Bigg Boss ಗಿಲ್ಲಿ ಲೈಫ್​ ಜಿಂಗಾಲಾಲಾ: ಇನ್ಮುಂದೆ ಗಂಟೆ ಲೆಕ್ಕದಲ್ಲಿ ಸಂಪಾದನೆ- ಎಷ್ಟು ದುಡೀತಾರೆ ನೋಡಿ

Published : Jan 22, 2026, 01:10 PM IST

ಬಿಗ್​ಬಾಸ್​ ಸೀಸನ್​ 12ರಲ್ಲಿ ದಾಖಲೆಯ 37 ಕೋಟಿಗೂ ಅಧಿಕ ವೋಟ್ ಪಡೆದು ಗಿಲ್ಲಿ ನಟ ಜಯಿಸಿದ್ದಾರೆ. ಈ ಗೆಲುವಿನಿಂದಾಗಿ ಅವರ ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು, ಈವೆಂಟ್‌ಗಳು, ಜಾಹೀರಾತುಗಳಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಸಾಧ್ಯತೆ ಇದೆ.

PREV
17
ಬಿಗ್​ಬಾಸ್​ನಲ್ಲಿ ದಾಖಲೆ

ಬಿಗ್​ಬಾಸ್​ ಸೀಸನ್​ 12 (Bigg Boss Season 12) ಗಿಲ್ಲಿ ನಟ ಬಿಗ್​ಬಾಸ್​ ಇತಿಹಾಸದಲ್ಲಿಯೇ ದಾಖಲೆ ಬರೆದಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ವೋಟ್​ ಅಂದರೆ 37 ಕೋಟಿಗೂ ಅಧಿಕ ವೋಟ್​ ಪಡೆದು ಜಯ ಸಾಧಿಸಿದ್ದಾರೆ.

27
ನೆಕ್ಸ್ಟ್​ ಲೆವೆಲ್​ ಸೆಲೆಬ್ರಿಟಿ

ಒಮ್ಮೆ ಬಿಗ್​ಬಾಸ್ ಮನೆ ಹೊಕ್ಕು ಬಂದರೇನೇ ಸಾಕು, ಅವಕಾಶಗಳ ಸುರಿಮಳೆಯೇ ಸಿಗುತ್ತದೆ. ಅಂಥದ್ದರಲ್ಲಿ ಬಿಗ್​ಬಾಸ್​ ವಿನ್​ ಆಗುವುದು ಎಂದರೆ, ಅದು ನೆಕ್ಸ್ಟ್​ ಲೆವೆಲ್​. ಅವರು ಸಿನಿಮಾ ಸೆಲೆಬ್ರಿಟಿಗಳನ್ನೂ ಮೀರಿಸುವ ಲೆವಲ್​ಗೆ ಬೆಳೆಯುವ ಹಿನ್ನೆಲೆಯಲ್ಲಿ, ಭರಪೂರ ಅವಕಾಶಗಳು ಸಿಗುತ್ತವೆ.

37
10 ವರ್ಷ ದುಡ್ಡಿನ ಸುರಿಮಳೆ

ಇದೀಗ ಗಿಲ್ಲಿ ನಟ ವಿನ್​ ಆಗಿರುವ ಕಾರಣದಿಂದ ಹಾಗೂ ಇದಾಗಲೇ ಅವರ ಯುಟ್ಯೂಬ್​ನಲ್ಲಿ ಫಾಲೋವರ್ಸ್​ ಸಂಖ್ಯೆ 18 ಲಕ್ಷಕ್ಕೆ ಏರಿರುವ ಕಾರಣದಿಂದ, ಅವರ ತಿಂಗಳ ಲೆಕ್ಕಾಚಾರ ಹಾಕಿದ್ರೆ ಕನಿಷ್ಠ ಇನ್ನೊಂದು ಹತ್ತು ವರ್ಷ ಗಿಲ್ಲಿ ತಿಂಗಳಿಗೆ ಲಕ್ಷ ಲಕ್ಷ ಮೀರಿ ದುಡಿಮೆ ಮಾಡುವ ಸಾಧ್ಯತೆ ಇದೆ.

47
ತಿಂಗಳಿಗೆ ಲಕ್ಷ ಲಕ್ಷ

'ಪ್ರಶಾಂತ್​ ಟಾಕ್ಸ್'​ನಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ಹೇಗೆ ಗಿಲ್ಲಿ ನಟ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎನ್ನುವ ಬಗ್ಗೆ ಪ್ರಶಾಂತ್​ ಅವರು ವಿವರಿಸಿದ್ದಾರೆ.

57
ಗಂಟೆಗಳಲ್ಲಿ ಲಕ್ಷ ಲಕ್ಷ

ಇದಾಗಲೇ ಗಿಲ್ಲಿ 50 ಲಕ್ಷ ಕ್ಯಾಷ್​ ಪ್ರೈಜ್​ ಸೇರಿದಂತೆ ಹಲವಾರು ಉಡುಗೊರೆಗಳನ್ನು ಪಡೆದಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಅವರ ಸಂಪಾದನೆ ಇನ್ನಷ್ಟು ಹೆಚ್ಚಾಗಲಿದೆ. ಇಂಥ ಸೆಲೆಬ್ರಿಟಿಗಳನ್ನು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಬರಮಾಡಿಕೊಳ್ಳುತ್ತಾರೆ. ಅಂಥ ಸಮಯದಲ್ಲಿ ಅವರಿಗೆ ಗಂಟೆಗಳ ಲೆಕ್ಕದಲ್ಲಿ ಲಕ್ಷ ಲಕ್ಷ ಹಣ ನೀಡಲಾಗುತ್ತದೆ.

67
ಈವೆಂಟ್​ ಕಂಪೆನಿಗಳು ಕೊಡೋದೆಷ್ಟು?

ಕೆಲವು ಈವೆಂಟ್​ ಕಂಪೆನಿಗಳು ಮೂರ್ನಾಲ್ಕು ಗಂಟೆ ಇಂಥ ಸೆಲೆಬ್ರಿಟಿಗಳು ಬಂದರೆ 4-5 ಲಕ್ಷ ರೂಪಾಯಿ ನೀಡುತ್ತಾರೆ. ಅದರಲ್ಲಿಯೂ ಗಿಲ್ಲಿಯು ಕೇವಲ ಬಿಗ್​ಬಾಸ್​ ವಿನ್ನರ್​ ಮಾತ್ರವಲ್ಲ. ಉತ್ತಮ ಕಲಾವಿದ. ಪಟಕ್ಕನೆ ಏನೋ ಹೇಳಿ ಜನರನ್ನು ನಗಿಸುವ ತಾಕತ್ತು ಅವರಲ್ಲಿ ಇದೆ. ಆದ್ದರಿಂದ ಅವರಿಗೆ ವ್ಯಾಲ್ಯೂ ಇನ್ನೂ ಹೆಚ್ಚಿರುತ್ತದೆ ಎನ್ನುವ ಬಗ್ಗೆ ಇವರು ವಿವರಣೆ ನೀಡಿದ್ದಾರೆ.

77
ಇನ್​ಸ್ಟಾಗ್ರಾಮ್​ನಿಂದಲೂ ದುಡ್ಡು

ಪ್ರತಿಯೊಂದು ಈವೆಂಟ್​ಗೂ ಏನಿಲ್ಲವೆಂದರೂ 2 ರಿಂದ 3 ಲಕ್ಷ ರೂಪಾಯಿ ಅತ್ಯಂತ ಸುಲಭವಾಗಿ ಸಂಪಾದನೆ ಮಾಡಬಹುದು. ಇಷ್ಟೇ ಅಲ್ಲದೇ ಕಾಮಿಡಿ ಷೋಗಳಲ್ಲಿಯೂ ಈಗ ಇವರ ವ್ಯಾಲ್ಯೂ ಹೆಚ್ಚಾಗುವ ಕಾರಣ, ಅಲ್ಲಿಯೂ ಅವರು ಹೆಚ್ಚಿನ ಚಾರ್ಜ್​ ಮಾಡಬಹುದು. ಅಷ್ಟೇ ಅಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿ ಅವರ ಫಾಲೋವರ್ಸ್​ ಸಂಖ್ಯೆ 18 ಲಕ್ಷಕ್ಕೆಏರಿರುವ ಕಾರಣದಿಂದ ಕೊಲಾಬರೇಷನ್​ ಪೋಸ್ಟ್​, ಜಾಹೀರಾತು ಇತ್ಯಾದಿಗಳಲ್ಲಿ ಒಂದೊಂದಕ್ಕೂ ಒಂದರಿಂದ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ. ಇವನ್ನೆಲ್ಲಾ ಲೆಕ್ಕ ಹಾಕಿದರೆ ಇನ್ಮುಂದೆ ಗಿಲ್ಲಿ ನಟ ಗಂಟೆಗಳಲ್ಲಿ ಲಕ್ಷ ಲಕ್ಷ ದುಡಿಯಲಿದ್ದಾರೆ ಎಂದು ಉದಾಹರಣೆ ಸಹಿತ ಪ್ರಶಾಂತ್​ ಅವರು ವಿವರಣೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories