ನಾನೇ ಫೈನಲಿಸ್ಟ್​, ನನ್ನ ಜಾಗದಲ್ಲಿ ರಘು ಇರಬೇಕಿತ್ತು ಆದ್ರೆ... Bigg Boss ಜಾಹ್ನವಿ ಶಾಕಿಂಗ್​ ಸ್ಟೇಟ್​ಮೆಂಟ್​

Published : Dec 04, 2025, 12:24 PM IST

ಬಿಗ್​ಬಾಸ್​ ಮನೆಯಿಂದ ಅನಿರೀಕ್ಷಿತವಾಗಿ ಹೊರಬಂದಿರುವ ಜಾಹ್ನವಿ, ಇದು ಅನ್ಯಾಯದ ಎಲಿಮಿನೇಷನ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾವೇ ಫೈನಲಿಸ್ಟ್ ಆಗಬೇಕಿತ್ತು ಎಂದಿರುವ ಅವರು, ಸ್ಪಂದನಾ ಕುರಿತ ಹೇಳಿಕೆ ಮತ್ತು ಸುದೀಪ್ ಅವರೊಂದಿಗಿನ ವಾಗ್ವಾದಿಂದ ಚರ್ಚೆಯಲ್ಲಿದ್ದರು.

PREV
16
ಜಾಹ್ನವಿ ಹೊರಕ್ಕೆ

ಬಿಗ್​ಬಾಸ್​ (Bigg Boss)ನಿಂದ ಜಾಹ್ನವಿ ಹೊರಕ್ಕೆ ಬಂದಿದ್ದಾರೆ. ಆದರೆ ಇದನ್ನು ಖುದ್ದು ಅವರಿಗೂ ನಂಬಲು ಆಗುತ್ತಿಲ್ಲ. ತಾವು ಫೈನಲಿಸ್ಟ್​ ಆಗುವುದು ಖಚಿತ, ತಾವು ತುಂಬಾ ಚೆನ್ನಾಗಿ ಆಡುತ್ತಿರುವುದಾಗಿ ಅವರು ನಂಬಿದ್ದರು. ಆದರೆ ಅನ್ಯಾಯವಾಗಿ ಹೊರಕ್ಕೆ ಬಂದಿದ್ದೇನೆ ಎನ್ನುವುದು ಅವರ ಮನದ ಮಾತು.

26
ನಾನೇ ಫೈನಲಿಸ್ಟ್​

ಇದೀಗ ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದು, ಎಲ್ಲಾ ಕಡೆಯಲ್ಲಿಯೂ ಅವರದ್ದು ಒಂದೇ ನೋವು, ಅದೇನೆಂದರೆ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಜೊತೆ ತಾವು ಫೈನಲಿಸ್ಟ್​ ಆಗುವುದು ಖಚಿತವಾಗಿತ್ತು. ತಮ್ಮ ಜಾಗದಲ್ಲಿ ಬೇರೆಯವರು ಇರಬೇಕಿತ್ತು, ಆದರೆ ತಾವು ಹೊರಕ್ಕೆ ಬಂದಿರುವುದು ಅಚ್ಚರಿ ಎಂದು ಹೇಳುತ್ತಿದ್ದಾರೆ.

36
ನಾನೇ ಟಾರ್ಗೆಟ್​

ಮೇಲೆ ತಿಳಿಸಿದ ಸ್ಪರ್ಧಿಗಳು ಬಿಟ್ಟರೆ ಯಾರೂ ಅಲ್ಲಿ ಚೆನ್ನಾಗಿ ಆಡುತ್ತಿಲ್ಲ. ನನ್ನ ಜಾಗದಲ್ಲಿ ರಘು ಇಲ್ಲವೇ ಇವರಿಷ್ಟು ಮಂದಿ ಬಿಟ್ಟು ಬೇರೆಯವರು ಇರಬೇಕಿತ್ತು. ಆದರೆ ಎಲ್ಲರನ್ನೂ ಬಚಾವ್​ ಮಾಡಿ ಕೊನೆಗೆ ನಾನು ಉಳಿದುಕೊಂಡಾಗಲೇ ಗೊತ್ತಾಯ್ತು ನಾನೇ ಟಾರ್ಗೆಟ್​ ಎಂದು ಎನ್ನುವುದಾಗಿ ಬೇಸರದಿಂದ ನುಡಿದಿದ್ದಾರೆ ಜಾಹ್ನವಿ.

46
ಸ್ಪಂದನಾ ವಿಷಯದಲ್ಲಿ ವಿವಾದ

ಅಂದಹಾಗೆ ಜಾಹ್ನವಿ ಅವರು ಸ್ಪಂದನಾ ವಿಷಯದಲ್ಲಿ ಮಾತನಾಡಿ, ಸಾಕಷ್ಟು ವಿವಾದ ಸೃಷ್ಟಿಸಿಕೊಂಡಿದ್ದರು. ಅಶ್ವಿನಿ ಗೌಡ ಅವರ ಜೊತೆಗೆ ಸೇರಿ ಕೂಡ ಕೆಲವು ವಿಷಯಗಳಲ್ಲಿ ಟ್ರೋಲ್​ಗೂ ಒಳಗಾಗಿದ್ದರು. ಸ್ಪಂದನಾ ಅವರು ವಾಹಿನಿ ಕಡೆಯವರಾಗಿದ್ದರಿಂದ ಆಕೆಯನ್ನು ಹೊರಕ್ಕೆ ಕಳಿಸುತ್ತಿಲ್ಲ ಎಂದು ಹೇಳಿ ಸುದೀಪ್​ ಅವರ ಅಸಮಾಧಾನಕ್ಕೂ ಕಾರಣವಾಗಿದ್ದರು.

56
ಸುದೀಪ್​ ತಿರುಗೇಟು

ವಾರಾಂತ್ಯದಲ್ಲಿ ಸುದೀಪ್​ ಅವರು, ನೀವು ಕೂಡ ವಾಹಿನಿಯನ್ನು ಕಾಡಿ ಬೇಡಿ ಬಿಗ್​ಬಾಸ್​​ ಒಳಗೆ ಪ್ರವೇಶಿಸಿದವರು , ನೆನಪಿರಲಿ ಎಂದು ಹೇಳುವ ಮೂಲಕ ಜಾಹ್ನವಿ ಅವರಿಗೆ ಟಾಂಗ್​ ಕೊಟ್ಟಿದ್ದರು. ಇದು ಕೂಡ ಅವರ ಎಲಿಮಿನೇಷನ್​ಗೆ ಕಾರಣವಾಗಿದ್ದಿರಬಹುದು ಎನ್ನುವುದು ಅವರ ಅಭಿಮಾನಿಗಳ ಮಾತು.

66
ಟಿಆರ್​ಪಿ ಏರಿಕೆ

ಅದೇನೇ ಇದ್ದರೂ, ಜಾಹ್ನವಿ ಟಾಪ್​ 5 ಸ್ಪರ್ಧಿಗಳಲ್ಲಿ ಇರುತ್ತಾರೆ ಎಂದು ಅಂದುಕೊಂಡವರೇ ಹೆಚ್ಚು. ಗಿಲ್ಲಿ ನಟ (Bigg Boss Gilli Nata) ತಮಾಷೆಯಿಂದಾಗಿ ಬಿಗ್​ಬಾಸ್​​ ಟಿಆರ್​ಪಿ ಏರಿಸುತ್ತಿದ್ದರೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಜಗಳದಿಂದ ಟಿಆರ್​ಪಿ ಏರಿಸುತ್ತಿದ್ದಾರೆ, ಆದ್ದರಿಂದ ಅವರು ಬೇಗನೇ ಎಲಿಮಿನೇಟ್​ ಆಗುವುದಿಲ್ಲ ಎನ್ನುವ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಕೇಳಿ ಬಂದಿದ್ದವು.

Read more Photos on
click me!

Recommended Stories