'ಗಿಲ್ಲಿ, ಗಿಲ್ಲಿ, ಗಿಲ್ಲಿ ಏನ್​ ದಬ್ಬಾಕಿದ್ಯಾ ಇಲ್ಲಿ?' ಎಂದು ಭರ್ಜರಿ ಸ್ಟೆಪ್​ ಹಾಕಿದ Bigg Boss ಜಾಹ್ನವಿ- 10 ದಿನ ಕಾಯಮ್ಮಾ ಎಂದ ನೆಟ್ಟಿಗರು

Published : Jan 07, 2026, 01:08 PM IST

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿ ಗಿಲ್ಲಿ ನಟ ಹೇಳಿದ್ದ 'ದೊಡ್ಡವ್ವ ದೊಡ್ಡವ್ವ ದೋಸೆ ಕೊಡು' ಡೈಲಾಗ್ ಇದೀಗ ಹಾಡಾಗಿ ವೈರಲ್ ಆಗಿದೆ. ಇದೇ ಹಾಡಿಗೆ ಎಲಿಮಿನೇಟ್ ಆದ ಸ್ಪರ್ಧಿ ಜಾಹ್ನವಿ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ  ಸದ್ದು ಮಾಡುತ್ತಿದೆ.

PREV
16
ಕೌಂಟ್​ಡೌನ್​ ಶುರು

ಇನ್ನೇನು ಬಿಗ್​​ಬಾಸ್​​ ಮುಗಿಯಲು ಕೌಂಟ್​ಡೌನ್​ ಶುರುವಾಗಿದೆ. ಇನ್ನೊಂದು 10 ದಿನಗಳಲ್ಲಿ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಇದಾಗಲೇ ವಿನ್ನರ್​ ಯಾರಾಗಬೇಕು (Bigg Boss 12 winner) ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

26
ಯಾರ ಹೆಸರು?

ಗಿಲ್ಲಿ ನಟನ ಹೆಸರು ಟಾಪ್​-1ನಲ್ಲಿ ಇದ್ದರೆ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರ ಹೆಸರೂ ಕೇಳಿಬರುತ್ತಿದೆ. ಈ ಬಾರಿ ವಿನ್​ ಆಗೋದು ಒಬ್ಬ ಲೇಡಿ ಎನ್ನುವ ಮಾತು ಇದಾಗಲೇ ಜ್ಯೋತಿಷಿ ಹೇಳಿಯೂ ಆಗಿದೆ.

36
ವಿನ್​ ಆಗೋದು ಇಷ್ಟವಿಲ್ಲ

ಅದೇನೇ ಇದ್ದರೂ, ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿ ಬಂದವರೆಲ್ಲರೂ ಹೇಳ್ತಿರೋದು, ಗಿಲ್ಲಿ ನಟನೇ ವಿನ್​ ಎಂದು. ಅವನು ವಿನ್​ ಆಗೋದು ನನಗೆ ಇಷ್ಟವಿಲ್ಲ, ಆದರೆ, ಆಗೋದು ಅವನೇ ಎಂದವರೂ ಕೆಲವರು. ಅದರಲ್ಲಿ ಒಬ್ಬರು ಜಾಹ್ನವಿ.

46
ಗಿಲ್ಲಿ ನಟನ ಡೈಲಾಗ್​

ಇದೀಗ ಈ ಜಾಹ್ನವಿ ಬಿಗ್​ಬಾಸ್​ ಮನೆಯಲ್ಲಿ ಗಿಲ್ಲಿ ನಟ (Bigg Boss Gilli Nata) ಬರೆದಿರುವ ಹಾಡು ಸಕತ್​ ವೈರಲ್​ ಆಗ್ತಿದೆ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ಉದ್ದೇಶಿಸಿ ‘ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು’ ಎಂದು ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಡೈಲಾಗ್ ಹೇಳಿದ್ದರು. ಇದು ಸಾಕಷ್ಟು ಗಮನ ಸೆಳೆದಿತ್ತು.

56
ಏನ್​ ದಬ್​ಹಾಕಿದ್ಯಾ?

‘ಟುಡೇಸ್ ಬೀಟ್ಸ್’ ಹೆಸರಿನ ಇನ್​ಸ್ಟಾಖಾತೆ ಹೊಂದಿರೋ ಐನ್​ಸ್ಟನ್ ಫರ್ನಾಂಡಿಸ್ ಅವರು ಇದಾಗಲೇ ಬಿಗ್​ಬಾಸ್​ನ ಹಲವಾರು ಡೈಲಾಗ್​ಗಳ ರಿಮಿಕ್ಸ್ ಮಾಡಿದ್ದಾರೆ. ಅದರಲ್ಲಿ ಒಂದು ಈ ಹಾಡು ಕೂಡ. ಅದರಲ್ಲಿ ಗಿಲ್ಲಿ ಗಿಲ್ಲಿ ಗಿಲ್ಲಿ ಏನ್​ ದಬ್​ಹಾಕಿದ್ಯಾ ಇಲ್ಲಿ ಎನ್ನುವ ಲೈನ್​ ಕೂಡ ಇದೆ. ಆ ಬಳಿಕ ಗಿಲ್ಲಿ ಯಾಕೆ ಫೇಮಸ್​ ಎನ್ನುವುದು ಕೂಡ ಇದೆ.

66
10 ದಿನ ಕಾಯಮ್ಮಾ

ಆದರೆ, ಇದೀಗ ಜಾಹ್ನವಿ ಅವರು ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು, ಗಿಲ್ಲಿ ಗಿಲ್ಲಿ ಗಿಲ್ಲಿ ಏನ್​ ದಬ್​ಹಾಕಿದ್ಯಾ ಇಲ್ಲಿ' ಎನ್ನುವ ಲೈನ್​ ಅಷ್ಟೇ ತೆಗೆದುಕೊಂಡು ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಅದಕ್ಕೆ ನೆಟ್ಟಿಗರು ಸೂಪರ್​ ಎಂದಿದ್ದರೆ, ಮತ್ತೆ ಕೆಲವರು ಇನ್ನೊಂದು ಹತ್ತು ದಿನ ಕಾದರೆ ಗೊತ್ತಾಗತ್ತೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories