ಕರ್ಣ ಧಾರಾವಾಹಿಯಿಂದ ಹೊರ ಬಂದ್ರ ನಮೃತಾ ಗೌಡ!…. ಅಭಿಮಾನಿಗಳಿಗ್ಯಾಕೆ ಬೇಜಾರು?

Published : Jun 04, 2026, 05:05 PM IST

Namratha Gowda: ನಮೃತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಂತೆ, ಅಭಿಮಾನಿಗಳು ತುಂಬಾನೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಏನಾಯ್ತು ನಮೃತಾ ಗೌಡಾಗೆ? ಕರ್ಣ ಧಾರಾವಾಹಿಯಿಂದ ಹಾಗೂ ನಿತ್ಯಾ ಪಾತ್ರದಿಂದ ಹೊರ ಬಂದ್ರ ನಮೃತಾ?

PREV
17
ನಮೃತಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮೃತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಸೀರೆಯಲ್ಲಿ ನಟಿಯ ಫೋಟೋ ಶೇರ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

27
ಹಳದಿ ಸೀರೆಯಲ್ಲಿ ನಮೃತಾ

ನಮೃತಾ ಗೌಡ ಹಳದಿ ಬಣ್ಣದ ಫ್ಲೋರಲ್ ಸೀರೆಯುಟ್ಟು, ಓಪನ್ ಹೇರ್ ಬಿಟ್ಟುಕೊಂಡು, ಸುಂದರವಾದ ತ್ರೀ ಲೇಯರ್ ಹಾರವನ್ನು ಧರಿಸಿ, ಪೋಸ್ ಕೊಟ್ಟಿದ್ದು, ನಟಿಯ ಲುಕ್, ಸ್ಟೈಲ್ ಎಲ್ಲವೂ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

37
ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್

ನಟಿಯ ಫೋಟೋಗಳನ್ನು ನೋಡಿ ಖುಷಿ ಪಡುವ ಬದಲಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಬೇಸರಕ್ಕೆ ಕಾರಣ ಏನು ಗೊತ್ತಾ? ಅಂತದ್ದೇನಿತ್ತು ನಮೃತಾ ಗೌಡ ಫೋಟೊದಲ್ಲಿ ಇಲ್ಲಿದೆ ಸಂಪೂರ್ಣ ಮಾಹಿತಿ.

47
ಕರ್ಣ ಧಾರಾವಾಹಿಯಿಂದ ಹೊರ ಬಂದ್ರ ನಟಿ?

ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಸದ್ಯಕ್ಕಂತೂ ಧಾರಾವಾಹಿಯಲ್ಲಿ ನಿಧಿ ಮತ್ತು ಕರ್ಣನ ಪಾತ್ರಕ್ಕೆ ಹೆಚ್ಚು ಫೋಕಸ್ ಮಾಡಲಾಗುತ್ತಿದೆ. ಹಾಗಾಗಿ ನಮೃತಾ ಗೌಡ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಈಗ ಸದ್ದು ಮಾಡುತ್ತಿದೆ.

57
ನಿತ್ಯಾ ಪಾತ್ರದ ಬಗ್ಗೆ ಅಭಿಮಾನಿಗಳ ಬೇಸರ

ಅಭಿಮಾನಿಗಳ ಬೇಸರವೂ ಅದೇ. ನಮೃತಾ ಗೌಡ ಜನಪ್ರಿಯ ನಟಿ, ಆದರೆ ಕರ್ಣ ಧಾರಾವಾಹಿ ತಂಡ, ನಟಿಯನ್ನು ಧಾರಾವಾಯಿಗೆ ಕರೆಯಿಸಿ, ಅವರಿಗೆ ಸರಿಯಾದ ಪಾತ್ರ ನೀಡದೆ, ಪೋಷಕ ಪಾತ್ರ ನೀಡಿದ್ದಾರೆ ಎನ್ನುವ ಬೇಸರ ಅಭಿಮಾನಿಗಳದ್ದು.

67
ಕರ್ಣ ಧಾರಾವಾಹಿ ಕಥೆ ಏನು?

ಕರ್ಣ ಧಾರಾವಾಹಿಯಲ್ಲಿ ಇದೀಗ ಕರ್ಣ ಮತ್ತು ನಿಧಿ ಮದುವೆಯಾಗಿದೆ. ಕರ್ಣನ ಬಾಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಂಡಿವೆ. ನಿತ್ಯಾ ಮತ್ತು ಅಜ್ಜಿ ಕರ್ಣನ ಮನೆ ಬಿಟ್ಟು, ತಮ್ಮ ಹಳೆ ಮನೆಗೆ ಹೋಗಿದ್ದಾರೆ. ಹಾಗಾಗಿ ಇದೀಗ ನಿತ್ಯಾ ಪಾತ್ರ ತೆರೆ ಮೇಲೆ ಬರುವುದೇ ಇಲ್ಲ. ನಿಧಿ -ಕರ್ಣನ ಲವ್, ಹೋರಾಟ ಇವುಗಳೇ ಸದ್ಯ ಪ್ರಸಾರವಾಗುತ್ತಿದೆ.

77
ನಮೃತಾ ಗೌಡ ಈ ಬಗ್ಗೆ ಏನು ಹೇಳಿದ್ದಾರೆ?

ನಮೃತಾ ಗೌಡ ಕರ್ಣ ಧಾರಾವಾಹಿಯಲ್ಲಿ ಉಳಿಯುವ ಬಗ್ಗೆ ಆಗಲಿ ಅಥವಾ ಅಲ್ಲಿಂದ ಹೊರಗೆ ಬರುವ ಕುರಿತಾಗಲಿ ಇಲ್ಲಿವರೆಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ನಟಿ ಶೇರ್ ಮಾಡುತ್ತಿರುವ ಅಭಿಮಾನಿಗಳ ಪೋಸ್ಟ್ ನೋಡಿದ್ರೆ, ನಮೃತಾ ಗೌಡ ಅವರಿಗೂ ಕೂಡ ನಿತ್ಯಾ ಪಾತ್ರದಿಂದ ಬೇಸರವಾಗಿದೆ ಎಂದೆನಿಸುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories