Bigg Boss ಮಲ್ಲಮ್ಮನ ಮೊಮ್ಮಗು ಪವಾಡ: ಮನೆಗೆ ಬಂತು ಹೊಸ ಕಾರ್​- ವಿಡಿಯೋ ವೈರಲ್​

Published : Jun 04, 2026, 05:41 PM IST

ಬಿಗ್​ಬಾಸ್​ 12ರ ಖ್ಯಾತಿಯ ಮಲ್ಲಮ್ಮ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು. ಬಡತನ, ಪತಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಸ್ಫೂರ್ತಿಯಾಗಿರುವ ಅವರು, ಇದೀಗ ತಮ್ಮ ಕುಟುಂಬದೊಂದಿಗೆ ಹೊಸ ಮಾರುತಿ ಸುಜುಕಿ ಕಾರನ್ನು ಖರೀದಿಸಿ ಸಂಭ್ರಮಿಸಿದ್ದಾರೆ.

PREV
15
ಬಿಗ್​ಬಾಸ್​ ಖ್ಯಾತಿಯ ಮಲ್ಲಮ್ಮ

ಬಿಗ್​ಬಾಸ್​ 12 (Bigg Boss 12)ರಲ್ಲಿ ಕೆಲವೇ ದಿನ ಇದ್ದರೂ ಎಲ್ಲರ ಮನಸ್ಸನ್ನು ಗೆದ್ದವರು, ಮುಗ್ಧತನದಿಂದಲೇ ಎಲ್ಲರಿಗೂ ಹತ್ತಿರವಾದವರು ಮಲ್ಲಮ್ಮ. ಬಿಗ್​ಬಾಸ್​ ಎಂದರೆ ಕಾಂಟ್ರವರ್ಸಿ ಮಾಡಿದವರಿಗಷ್ಟೇ ಅವಕಾಶ ಇರುವುದು, ಅವರಷ್ಟೇ ದೀರ್ಘ ಅವಧಿಯವರೆಗೆ ಮನೆಯಲ್ಲಿ ಇರುವುದು ಎಂಬೆಲ್ಲಾ ಮಾತುಗಳ ನಡುವೆ, ಯಾವುದೇ ಗಲಾಟೆ ಮಾಡದೇ ಬಲು ಬೇಗನೇ ಬಿಗ್​ಬಾಸ್​ನಿಂದ ಹೊರಬಂದ ಮಲ್ಲಮ್ಮ ಈಗ ಸ್ಟಾರ್​ ಸೆಲೆಬ್ರಿಟಿಯಾಗಿದ್ದಾರೆ.

25
ಮಹಿಳೆಯರಿಗೆ ಸ್ಫೂರ್ತಿ

ಅವರು ಏನು ಮಾಡಿದರೂ ಚೆಂದ ಎನ್ನುವಂತಿದೆ. ಸದಾ ಎಲ್ಲರನ್ನೂ ನಗಿಸುತ್ತಲೇ ಇರುವ ಮಲ್ಲಮ್ಮ ಇದಾಗಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಪತಿಯನ್ನು ಕಳೆದುಕೊಂಡರೂ, ಬಡತನದ ನಡುವೆಯೂ ಈ ವಯಸ್ಸಿನಲ್ಲಿ ಸೋಷಿಯಲ್​ ಮೀಡಿಯಾದ ಹೀರೋ ಆಗಿ, ಬಿಗ್​ಬಾಸ್​ವರೆಗೆ ವೇದಿಕೆ ಕಲ್ಪಿಸಿಕೊಂಡ ಇವರು ಮಹಿಳೆಯರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ.

35
ಮೊಮ್ಮಗು ಜನನ

ಮಲ್ಲಮ್ಮ ಬಿಗ್​ಬಾಸ್ ಮನೆಯಿಂದ ಹೊರಕ್ಕೆ ಬಂದಾಗ ಅವರ ಮಗನಿಗೆ ಮಗು ಜನಿಸಿತ್ತು. ಅದನ್ನು ಬಿಗ್​ಬಾಸ್​​ ಮನೆಗೆ ಕರೆತಂದು ಸಂಭ್ರಮಿಸಿದ್ದರು ಮಲ್ಲಮ್ಮ.

45
ಕೀ ಹಸ್ತಾಂತರ

ಇದೀಗ ಮಲ್ಲಮ್ಮ ಅವರು ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಮಗ-ಸೊಸೆ, ಮೊಮ್ಮಗು ಜೊತೆಗೆ ಷೋರೂಮ್​ಗೆ ಬಂದು ಕಾರನ್ನು ಖರೀದಿ ಮಾಡಿದ್ದಾರೆ ಮಲ್ಲಮ್ಮ

55
ಶುಭಾಶಯಗಳ ಮಹಾಪೂರ

ಮಾರುತಿ ಸುಜುಕಿ ಅವರು ಮಲ್ಲಮ್ಮನವರಿಗೆ ಕೀ ಹಸ್ತಾಂತರ ಮಾಡಿದ್ದು ಅದರ ವಿಡಿಯೋ ವೈರಲ್​ ಆಗಿದೆ. ಮಲ್ಲಮ್ಮ ಅವರಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories