ಬಿಗ್ ಬಾಸ್ ಸೀಸನ್ 12ರ ಮನೆಯಲ್ಲಿ ನಟ ಧ್ರುವಂತ್ 'ತಿ* ಕೊಬ್ಬು' ಎಂದು ಹೇಳಿಕೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಪ್ರಶ್ನಿಸಿದ ಕ್ಯಾಪ್ಟನ್ ಧನುಷ್ ಮತ್ತು ಸೂರಜ್ ವಿರುದ್ಧ ಧ್ರುವಂತ್ ತಿರುಗಿಬಿದ್ದಿದ್ದು, ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಈಗಾಗಲೇ 8 ವಾರಗಳು ಪೂರ್ಣಗೊಂಡಿವೆ. ಇದರ ನಡುವೆಯೇ ನಟ ಧ್ರುವಂತ್ ಅವರು ತಿ*ಕೊಬ್ಬು ಎಂದು ಹೇಳಿಕೆ ನೀಡಿದ್ದು, ಇದರಿಂದ ಸೂರಜ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಮನೆಯ ಕ್ಯಾಪ್ಟನ್ ಆಗಿರುವ ಧನುಷ್ ಇದನ್ನು ಪ್ರಶ್ನೆ ಮಾಡಿದ್ದೇ ತಪ್ಪೆನ್ನುವಂತೆ ಧ್ರುವಂತ್ ನಡೆದುಕೊಂಡಿದ್ದು, ಇಬ್ಬರ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
28
ಧ್ರುವಂತ್‌ನನ್ನು ತಳ್ಳುವ ಸೂರಜ್
ಕಲರ್ಸ್ ಕನ್ನಡ ವಾಹಿನಿಯಿಂದ ಬಿಡುಗಡೆ ಮಾಡಲಾದ ಪ್ರೊಮೋದಲ್ಲಿ ಧ್ರುವಂತ್ vs ಧನುಷ್-ಸ್ಪಂದನ-ಸೂರಜ್; ಆದ್ರೆ ಯಾಕೆ? ಎಂದು ಅಡಿಬರಹ ಕೊಟ್ಟು ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪ್ರೋಮೋ ವಿಡಿಯಲ್ಲಿ ಧ್ರುವಂತ್‌ನನ್ನು ತಳ್ಳುವ ಸೂರಜ್ ನಿನ್ನ ವರ್ಡ್ಸ್ (ಪದಗಳ) ಮೇಲೆ ಕಂಟ್ರೋಲ್ ಇರಲಿ ಎಂದು ಹೇಳುತ್ತಾರೆ. ಆಗ ಕೋಪಗೊಂಡ ಧ್ರುವಂತ್ ಯಾರಿಗೆ ಕಂಪ್ಲೇಂಟ್ ಮಾಡ್ತೀಯೋ ಮಾಡ್ಕೋ ಎಂದು ಸಿಟ್ಟಿಗೇಳುತ್ತಾರೆ.
38
ಬಾಯಿ ಮೇಲೆ ಹಿಡಿತವಿರಲಿ
ನಾನು ನಿಮ್ಮನ್ನೇ ಕೇಳ್ತಿರೋದು ತಿ* ಕೊಬ್ಬು ಎಂದರೆ ಏನು? ಎಂದು ಸೂರಜ್ ಪ್ರಶ್ನೆ ಮಾಡುತ್ತಾರೆ. ಬಾಯಿ ಮೇಲೆ ಹಿಡಿತವಿರಲಿ ಎಂದು ಗಟ್ಟಿ ಧ್ವನಿಯಿಂದಲೇ ಧ್ರುವಂತ್‌ಗೆ ಎಚ್ಚರಿಕೆ ನೀಡುತ್ತಾರೆ.
ಆದರೆ, ಧ್ರುವಂತ್ ಏನು ಮಾಡ್ತೀಯಾ? ನೀನು ಏನು ಮಾಡಿಕೊಳ್ತೀಯಾ? ಎಂದು ಸೂರಜ್ ಮೇಲೇರುತ್ತಾ ಹೋಗುತ್ತಾರೆ. ಅದಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಿಮ್ಮನೆ ಅಂದುಕೊಂಡಿದ್ದೀರಾ? ಎಂದು ಸೂರಜ್ ಪ್ರಶ್ನೆ ಮಾಡುತ್ತಾರೆ.
58
ಜಗಳ ಬಿಡಿಸಲು ಬಂದ ಕ್ಯಾಪ್ಟನ್ ಧನುಷ್
ಆಗ ಜಗಳ ಬಿಡಿಸಲು ಬಂದ ಕ್ಯಾಪ್ಟನ್ ಧನುಷ್‌ಗೆ ನೀನೇನು ಮಾಡಿಕೊಳ್ತೀಯ ಎಂದು ಧ್ರುವಂತ್ ಕೇಳುತ್ತಾರೆ. ಆಗ ಧನುಷ್ ನೀನೇನು ಇಲ್ಲಿ ದಬ್ಬಾಕೋದಕ್ಕೆ ಆಗೊಲ್ಲ ಎಂದು ಸಿಟ್ಟಿನಿಂದ ಉತ್ತರ ಕೊಡುತ್ತಾರೆ. ಜೊತೆಗೆ ಸರಿಯಾಗಿ ಮಾತನಾಡುವುದನ್ನು ಕಲಿಯುವಂತೆ ಹೇಳುತ್ತಾರೆ.
68
ನನ್ನ ವಿಷ್ಯಕ್ಕೆ ಬಂದರೆ ತಿ* ಕೊಬ್ಬು
ನಟಿ ಸ್ಪಂದನಾ ಕೂಡ ಜಗಳದಲ್ಲಿ ಬಂದು ಧ್ರುವಂತ್‌ಗೆ ಬುದ್ಧಿ ಹೇಳಿದರೆ, ನನ್ನ ವಿಷ್ಯಕ್ಕೆ ಬಂದರೆ ನಾನು ತಿ* ಕೊಬ್ಬು ಎಂದು ಹೇಳೇ ಹೇಳುತ್ತೇನೆ ಎನ್ನುತ್ತಾರೆ. ಆದರೆ, ನೀವು ಅದನ್ನ ಹೇಳಿಸಿಕೊಳ್ಳಿ, ಬೇರೆಯವರಿಗೆ ಮಾತನಾಡಬಾರದು ಎಂದು ಕೋಪದಿಂದ ಸ್ಪಂದನಾ ಹೇಳುತ್ತಾರೆ.
78
ಧ್ರುವಂತ್ ಹಾಗೂ ಧನುಷ್ ನಡುವೆ ಜಗಳ
ಮನೆಯ ಇತರೆ ಸ್ಪರ್ಧಿಗಳು ಧ್ರುವಂತ್ ಹಾಗೂ ಕ್ಯಾಪ್ಟನ್ ಧನುಷ್ ನಡುವೆ ಜಗಳ ತಾರಕಕ್ಕೇ ಯಾರಾದರೂ ಹಲ್ಲೆ ಮಾಡಿಕೊಂಡು ನಿಯಮ್ಮ ಉಲ್ಲಂಘನೆ ಮಾಡಿಬಿಡುತ್ತಾರೆ ಎಂಬ ಭಯದಿಂದ ಅವರ ಜಗಳವನ್ನು ಬಿಡಿಸಲು ಮುಂದಾಗುತ್ತಾರೆ.
88
56 ದಿನಗಳು ಕಳದರೂ ಹೊಂದಾಣಿಕೆ ಇಲ್ಲ
ಇದೇ ವೇಳೆ ಅತಿಥಿಗಳಾಗಿ ಬಂದಿರುವ ಮಾಜಿ ಸ್ಪರ್ಧಿಗಳಾದ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ಕೂಡ ಜಗಳ ನೋಡುತ್ತಾ ನಿಂತುಕೊಂಡಿರುತ್ತಾರೆ. ಜಗಳ ಮಾಡುತ್ತಿದ್ದ ಒಬ್ಬರನ್ನೂ ಸಹ ಸ್ಪರ್ಧಿಗಳು ಹಿಡಿದುಕೊಳ್ಳುತ್ತಾರೆ.
ಒಟ್ಟಾರೆ, ಬಿಗ್ ಬಾಸ್ ಶೋ ಆರಂಭವಾಗಿ 50 ದಿನದೊಳಗೆ ಎಲ್ಲ ಸ್ಪರ್ಧಿಗಳ ನಡುವೆ ಒಂದು ಹೊಂದಾಣಿಕೆ ಕಂಡುಬರುತ್ತಿತ್ತು. ಆದರೆ, ಸೀಸನ್ 12ರ ಬಿಗ್ ಬಾಸ್ ಸ್ಪರ್ಧಿಗಳ ನಡುವೆ 56 ದಿನಗಳು ಕಳದರೂ ಹೊಂದಾಣಿಕೆಯೇ ಏರ್ಪಟ್ಟಿಲ್ಲ. ಹೀಗಾಗಿ, ಅಸಲಿ ಬಿಗ್ ಬಾಸ್ ಸ್ಪರ್ಧೆಯೇ ಆರಂಭವಾಗಿಲ್ಲ ಎಂದು ಅನೇಕ ಮಾಜಿ ಸ್ಪರ್ಧಿಗಳು ಹೇಳುತ್ತಿದ್ದಾರೆ.