ಅಶ್ವಿನಿ ಗೌಡ ಸೇವ್ ಆಗಿದ್ದಕ್ಕೆ ಗಿಲ್ಲಿ ನಟ ಹೇಳಿದ್ದು ಹೀಗೆ; ರಾಜಮಾತೆಯ ಭವಿಷ್ಯ ನುಡಿದ ರಕ್ಷಿತಾ ಶೆಟ್ಟಿ

Published : Dec 03, 2025, 12:05 PM IST

ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಅಶ್ವಿನಿ ಗೌಡ ಸೇವ್ ಆಗಿದ್ದಾರೆ. ಗಿಲ್ಲಿ ನಟ ಅವರ ತಮಾಷೆ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ವಾರ ಅಶ್ವಿನಿ ಗೌಡ ಖಚಿತವಾಗಿ ನಾಮಿನೇಟ್ ಆಗುತ್ತಾರೆ ಎಂದು ರಕ್ಷಿತಾ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

PREV
15
ನಾಮಿನೇಷನ್ ಪ್ರಕ್ರಿಯೆ

ಈ ಬಾರಿ ಅಶ್ವಿನಿ ಗೌಡ ಅವರು ನಾಮಿನೇಷನ್ ಪ್ರಕ್ರಿಯೆಯಿಂದ ಸೇವ್ ಆಗಿದ್ದಾರೆ. ಈ ಬಾರಿ ಯಾವ ಸ್ಪರ್ಧಿಯೂ ಅಶ್ವಿನಿ ಗೌಡ ಹೆಸರು ತೆಗೆದುಕೊಳ್ಳಲಿಲ್ಲ. ಈ ಬಾರಿಯ ನಾಮಿನೇಷನ್ ಎರಡು ದಿನ ಪ್ರಸಾರವಾಗಿದ್ದು, ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿತ್ತು. ಬಹುತೇಕ ಸ್ಪರ್ಧಿಗಳು ಗಿಲ್ಲಿ ಅವರ ಅತಿಯಾದ ತಮಾಷೆ ತಮಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

25
ಏನ್ರಿ ಸೇವ್ ಆದ್ರಿ ಮೇಡಮ್

ಹಳೆ ಸ್ಪರ್ಧಿಗಳ ಪೈಕಿ ರಘು ಮತ್ತು ಅಶ್ವಿನಿ ಗೌಡ ಸೇವ್ ಆದ್ರೆ, ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಸೇವ್ ಆಗಿದ್ದಾರೆ. ರಾಶಿಕಾ ಶೆಟ್ಟಿ, ಧ್ರುವಂತ್, ಮಾಳು, ಸೂರಜ್, ಸ್ಪಂದನಾ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಅಶ್ವಿನಿ ಗೌಡ ಅವರ ಮುಂದೆ ಏನ್ರಿ ಸೇವ್ ಆದ್ರಿ ಮೇಡಮ್ ಎಂದು ಹೇಳಿದ್ದಾರೆ.

35
ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ

ಏನ್ರೀ ಸುಮ್ಮನೆ ಇದ್ದು ಸೇವ್ ಆದ್ರಿ. ನಾನು ಎಲ್ಲರ ಬಗ್ಗೆ ಮಾತನಾಡಿ ಸತ್ತೆ. ಸುಮ್ಮನೇ ಇದ್ದಿದ್ರೆ ಸೇಫ್ ಆಗುತ್ತೆ ಎಂದು ಗಿಲ್ಲಿ ನಟ ಹೇಳಿದ್ದಾರೆ. ಬಿಗ್‌ಬಾಸ್ ಶೋ ಆರಂಭವಾದ ದಿನದಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಎದುರಾಳಿಗಳಂತೆ ಕಾಣಿಸುತ್ತಾ ಬಂದಿದ್ದಾರೆ. ಏಳನೇ ವಾರದಲ್ಲಿ ಸುದೀಪ್ ಅವರ ಸಲಹೆಯಂತೆ ಅಶ್ವಿನಿ ಗೌಡ ತಮ್ಮ ಆಟ ಬದಲಿಸಿಕೊಂಡಿದ್ದಾರೆ.

45
ನಾಮಿನೇಷನ್

ಇತ್ತ ನಾಮಿನೇಷನ್ ಮುಗಿಯುತ್ತಿದ್ದಂತೆ ಗಿಲ್ಲಿ ನಟ ಎಲ್ಲರೊಂದಿಗೆ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಗಿಲ್ಲಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಿತಾ ಶೆಟ್ಟಿ, ನನ್ನ ಫ್ರೆಂಡ್ ಅಂದ್ರೆ ಮಾಳು ಅಣ್ಣ. ಗಿಲ್ಲಿ ನೀವು ಸೆಲ್ಫಿಶ್. ನಿಮ್ಮ ಜೊತೆಯಲ್ಲಿರೋರು ನಂಬಲು ಆಗಲ್ಲ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ. ಮುಂದುವರಿದು ಮುಂದಿನ ವಾರ ಅಶ್ವಿನಿ ಮೇಡಂ ನಾಮಿನೇಟ್ ಆಗೋದು ಖಚಿತ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: BBK 12: ಜಿದ್ದಾಜಿದ್ದಿನ ಆಟದಲ್ಲಿ ಬಯಲಾಯ್ತು ಗಿಲ್ಲಿ ಮೋಸದಾಟ; ಚೀಪ್ ಗಿಮಿಕ್ ಎಂದ ವೀಕ್ಷಕರು

55
ರಕ್ಷಿತಾ ಭವಿಷ್ಯ

ಈ ವಾರ ಅಶ್ವಿನಿ ಮೇಡಂ ಸೇಫ್ ಆಗಿದ್ದಾರೆ. ಮುಂದಿನ ವಾರ ಜಾನ್ವಿ ಅವರು ಹೋದ್ಮೇಲೆ ನೀವು ಸೈಲೆಂಟ್ ಆಗಿದ್ದೀರಿ. ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಕಾರಣವನ್ನು ನೀಡಿ ಅಶ್ವಿನಿ ಮೇಡಂ ಅವರನ್ನು ನಾಮಿನೇಟ್ ಮಾಡ್ತಾರೆ ಎಂದು ರಕ್ಷಿತಾ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕೊನೆಗೂ ವಂಶದ ಕುಡಿ ಬೆನ್ನಿಗೆ ಚೂರಿ ಇರಿದ ಗಿಲ್ಲಿ ನಟ; ಕಾರಣ ಕೊಟ್ಟಿದ್ದು ಸಮಾಧಾನ ಆಯ್ತಾ?

Read more Photos on
click me!

Recommended Stories