ಗಿಲ್ಲಿ ನಟ ಗೆದ್ರೆ ವಿಶೇಷತೆ ಇಲ್ಲ, ಆದ್ರೆ ಈ ಸ್ಪರ್ಧಿ ಗೆದ್ರೆ ಇತಿಹಾಸ ಎಂದ ಆರ್‌ಜೆ ಅಮಿತ್

Published : Dec 03, 2025, 10:38 AM IST

ಕನ್ನಡ ಬಿಗ್‌ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಗೆಲ್ಲುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಎಲಿಮಿನೇಟ್ ಆದ ಸ್ಪರ್ಧಿ ಆರ್‌ಜೆ ಅಮಿತ್, ಗಿಲ್ಲಿ ಗೆದ್ರೆ ವಿಶೇಷತೆ ಇಲ್ಲ, ಆದ್ರೆ ಈ ಸ್ಪರ್ಧಿ ಗೆದ್ರೆ ಇತಿಹಾಸ ಆಗುತ್ತೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

PREV
16
ಕನ್ನಡ ಬಿಗ್‌ಬಾಸ್ ಸೀಸನ್ 12

ಕನ್ನಡ ಬಿಗ್‌ಬಾಸ್ ಸೀಸನ್ 12 ಒನ್‌ಮ್ಯಾನ್ ಶೋ ಆಗಿದೆ ಎಂಬುವುದು ಹಲವರ ಅಭಿಪ್ರಾಯವಾಗಿದೆ. ಮತ್ತೊಂದೆಡೆ ಗಿಲ್ಲಿ ನಟ ಅವರೇ ಸೀಸನ್ ವಿನ್ನರ್ ಎಂದು ಬಹುತೇಕರು ಹೇಳುತ್ತಿದ್ದಾರೆ. ಗಿಲ್ಲಿ ನಟ ಅಭಿಮಾನಿಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್‌ ಪೇಜ್ ಕ್ರಿಯೇಟ್ ಮಾಡ್ಕೊಂಡು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಸೀಸನ್ 12ರ ಸ್ಪರ್ಧಿಯಾಗಿದ್ದ ಆರ್‌ಜೆ ಅಮಿತ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

26
ಆರ್‌ಜೆ ಅಮಿತ್

ಆರ್‌ಜೆ ಅಮಿತ್ ಸೀಸನ್ 12ರ ಸ್ಪರ್ಧಿಯಾಗಿದ್ದು, ಮೊದಲ ವಾರವೇ ಮನೆಯಿಂದ ಹೊರಗೆ ಬಂದಿದ್ದಾರೆ. ಕರಿಬಸಪ್ಪ ಅವರೊಂದಿಗೆ ಜಂಟಿಯಾಗಿ ಅಮಿತ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಜಂಟಿಯಾಗಿಯೇ ಎಲಿಮಿನೇಟ್ ಆಗಿದ್ದರು. ಇದೀಗ ಯುಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಆರ್‌ಜೆ ಅಮಿತ್, ವಿನ್ನರ್ ಯಾರು ಮತ್ತು ಯಾಕೆ ಆಗಬೇಕೆಂದು ತಮ್ಮ ವೈಯಕ್ತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

36
ಚೆನ್ನಾಗಿದೆ ಗಿಲ್ಲಿ ಆಟ

ಬಿಗ್‌ಬಾಸ್ ಸೀಸನ್‌ 12ರಲ್ಲಿ ಗಿಲ್ಲಿ ನಟ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾರೆ. ಹಾಗಾಗಿ ಗಿಲ್ಲಿ ಗೆದ್ರೆ ನನಗೆ ಖುಷಿ. ಆದ್ರೆ ರಕ್ಷಿತಾ ಶೆಟ್ಟಿ ಗೆಲ್ಲಬೇಕು ಅನ್ನೋದು ನನ್ನ ಆಸೆ. ರಕ್ಷಿತಾ ಶೆಟ್ಟಿ ಗೆದ್ದರೆ ಚೆನ್ನಾಗಿರುತ್ತದೆ. ಗೆಲುವು ಅನ್ನೋದು ಅವರ ಆಟದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರ್‌ಜೆ ಅಮಿತ್ ಹೇಳುತ್ತಾರೆ.

46
ಹೊಸಬರಿಗೆ ಅವಕಾಶ

ರಕ್ಷಿತಾ ಶೆಟ್ಟಿ ಯಾವುದೇ ಟಿವಿ ಹಿನ್ನೆಲೆಯಿಂದ ಬಂದಿಲ್ಲ. ಬಿಗ್‌ಬಾಸ್ ರಿಯಾಲಿಟಿ ಶೋಗೆ ಹೆಚ್ಚಾಗಿ ಕಿರುತೆರೆಯ ಕಲಾವಿದರು ಬರುತ್ತಾರೆ. ಬೇರೆ ಬೇರೆ ಕೆಟಗರಿಯಿಂದ ಸ್ಪರ್ಧಿಗಳು ಬರೋದು ಕಡಿಮೆ. ಆರ್‌ಜೆಯಾಗಿ ನಾನು ಹೋಗಿದ್ದೆ. ಅತ್ಯಧಿಕವಾಗಿ ಸೀರಿಯಲ್ ಕಲಾವಿದರೇ ಬಿಗ್‌ಬಾಸ್‌ನಲ್ಲಿರುತ್ತಾರೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡಬೇಕಾಗುತ್ತೆ ಎಂದು ಅಮಿತ್ ಹೇಳಿದ್ದಾರೆ.

56
ರಕ್ಷಿತಾ ಯಾಕೆ ಗೆಲ್ಲಬೇಕು?

ರಕ್ಷಿತಾ ಶೆಟ್ಟಿ ಯಾವುದೇ ಟಿವಿ ಹಿನ್ನೆಲೆಯಿಂದ ಬರದಿದ್ದರೂ ತಮ್ಮ ಆಟದಿಂದ ಇನ್ನು ಬಿಗ್‌ಬಾಸ್ ಮನೆಯಲ್ಲಿದ್ದಾರೆ. ರಕ್ಷಿತಾ ನಿಮಗೆ ಇಷ್ಟವಾಗಬಹುದು ಅಥವಾ ಅಗದೇ ಇರಬಹುದು. ರಕ್ಷಿತಾ ಅವರಿಗೊಂದು ಒಳ್ಳೆಯ ವೇದಿಕೆ ಸಿಕ್ಕಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಬೆಳೆಯುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಗೆದ್ದರೆ ನನಗೆ ತುಂಬಾ ಖುಷಿಯಾಗುತ್ತದೆ.

ಇದನ್ನೂ ಓದಿ: BBK 12: ಜಿದ್ದಾಜಿದ್ದಿನ ಆಟದಲ್ಲಿ ಬಯಲಾಯ್ತು ಗಿಲ್ಲಿ ಮೋಸದಾಟ; ಚೀಪ್ ಗಿಮಿಕ್ ಎಂದ ವೀಕ್ಷಕರು

66
ಹಲವರಿಗೆ ಸ್ಪೂರ್ತಿ

ರಕ್ಷಿತಾ ಶೆಟ್ಟಿ ಅವರ ಗೆಲುವು ಹೊಸಬರಿಗೆ ಸ್ಪೂರ್ತಿಯನ್ನುಂಟು ಮಾಡುತ್ತೆ. ಸಾಮಾನ್ಯ ಜನರಲ್ಲಿಯೂ ಒಂದು ಹೊಸ ಜೋಶ್ ಕೊಡಿಸುತ್ತದೆ. ಈ ಹುಡುಗಿ ಹೋಗಿ ಬಿಗ್‌ಬಾಸ್ ಗೆದ್ದಿದ್ದಾಳೆ ಅಂದ್ರೆ ನಾವು ಏನಾದ್ರೂ ಮಾಡಬೇಕು ಅನ್ನೋ ಛಲ ಹುಟ್ಟು ಹಾಕುತ್ತದೆ. ರಕ್ಷಿತಾ ಶೆಟ್ಟಿ ಗೆಲುವು ಒಂದು ಉದಾಹರಣೆ ಸೆಟ್ ಮಾಡಿದಂತಾಗುತ್ತದೆ. ಸಾಮಾನ್ಯ ಹುಡುಗಿ ಬಿಗ್‌ಬಾಸ್ ಗೆದ್ರೆ ಹಿಸ್ಟರಿ ಕ್ರಿಯೇಟ್ ಆಗುತ್ತೆ ಎಂದು ಅಮಿತ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ವಂಶದ ಕುಡಿ ಬೆನ್ನಿಗೆ ಚೂರಿ ಇರಿದ ಗಿಲ್ಲಿ ನಟ; ಕಾರಣ ಕೊಟ್ಟಿದ್ದು ಸಮಾಧಾನ ಆಯ್ತಾ?

Read more Photos on
click me!

Recommended Stories