ಬಿಗ್ ಬಾಸ್ ಕನ್ನಡ ಸೀಸನ್ 12ರ ಅಬ್ಬರ ಜೋರಾಗಿದೆ. ಕನ್ನಡಿಗರು ಮಾತ್ರವಲ್ಲ ವಿದೇಶಿಗರೂ ರಿಯಾಲಿಟಿ ಶೋ ನೋಡ್ತಿದ್ದಾರೆ. ವಿದೇಶಿಗರ ಬಾಯಲ್ಲೂ ಗಿಲ್ಲಿ ಹೆಸರು ಕೇಳಿ ಬರ್ತಿದೆ. ಇದು ಫ್ಯಾನ್ಸ್ ಖುಷಿ ಡಬಲ್ ಮಾಡಿದೆ.
ಬಿಗ್ ಬಾಸ್ ಮನೆ ಒನ್ ಮ್ಯಾನ್ ಶೋ ಆಗಿದ್ದಂತೂ ಸತ್ಯ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ತಮಾಷೆ, ಗಿಲ್ಲಿ ಮಾತುಗಳೇ ತುಂಬಿ ಹೋಗಿವೆ. ಬರೀ ಮನೆ ಒಳಗೆ ಮಾತ್ರ ಅಲ್ಲ ಮನೆ ಹೊರಗೂ ಗಿಲ್ಲಿಯದ್ದೇ ಹವಾ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಗಿಲ್ಲಿ ನಟನ ಬಗ್ಗೆಯೇ ಮಾತನಾಡ್ತಿದ್ದಾರೆ.
27
ಎಲ್ಲಿ ನೋಡಿದ್ರೂ ಗಿಲ್ಲಿ
ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗಿಲ್ಲಿ ಆರಂಭದಿಂದಲೂ ಒಂದೇ ರೀತಿ ಆಟ ಆಡ್ತಿದ್ದಾರೆ. ಮನೆ ಕೆಲ್ಸಗಳನ್ನು ಗಿಲ್ಲಿ ಸರಿಯಾಗಿ ಮಾಡೋದಿಲ್ಲ, ಟಾಸ್ಕ್ ಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳೋದಿಲ್ಲ ಎನ್ನುವ ಆರೋಪ ಗಿಲ್ಲಿ ಮೇಲಿದೆ. ಆದ್ರೂ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ತಿರುವ ಗಿಲ್ಲಿಗೆ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ.
37
ವಿದೇಶಿಗರ ಮೆಚ್ಚುಗೆ
ಹಾಸ್ಯ ಕಲಾವಿದ ಗಿಲ್ಲಿ ನಟ ಬರೀ ಕನ್ನಡಿಗರಿಗೆ ಮಾತ್ರವಲ್ಲ ವಿದೇಶಿಗರಿಗೂ ಅಚ್ಚುಮೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ ವಿದೇಶಿಗರೊಬ್ಬರು ಗಿಲ್ಲಿ ಬಗ್ಗೆ ಹೇಳಿದ್ದಾರೆ. ಬಿಗ್ ಬಾಸ್ ಶೋ ನೋಡ್ತೇನೆ, ಕನ್ನಡ ಅರ್ಥವಾಗುತ್ತೆ, ನಮ್ಮ ಫೆವರೆಟ್ ಗಿಲ್ಲಿ. ಈ ಬಾರಿ ಗಿಲ್ಲಿಯವರೆ ಬಿಗ್ ಬಾಸ್ ಗೆಲ್ಲಬೇಕು. ಗಿಲ್ಲಿ ಕೃಷಿಕ, ಗಿಲ್ಲಿ ತಮಾಷೆ ತುಂಬಾ ಇಷ್ಟ ಅಂತ ವಿದೇಶಿಗರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಿಂದ ಈಗಾಗಲೇ ಹೊರಬಿದ್ದಿರುವ ಅನೇಕ ಸ್ಪರ್ಧಿಗಳು ಗಿಲ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಈ ಬಾರಿ ಗಿಲ್ಲಿ ಗೆಲ್ಲೋದು ಗ್ಯಾರಂಟಿ ಎನ್ನುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ಕೂಡ ಗಿಲ್ಲಿಗೆ ಸಪೋರ್ಟ್ ಮಾಡಿದ್ದಾರೆ. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ನನ್ನ ಬೆಂಬಲ ಗಿಲ್ಲಿಯವರಿಗೆ ಅಂತ ಅವರು ಹೇಳಿದ್ದಾರೆ.
57
ಗಿಲ್ಲಿ ಗತ್ತು ಎಲ್ಲರಿಗೂ ಗೊತ್ತು
ಮಂಡ್ಯ ಮೂಲದ ಗಿಲ್ಲಿ ಅನೇಕ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡು ಪ್ರಸಿದ್ಧಿಗೆ ಬಂದವರು. ರನ್ನರಪ್ ಆಗಿದ್ದ ಗಿಲ್ಲಿ, ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಇಡೀ ಕರ್ನಾಟಕವೇ ಗಿಲ್ಲಿ ಬಗ್ಗೆ ಮಾತನಾಡ್ತಿದೆ. ರಜನಿಕಾಂತ್ ಕೂಡ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಹರಡಿದೆ. ಆದ್ರೆ ಅದಕ್ಕೆ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ.
67
ಗಿಲ್ಲಿ ಹಾಡಿಗೆ ಫುಲ್ ಮಾರ್ಕ್ಸ್
ಬಿಗ್ ಬಾಸ್ ಸ್ಪರ್ಧಿಗಳ ಕಾಲೆಳೆಯುತ್ತ, ತಮಾಷೆ ಮಾಡ್ತಾ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಂಜಾಯ್ ಮಾಡ್ತಿದ್ದರೆ, ಬಿಗ್ ಬಾಸ್ ಮನೆ ಹೊರಗೆ ಗಿಲ್ಲಿ ಹಾಡುಗಳ ಅಬ್ಬರ ಜೋರಾಗಿದೆ. ಒಂದಾದ್ಮೇಲೆ ಒಂದರಂತೆ ಗಿಲ್ಲಿ ಹಾಡುಗಳು ಬಿಡುಗಡೆ ಆಗ್ತಿವೆ. ಚಿಕ್ಕವ್ವ – ದೊಡ್ಡವ್ವ ಫೇಮಸ್ ಆದ್ಮೇಲೆ ಮತ್ತೆರಡು ಸಾಂಗ್ ರಿಲೀಸ್ ಆಗಿದೆ.
77
ಸಿನಿಮಾದಲ್ಲಿ ನಟಿಸಿರುವ ಗಿಲ್ಲಿ
ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಹಾಸ್ಯನಟರಾದ ಗಿಲ್ಲಿ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾರೆ. ಅವರ ಅಭಿನಯದ ಸೂಪರ್ ಹಿಟ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ವಿಜಯಾನಂದ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗುವ ಸಾಧ್ಯತೆ ಹೆಚ್ಚಿದೆ. ಕಾಮಿಡಿ ಸಿನಿಮಾ ಇದಾಗಿದ್ದು, ದೊಡ್ಡ ತೆರೆ ಮೇಲೆ ಗಿಲ್ಲಿ ಕಾಮಿಡಿ ನೋಡಲು ಪ್ರೇಕ್ಷಕರು ಬರುವ ನಿರೀಕ್ಷೆ ಹೆಚ್ಚಿದೆ.