ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಆದಿಯೊಂದಿಗೆ ಭಾಗ್ಯಳ ಮದುವೆಯ ಪ್ರಸ್ತಾಪವಾಗಿದ್ದು, ವೀಕ್ಷಕರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ, ಇಬ್ಬರು ಮಕ್ಕಳ ತಾಯಿಯಾದ ತಾನು ಮದುವೆಯಾಗುವುದು ಸಮಾಜದಲ್ಲಿ ಸರಿಯೇ ಎಂಬ ಗೊಂದಲ ಭಾಗ್ಯಳದ್ದು.
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial)ನಲ್ಲಿ ಕೆಲವು ವರ್ಷಗಳಿಂದ ಭಾಗ್ಯಳ ಗೋಳು ನೋಡಿಕೊಂಡು ಬಂದಿರೋರಿಗೆ ಅಬ್ಬಾ ಇದರಿಂದ ಆಕೆ ಯಾವಾಗ ಹೊರ ಬರ್ತಾಳೆ ಎಂದೇ ಕೇಳುತ್ತಿದ್ದರು. ಇದೀಗ ಆಕೆಯ ಲೈಫ್ನಲ್ಲಿ ಆದಿಯ ಎಂಟ್ರಿಯಾಗಿದೆ.
27
ಒಳ್ಳೆಯ ಗುಣಕ್ಕೆ ಫಿದಾ
ಆದಿ, ಭಾಗ್ಯಳ ಒಳ್ಳೆಯ ಗುಣಕ್ಕೆ ಮಾರು ಹೋಗಿದ್ದಾನೆ. ಆಕೆಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾನೆ. ಅಷ್ಟಕ್ಕೂ ಅವನಲ್ಲಿ ಈ ಭಾವನೆ ಮೂಡಿಸಿದ್ದೇ ಭಾಗ್ಯಳ ಅತ್ತೆ ಕುಸುಮಾ. ಇದ್ದರೆ ಇರಬೇಕು ಇಂಥ ಅತ್ತೆ ಎನ್ನುವ ಕ್ಯಾರೆಕ್ಟರ್ ಕುಸುಮಾಳದ್ದು.
37
ಬೆಸ್ಟ್ ಫ್ರೆಂಡ್
ಅದೇ ಇನ್ನೊಂದೆಡೆ, ಆದಿಯನ್ನು ಮದುವೆ ಮಾಡಿಸುವ ಜವಾಬ್ದಾರಿಯನ್ನು ಆತನ ತಾತ ಭಾಗ್ಯಳಿಗೆ ನೀಡಿದ್ದಾನೆ. ಅದಕ್ಕಾಗಿ ಭಾಗ್ಯಳಿಗೆ ಆದಿಯನ್ನು ಮದುವೆಯಾಗಲು ಇಷ್ಟವಿಲ್ಲ. ಆತ ಏನಿದ್ದರೂ ಆಕೆಯ ಬೆಸ್ಟ್ ಫ್ರೆಂಡ್ ಅಷ್ಟೇ.
ಹಾಗೆಂದು ಭಾಗ್ಯಳದ್ದು ಕೂಡ ಹೆಣ್ಣಿನ ಮನಸ್ಸೇ ತಾನೆ? ಆಕೆಗೂ ಆದಿಯ ಮೇಲೆ ಪ್ರೀತಿ ಇದೆ. ಅದನ್ನು ಅತ್ತೆ ಮುಂದೆ ಬಾಯಿ ಬಿಟ್ಟು ಹೇಳಿದ್ದಾಳೆ ಕೂಡ. ಆದರೆ ಇಬ್ಬರು ಬೆಳೆದ ಮಕ್ಕಳ ಅಮ್ಮನಾಗಿರೋ ನಾನು, ಮದುವೆಯೇ ಆಗದ ಆದಿಯ ಜೊತೆ ಮದುವೆಯಾಗುವುದು ಸರಿಯಲ್ಲ ಎನ್ನುವುದು ಅವಳ ಭಾವನೆ. ಆದಿಗೋಸ್ಕರ, ಅವರ ಜೀವನಕ್ಕೋಸ್ಕರ ನಾನು ಈ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾಳೆ ಭಾಗ್ಯ.
57
ಮದ್ವೆ ಆಗ್ಲೇ ಬೇಕು
ಆದರೆ, ಈ ನಿರ್ಧಾರ ಸರಿಯಲ್ಲ ಎಂದು ನೆಟ್ಟಿಗರಿಂದ ಕಮೆಂಟ್ಗಳ ಸುರಿಮಳೆಯೇ ಬರುತ್ತಿದೆ. ಭಾಗ್ಯಳ ಗೋಳಿನ ಜೀವನವನ್ನು ಸೀರಿಯಲ್ನಲ್ಲಿ ನೋಡ್ತಿರೋ ವೀಕ್ಷಕರಿಗೆ, ಆಕೆಗೆ ಇನ್ನೊಂದು ಮದುವೆಯಾಗಬೇಕು, ಆದಿಯಂಥ ಒಳ್ಳೆಯ ಸಂಗಾತಿ ಸಿಗಬೇಕು ಎನ್ನೋದು ಅವರ ಆಸೆ. ಆದ್ದರಿಂದ ಕಮೆಂಟ್ಸ್ ತುಂಬಾ, ಎರಡನೆಯ ಮದ್ವೆ ತಪ್ಪಲ್ಲ, ಆದಿ ಮತ್ತು ಭಾಗ್ಯ ಒಂದಾಗಬೇಕು ಎನ್ನುತ್ತಿದ್ದಾರೆ.
67
ರಿಯಲ್ vs ರೀಲ್ ಲೈಫ್
ಆದರೆ ಈ ರೀಲ್ ಲೈಫ್ ಹೊರತುಪಡಿಸಿ ರಿಯಲ್ ಲೈಫ್ನಲ್ಲಿಯೂ ಹೀಗೇನಾ ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತಿದೆ. ಮೊದಲ ಪತಿ ಸತ್ತಾಗ ಇಲ್ಲವೇ ವಿಧವೆಯಾದಾಗ, ಆಕೆಯ ವಯಸ್ಸು ಒಂದು ಹಂತ ಮೀರಿದ್ದರೆ, ಆಕೆ 2ನೆಯ ಮದುವೆಯ ಬಗ್ಗೆ ಮಾತನಾಡಿದರೆ, ಭಾಗ್ಯಳಿಗೆ ಸೀರಿಯಲ್ನಲ್ಲಿ ಸಿಕ್ಕಷ್ಟೇ ಬೆಂಬಲ ಸಿಗತ್ತಾ ಎನ್ನುವುದು ಪ್ರಶ್ನೆ. ಕಾಲ ಏನೇ ಬದಲಾಗಿದ್ದರೂ, ಭಾಗ್ಯಳಂಥ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿರೋ ಹೆಣ್ಣುಮಕ್ಕಳು, ಅದರಲ್ಲಿಯೂ ಇಬ್ಬರು ಬೆಳೆದು ನಿಂತ ಮಕ್ಕಳು ಇರುವಾಗ ಮತ್ತೊಂದು ಮದುವೆಯ ಬಗ್ಗೆ ಮಾತನಾಡಿದರೆ, ಸೀರಿಯಲ್ನಲ್ಲಿ ಮದುವೆಯಾಗು ಎನ್ನುವವರೇ ರಿಯಲ್ ಲೈಫ್ನಲ್ಲಿಯೂ ಹೀಗೆಯೇ ಹೇಳ್ತಾರಾ? ಇಷ್ಟೇ ವಿಶಾಲ ಮನೋಭಾವ ತೋರುತ್ತಾರಾ ಎಂದರೆ ಬಹುತೇಕ ಬರುವುದು ಇಲ್ಲ ಎನ್ನುವ ಉತ್ತರಗಳೇ.
77
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಇದೇ ರಿಯಲ್ ಮತ್ತು ರೀಲ್ ಲೈಫ್ಗೆ ಇರುವ ವ್ಯತ್ಯಾಸ. ಸೀರಿಯಲ್, ಸಿನಿಮಾಗಳಲ್ಲಿ ಆಕೆಯ ನೋವಿನ ಜೀವನ ಕಣ್ಣಾರೆ ನೋಡುವ ಇದೇ ವೀಕ್ಷಕರು, ರಿಯಲ್ ಲೈಫ್ನಲ್ಲಿ ಆಕೆ ಅನುಭವಿಸಿದ ನೋವುಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದ ಕಾರಣ, ಮತ್ತೊಂದು ಮದುವೆ ಅರಗಿಸಿಕೊಳ್ಳಲಾರರು. ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.