ದಾರೆ.

58

ರಘು ಎಂದಾಕ್ಷಣ ಎಲ್ಲರ ಮನಸ್ಸಿಗೂ ಬರುವುದು ಇವರೊಬ್ಬ ವೇಟ್ ಲಿಫ್ಟರ್, ಬಾಡಿ ಬಿಲ್ಡರ್, ಜಿಮ್ ಟ್ರೇನರ್ ಎಂದೇ ಹೇಳುತ್ತೇವೆ. ಆದರೆ, ಅವರಲ್ಲಿಯೂ ಒಂದು ಮುಗ್ಧ ಮನಸ್ಸಿದೆ ಎಂಬುದು ಬಹುತೇಕರಿಗೆ ಗೊತ್ತೇ ಇರಲಿಲ್ಲ. ಸ್ವತಃ ತನ್ನಲ್ಲೊಂದು ಮೃದುವಾದ ಮನಸ್ಸಿದೆ ಎಂಬುದು ಸ್ವತಃ ರಘು ಅವರಿಗೇ ಗೊತ್ತಿರಲಿಲ್ಲ.

68

ಪ್ರತಿಯೊಂದು ಕೆಲಸಕ್ಕೂ ಹೆಂಡತಿ ಮೇಲೆ ಡಿಪೆಂಡ್ ಆಗುವುದು, ಹೆಂಡ್ತಿ-ಮಗನೊಂದಿಗೆ ಹೆಚ್ಚು ಮಾತನಾಡದೇ ಇರುವುದು, ಯಾರನ್ನೂ ಅತಿಯಾಗಿ ಹತ್ತಿರಕ್ಕೆ ಸೇರಿಸದೇ ದೂರವಿಡಿದು, ಸ್ವಲ್ಪ ತಪ್ಪಾದರೂ ದೊಡ್ಡ ಅನಾಹುತವೇ ಆಗಿದೆ ಎಂಬಂತೆ ಕೋಪ ಮಾಡಿಕೊಳ್ಳುವುದು ಇವೆಲ್ಲವೂ ರಘು ಅವರ ಗುಣಗಳು ಆಗಿದ್ದವು.

78

ಆದರೆ, ಬಿಗ್ ಬಾಸ್ ಮನೆಯೊಳಗೆ ಹೋದಾಗ ಗಿಲ್ಲಿ ನಟ ಬೇಡವೆಂದರೂ ಮೈಮೇಲೆ ಬೀಳುವುದು, ಎಲ್ಲದಕ್ಕೂ ಒಂದು ಮಿತಿ ಇರುತ್ತೆ ಎಂದು ಹೇಳಿದರೂ ಮಿತಿಮೀರಿ ರೇಗಿಸುವುದು, ಊಟದ ವಿಚಾರಕ್ಕೆ ಕೀಟಲೆ ಮಾಡುವುದು ಹಾಗೂ ರಕ್ಷಿತಾ ಶೆಟ್ಟಿ ಅವರು ರಘು ಅವರಿಗೋಸ್ಕ ತಮ್ಮ ಸ್ವಂತ ಸಹೋದರ ಎಂಬಂತೆ ಪ್ರೀತಿ-ಕಾಳಜಿ ತೋರಿಸುವುದು ಎಲ್ಲವೂ ಮ್ಯೂಟೆಂಟ್ ರಘು ಅವರ ಗುಣಗಳನ್ನು ಬದಲಾಯಿಸಿವೆ.

88

ಇದೀಗ ತನ್ನ ಎಲ್ಲ ಅನುಭವಗಳನ್ನು ಪಡೆದ ರಘು ತುಂಬಾ ಬದಲಾಗಿದ್ದಾರೆ. ತನ್ನ ಮಗನ ಮೇಲೆ ಪ್ರೀತಿ-ಕಾಳಜಿ ಹೆಚ್ಚಾಗಿದೆ. ಜೊತೆಗೆ, ತನಗೆ ಸ್ವಂತ ಸಹೋದರಿಯಿದ್ದರೂ ಅವರಿಂದ ಸಿಗದ ಪ್ರೀತಿಯನ್ನ ಕಂಡ ರಘು, ಇನ್ನುಮುಂದೆ ತಾನೂ ರಕ್ಷಿತಾ ಶೆಟ್ಟಿಯಂತೆ ಹೊಸ ಯೂಟ್ಯೂಬ್ ಚಾನೆಲ್ ಮಾಡಿ ಅದರಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories