'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ, ಬಿಗ್‌ಬಾಸ್‌ಗೆ ಹೋಗಿದ್ದ ಕಾರಣಕ್ಕೆ ಸತ್ತುಹೋಗಿದ್ದ ಬಂಗಾರಮ್ಮನ ಪಾತ್ರವು ಇದೀಗ ಸುಮಾಳ ಮದುವೆಯಲ್ಲಿ ಅಚ್ಚರಿಯ ರೀತಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಕಂಠಿಯು ಆಕೆಯ ಖುರ್ಚಿಯನ್ನು ಮದುವೆ ಮಂಟಪಕ್ಕೆ ತರುವ ಮೂಲಕ, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಒಂದು ಸಮಯದಲ್ಲಿ ಟಾಪ್ 1ನಲ್ಲಿತ್ತು. ಆದರೆ ಕ್ರಮೇಣ ಸ್ನೇಹಾ ಪಾತ್ರಧಾರಿಯಾಗಿರುವ ಸಂಜನಾ ಬುರ್ಲಿ ಸೀರಿಯಲ್ ಬಿಟ್ಟಿದ್ದರಿಂದ ಆ ಪಾತ್ರವನ್ನು ಸಾಯಿಸಿದಾಗಲೇ ಈ ಸೀರಿಯಲ್ ಡೌನ್ ಆಗಲು ಶುರುವಾಯಿತು. ಕೊನೆಗೆ ಧಾರಾವಾಹಿಯಲ್ಲಿ ಏನೇನೋ ಸರ್ಕಸ್ ನಡೆಯುತ್ತಲೇ ಇದೆ.
26
ಬಿಗ್ಬಾಸ್ನಿಂದ ಸೀರಿಯಲ್ಗೆ ಪೆಟ್ಟು
ಇದರ ಮಧ್ಯೆಯೇ, ಮತ್ತೊಬ್ಬ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಬಂಗಾರಮ್ಮನ ಪಾತ್ರವನ್ನೂ ಸಾಯಿಸಲಾಯಿತು. ಇದಕ್ಕೆ ಕಾರಣ, ಬಂಗಾರಮ್ಮ ಪಾತ್ರ ಮಾಡುತ್ತಿದ್ದ ಮಂಜು ಭಾಷಿಣಿ ಅವರು ಬಿಗ್ಬಾಸ್ 12 (Bigg Boss 12)ಗೆ ಎಂಟ್ರಿ ಕೊಟ್ಟಿದ್ದು!
36
ಬಂಗಾರಮ್ಮನ ಸಾವು
ಅವರು ಕೆಲವೇ ದಿನಗಳಲ್ಲಿ ಬಿಗ್ಬಾಸ್ನಿಂದ ಹೊರಕ್ಕೆ ಬಂದರು. ಆದರೆ, ಅದಾಗಲೇ ಅವರ ಸಾಯುವ ಶೂಟಿಂಗ್ ಎಲ್ಲಾ ನಡೆದಿದ್ದರಿಂದ ಅವರು ಹೊರಕ್ಕೆ ಬಂದು ವಾಪಸ್ ಸೀರಿಯಲ್ಗೆ ಸೇರುವ ಸಾಧ್ಯತೆ ಇದ್ದರೂ, ಎಲ್ಲ ಸೀನ್ಗಳನ್ನು ಮೊದಲೇ ಶೂಟ್ ಮಾಡಿದ್ದರಿಂದ ಅನಿವಾರ್ಯವಾಗಿ ಆ ಪಾತ್ರವನ್ನು ಸಾಯಿಸಲಾಯಿತು.
ಇದೀಗ ಪುಟ್ಟಕ್ಕನ ಕಿರಿಯ ಮಗಳು ಸುಮಾಳ ಮದುವೆ ಸಂಭ್ರಮ ನಡೆಯುತ್ತಿದೆ. ಭರ್ಜರಿ ಟ್ವಿಸ್ಟ್ ಒಂದು ಈ ಮದುವೆಯಲ್ಲಿ ಸಿಕ್ಕಿದೆ. ಅದೇನೆಂದರೆ, ಸತ್ತು ಚಿತೆ ಏರಿದ್ದ ಬಂಗಾರಮ್ಮ ಅರ್ಥಾತ್ ಮಂಜು ಭಾಷಿಣಿ ಮತ್ತೊಮ್ಮೆ ಪ್ರತ್ಯಕ್ಷ ಆಗಿದ್ದಾರೆ!
56
ಬಂಗಾರಮ್ಮನ ಖುರ್ಚಿ
ಹಾಗೆಂದು ಸೀರಿಯಲ್ನಲ್ಲಿ, ಬಂಗಾರಮ್ಮ ಜೀವಂತವಾಗಿ ಬರಲಿಲ್ಲ. ಆದರೆ ಬಂಗಾರಮ್ಮನ ಅನುಪಸ್ಥಿತಿ ಕಾಣಬಾರದು ಎನ್ನುವ ಕಾರಣಕ್ಕೆ ಆಕೆ ಬಳಸುತ್ತಿರುವ ಖುರ್ಚಿಯನ್ನು ಮದುವೆಯ ದಿನ ತಂದು ಇಟ್ಟಿದ್ದಾನೆ ಕಂಠಿ. ಆದರೆ ಅದರ ಮೇಲೆ ಬಂಗಾರಮ್ಮ ಕುಳಿತಿರುವಂತೆ ತೋರಿಸಲಾಗಿದೆ.
66
ಅಭಿಮಾನಿಗಳ ಖುಷಿ
ಒಟ್ಟಿನಲ್ಲಿ ಬಂಗಾರಮ್ಮನ ಪಾತ್ರಕ್ಕೆ ಇರುವ ತೂಕ ಕಡಿಮೆಯಾಗಬಾರದು ಎನ್ನುವ ಕಾರಣಕ್ಕೆ ಆಕೆಯ ಉಪಸ್ಥಿತಿ ಮದುವೆಯಲ್ಲಿ ಇರುವಂತೆ ತೋರಿಸಲಾಗಿದ್ದು, ಮತ್ತೊಮ್ಮೆ ನಟಿ ಮಂಜು ಭಾಷಿಣಿ ಸೀರಿಯಲ್ನಲ್ಲಿ ಈ ರೀತಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಪ್ರೊಮೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.