Bigg Boss ಫ್ರೆಂಡ್​ಶಿಪ್​ ಚಾಲೆಂಜ್​ನಲ್ಲಿ ಗೆಲ್ಲೋರು ಯಾರು? ಇಂಥ ಸವಾಲು ಹಾಕೋ ಜಗತ್ತಿನ ಏಕೈಕ ವ್ಯಕ್ತಿನಾ ಗಿಲ್ಲಿ?

Published : Dec 21, 2025, 12:40 PM IST

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ, ಮ್ಯೂಟೆಂಟ್ ರಘು ಅವರಿಗೆ ವಿಶಿಷ್ಟವಾದ ಚಾಲೆಂಜ್ ಹಾಕಿದ್ದಾರೆ. ತನ್ನನ್ನು ಸ್ನೇಹಿತನಾಗಿ ಸ್ವೀಕರಿಸಬೇಕೆಂಬ ಗಿಲ್ಲಿಯ ಸವಾಲಿಗೆ, ಶೋ ಮುಗಿದ ನಂತರ ಒಂದು ವಾರ ತಮ್ಮ ಮನೆಯಲ್ಲಿ ಉಳಿದುಕೊಳ್ಳುವಂತೆ ರಘು ಪ್ರತಿ-ಸವಾಲು ಹಾಕಿದ್ದಾರೆ.

PREV
16
ರಘು-ಗಿಲ್ಲಿ ಸ್ನೇಹ, ಮುನಿಸು

ಸದ್ಯ ಬಿಗ್​ಬಾಸ್​ (Bigg Boss)ನಲ್ಲಿ ಮ್ಯೂಟಂಟ್​ ರಘು ಮತ್ತು ಗಿಲ್ಲಿ ನಟನ ನಡುವೆ ಆಗಾಗ್ಗೆ ವಾಕ್ಸಮರ ನಡೆಯುತ್ತಲೇ ಇರುತ್ತದೆ. ಇನ್ನೇನು ಬಿಗ್​ಬಾಸ್​ ಮುಗಿಯುವ ಹಂತದಲ್ಲಿ ಇರುವ ಕಾರಣದಿಂದಾಗಿ ಟಾಸ್ಕ್ ಭರಾಟೆಗಳ ಜೊತೆಗೆ ಜಗಳ, ಗದ್ದಲ ಎಲ್ಲವೂ ಸಹಜವೇ.

26
ರಘು-ಗಿಲ್ಲಿ ಜೊತೆಯಾಟ

ಈ ಹಿಂದೆಯೂ ಗಿಲ್ಲಿ ನಟ (Bigg Boss Gilli Nata) ಮತ್ತು ರಘು ಅವರ ನಡುವೆ ಗಲಾಟೆ, ಜಗಳ, ಪ್ರೀತಿ ಎಲ್ಲವೂ ನಡೆದೇ ಇದೆ.

36
ರಘುಗೆ ಗಿಲ್ಲಿ ಚಾಲೆಂಜ್​

ಇದೀಗ ಗಿಲ್ಲಿ ಅವರು, ರಘು ಅವರಿಗೆ ಒಂದು ಚಾಲೆಂಜ್​ ಹಾಕಿದ್ದಾರೆ. ಭೂಮಿಯ ಮೇಲೆ ಯಾರೂ ಇದುವರೆಗೂ ಮಾಡದ ಚಾಲೆಂಜ್​ ಇದು ಎಂದು ಖುದ್ದು ಗಿಲ್ಲಿ ರಘು ಅವರಿಗೆ ಹೇಳಿದ್ದಾರೆ.

46
ಫ್ರೆಂಡ್​ ಅಂತ ಅಕ್ಸೆಪ್ಟ್​ ಮಾಡಬೇಕು

ಅದೇನೆಂದರೆ, ನೀನು ನನ್ನನ್ನು ಫ್ರೆಂಡ್​ ಅಂತ ಅಕ್ಸೆಪ್ಟ್​ ಮಾಡಬೇಕು. ಇಡೀ ಭೂಮಿ ಮೇಲೆ ಇಂಥ ಚಾಲೆಂಜ್​ ಯಾರೂ ಮಾಡಿಲ್ಲ ಎಂದಿದ್ದಾರೆ.

56
ರಘು ರಿಪ್ಲೈ

ಅದಕ್ಕೆ ಮ್ಯೂಟೆಂಟ್​ ರಘು (Bigg Boss Mutant Raghu) ಅದೆಲ್ಲಾ ಸಾಧ್ಯವಿಲ್ಲ. ಆಚೆಗೆ ಬಂದ ಮೇಲೆ ನೀನು ಒಂದು ವಾರ ನನ್ನ ಮನೆಯಲ್ಲಿ ಇರಲು ಒಪ್ಪಿಕೊಂಡರೆ ನಾನು ಫ್ರೆಂಡ್​ಷಿಪ್​ ಒಪ್ಪಿಕೊಳ್ಳುತ್ತೇನೆ ಎಂದಾಗ, ಗಿಲ್ಲಿ ನಟ ಅದೆಲ್ಲಾ ಸಾಧ್ಯವಿಲ್ಲ ಎಂದಿದ್ದಾರೆ.

66
ಇಂಥವರನ್ನು ನೋಡಿಲ್ಲ

ನೋಡು ಇದು ಒಳ್ಳೆಯ ಛಾನ್ಸ್​. ಲವ್​ ಮಾಡು, ನನ್​ ಹಿಂದೆ ಬೀಳಬೇಡ... ಹೀಗೆ ಏನೇನೋ ಚಾಲೆಂಜ್​ ಹಾಕೋದನ್ನು ನೀನು ನೋಡಿರ್ತಿಯಾ. ಆದರೆ ಫ್ರೆಂಡ್​ಷಿಪ್​ ಅಕ್ಸೆಪ್ಟ್​ ಮಾಡಿಕೊ ಎಂದು ಹೀಗೆ ಹೇಳೋರನ್ನು ನೋಡಿರಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories