ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಮುದ್ದಾದ ಕೆಮೆಸ್ಟ್ರಿ ಗಮನ ಸೆಳೆಯುತ್ತಿದೆ. ಕಾಫಿ ಕಪ್ಪಿನ ವಿಚಾರವಾಗಿ ನಡೆದ ತಮಾಷೆಯ ಜಗಳದಲ್ಲಿ, ಕಾವ್ಯಾ ಅವರ ಪಟ್ಟಿಗೆ ಮಣಿದ ಗಿಲ್ಲಿ ನಟ, ಕೊನೆಗೆ ಆಕೆಯ ಕಾಲು ಹಿಡಿದು ಕ್ಷಮೆ ಕೇಳಿದ್ದಾರೆ.
ಬಿಗ್ಬಾಸ್ (Bigg Boss Kanaanda 12) ಇದರಲ್ಲಿ ಸದ್ಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ್ ಕ್ಯೂಟ್ ಲವ್ಸ್ಟೋರಿ ವೀಕ್ಷಕರನ್ನು ರಂಜಿಸುತ್ತಿದೆ. ಇವರೇನು ರಿಯಲ್ ಆಗಿ ಲವ್ ಮಾಡದಿದ್ರೂ ಇವರಿಬ್ಬರ ಕೆಮೆಸ್ಟ್ರಿಯನ್ನು ಬಿಗ್ಬಾಸ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.
28
ಗಿಲ್ಲಿ ನಟ ಹವಾ
ಕಾವ್ಯಾ ಶೈವ ಇಷ್ಟು ದಿನ ಇರಲು ಗಿಲ್ಲಿ ನಟನೇ ಕಾರಣ ಎಂದು ಇದಾಗಲೇ ಬಿಗ್ಬಾಸ್ನಿಂದ ಹೊರಕ್ಕೆ ಬಂದಿರೋ ಸ್ಪರ್ಧಿಗಳೂ ಹೇಳುತ್ತಿದ್ದಾರೆ. ಅದೇನೇ ಇದ್ದರೂ ಗಿಲ್ಲಿ ನಟ (Bigg Boss Gilli Nata) ಮಾತ್ರ ತಮಾಷೆ ಮಾಡುತ್ತಲೇ ಸಾಗಿದ್ದಾರೆ. ಕೆಲವೊಮ್ಮೆ ಸೀರಿಯಲ್ ವಿಷ್ಯದಲ್ಲಿಯೂ ತಮಾಷೆ ಮಾಡಿ ಹಲವರ ಅಸಮಾಧಾನಕ್ಕೂ ಕಾರಣವಾಗಿದ್ದಿದೆ.
38
ಸಾರಿ ಎಂದ ಗಿಲ್ಲಿ
ಇದೀಗ ಕಾವ್ಯಾ ಶೈವ (Bigg Boss Kavya Shaiva) ಅವರ ಕಾಲು ಹಿಡಿದು ಕ್ಷಮೆ ಕೋರಿದ್ದಾರೆ ಗಿಲ್ಲಿ ನಟ! ಹೌದು. ಕಾವ್ಯಾ ಶೈವ ತಮ್ಮ ಕಾಲು ಹಿಡಿದರೆ ಮಾತ್ರ ಕ್ಷಮೆ ನೀಡುವುದು ಎಂದು ಗಿಲ್ಲಿಗೆ ಹೇಳಿದ್ದರಿಂದ ಕೊನೆಗೂ ಗಿಲ್ಲಿ ಸಾರಿ ಎಂದು ಕಾಲು ಹಿಡಿದಿದ್ದಾರೆ.
ಅಷ್ಟಕ್ಕೂ ಇದೀಗ ರಿಲೀಸ್ ಮಾಡಿರುವ ಪ್ರೊಮೋದಲ್ಲಿ, ಕಾಫಿ ಕಪ್ಪನ್ನು ಹಿಡಿದು ಕಾವ್ಯಾ ಶೈವ ಹೊರಟಿದ್ದಾರೆ. ಗಿಲ್ಲಿ ನಟ ತಮಾಷೆಯಾಗಿ ಆಕೆಯನ್ನು ಅಡ್ಡಗಟ್ಟಿದ್ದಾನೆ. ಆಗ ಕಾವ್ಯಾ ಶೈವ ಕೆಳಗೆ ಕುಳಿತುಕೊಂಡಿದ್ದಾರೆ. ಗಿಲ್ಲಿ ನಟ ತಮಾಷೆಯಾಇ ಆಕೆಯ ಕೈ ಹಿಡಿದು ಮೇಲಕ್ಕೆ ಏಳುವಂತೆ ಕೋರಿದ್ದಾರೆ.
58
ನನ್ನ ಮೇಲೆ ದೌರ್ಜನ್ಯ
ಆಗ, ಕಾವ್ಯಾ ಜೋರಾಗಿ ಬಿಗ್ಬಾಸ್ ಸಹಾಯ ಮಾಡಿ, ನನ್ನ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಕೂಗಿದ್ದಾರೆ. ಆದರೂ ಗಿಲ್ಲಿ ನಟ ಬಿಡಲಿಲ್ಲ. ಕೊನೆಗೆ ಆಕೆ ಮೇಲಕ್ಕೆ ಎದ್ದಾಗ ಕೈಬಿಡುವಂತೆ ಕೇಳಿದ್ದಾರೆ.
68
ಪಟ್ಟು ಬಿಡದ ಕಾವ್ಯಾ
ಗಿಲ್ಲಿ ನಟ ಕೈಬಿಟ್ಟಾಗ ಕ್ಷಮೆ ಕೋರುವಂತೆ ಕಾವ್ಯಾ ಶೈವ ಹೇಳಿದ್ದಾರೆ. ಗಿಲ್ಲಿ ನಟ ಅದು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಕಾವ್ಯಾ ಪಟ್ಟು ಬಿಡಲಾಗ ಗಿಲ್ಲಿ ನಟ (Bigg Boss Gilli Nata) ಸಾರಿ ಎಂದಿದ್ದಾರೆ.
78
ಕಾಲು ಹಿಡಿದು ಕ್ಷಮೆ
ನೀನು ನನ್ನ ಕಾಲು ಹಿಡಿದು ಕ್ಷಮೆ ಕೋರಿದ್ರೆ ಮಾತ್ರ ಕ್ಷಮೆ ನೀಡುವುದಾಗಿ ಕಾವ್ಯಾ ಪಟ್ಟು ಹಿಡಿದಿದ್ದಾರೆ. ಕಾಲು ಹಿಡಿದಂತೆ ಗಿಲ್ಲಿ ನಟ ಆ್ಯಕ್ಷನ್ ಮಾಡಿದ್ದಾರೆ. ಆದರೆ ಇವೆಲ್ಲಾ ಸರಿಯಿಲ್ಲ, ಸರಿಯಾಗಿ ಕಾಲು ಹಿಡಿ ಎಂದು ಕಾವ್ಯಾ ನಿಂತುಕೊಂಡಾಗ ಗಿಲ್ಲಿನಟ ಸಾರಿ ಎಂದು ಕಾಲು ಹಿಡಿದಿದ್ದಾರೆ.
88
ಗಿಲ್ಲಿ ಪಾಪ ಅಲ್ವಾ?
ಇದರ ಪ್ರೊಮೋ ರಿಲೀಸ್ ಆಗಿದೆ. ಗಿಲ್ಲಿ ಪಾಪ ಅಲ್ವಾ ಕಾವ್ಯ, ಎಷ್ಟು ಕಾಟ ಕೊಡ್ತೀಯಾ ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಇವರಿಬ್ಬರ ಕ್ಯೂಟ್ ಜಗಳಕ್ಕೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಇವರಿಬ್ಬರ ಜೋಡಿ ಸೂಪರ್ ಎನ್ನುತ್ತಿದ್ದಾರೆ.