Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಿಂದಲೂ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ನಡೆಯುತ್ತಲೇ ಇದೆ. ಇವರಿಬ್ಬರು ಸಾಕಷ್ಟು ಬಾರಿ ಜಗಳ ಆಡಿಕೊಂಡಿದ್ದಾರೆ. ಈ ವಾರ ಕೂಡ ಅದೇ ಆಯ್ತು. ಕಿಚ್ಚ ಸುದೀಪ್ ಕ್ಲಾಸ್ ಕೂಡ ತಗೊಂಡ್ರು.
ಟಾಸ್ಕ್‌ವೊಂದರಲ್ಲಿ ಅಶ್ವಿನಿ ಗೌಡ ಹಾಗೂ ಕಾವ್ಯ ಶೈವ ನಡುವೆ ಜಗಳ ಆಯ್ತು. ಹೋಗಮ್ಮ ಎಂದು ಕಾವ್ಯ ಶೈವ ಹೇಳಿದರು. ಅಶ್ವಿನಿ ಗೌಡ ಅವರಿಗೆ ಅಶ್ವಿನಿ ಎಂದರೆ ಇಷ್ಟ ಆಗೋದಿಲ್ಲ, ಆವಮ್ಮ, ಈವಮ್ಮ, ಆ ಯಮ್ಮ, ಈ ಯಮ್ಮ ಎಂದರೆ ಅಶ್ವಿನಿಗೆ ಇಷ್ಟವೇ ಆಗೋದಿಲ್ಲ. ಈ ಬಗ್ಗೆ ಕೂಡ ಚರ್ಚೆ ಆಗಿದೆ. ನನಗೆ ಅಶ್ವಿನಿ ಗೌಡ ಅವರೇ ಎಂದು ಹೇಳಬೇಕು ಎಂದು ಅವರೇ ಹೇಳಿದ್ದರು. ಈ ಬಗ್ಗೆ ಸುದೀಪ್ ಮಾತನಾಡಿ, ಅವರೇ ಎಂದಮಾತ್ರಕ್ಕೆ ಗೌರವ ಕೊಟ್ಟ ಹಾಗಲ್ಲ, ನನಗೆ ಕಿಚ್ಚ ಸುದೀಪ್ ಅವರೇ ಎಂದು ಬಯಸೋದಿಲ್ಲ ಎಂದಿದ್ದರು. ಇದೀಗ ಇಲ್ಲಿಗೆ ಮುಗಿದಿಲ್ಲ.
26
ಕಾವ್ಯ ಶೈವ ತಾಯಿ ವಿಷಯಕ್ಕೆ ಯಾಕೆ ಬಂದ್ರು?
ಕಾವ್ಯ ಶೈವ ಅವರು ಹೋಗಮ್ಮ ಎಂದಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಸಿಟ್ಟು ಬಂದಿದೆ. ಈ ಪದವನ್ನು ನಿಮ್ಮ ಅಮ್ಮನಿಗೆ ಹೇಳಿಕೋ ಹೋಗು ಎಂದು ಹೇಳಿದ್ದಾರೆ. ನನ್ನ ತಾಯಿ ವಿಚಾರಕ್ಕೆ ಬರಬೇಡಿ, ನನ್ನ ತಾಯಿಯಷ್ಟು ಯೋಗ್ಯತೆ ಇಲ್ಲ ಎಂದು ಕಾವ್ಯ ಶೈವ ಕೂಗಾಡಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
36
ಕಿಚ್ಚ ಸುದೀಪ್ ಅಂದು ಯಾಕೆ ಮಾತನಾಡಿರಲಿಲ್ಲ?
ಆರಂಭದ ಕೆಲ ವಾರಗಳಿಂದಲೂ ಅಶ್ವಿನಿ ಗೌಡ ಅವರಿಗೆ ಸರಿಯಾಗಿ ಕ್ಲಾಸ್ ತಗೋಬೇಕಿತ್ತು ಎಂದು ಜನರು ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದರು. ಸುದೀಪ್ ಮಾತ್ರ ವೀಕ್ಷಕರು ಬಯಸಿದಂತೆ ಕೆಲವೊಮ್ಮೆ ಆ ರೀತಿ ಮಾತನಾಡಿರಲಿಲ್ಲ. ಅದಕ್ಕೂ ಕಾರಣವಿತ್ತು.
ಅಶ್ವಿನಿ ಗೌಡ ಅವರು ಎಸ್ ಕ್ಯಾಟಗರಿ ಎಂದು ರಕ್ಷಿತಾಗೆ ಹೇಳಿದ್ದರು. ಈ ಬಗ್ಗೆ ದೊಡ್ಡ ಚರ್ಚೆ ಆಗಿತ್ತು. ಎಸ್ ಎಂದರೆ ಏನು ಅರ್ಥ ಎನ್ನೋದು ಎಲ್ಲರ ಪ್ರಶ್ನೆ ಆಗಿತ್ತು. ಕಿಚ್ಚ ಸುದೀಪ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ಅಶ್ವಿನಿ ಅವರು ಎಸ್ ಎಂದರೆ ಅಲ್ಲಿಗೆ ಸಿಲ್ಲಿ ಎಂದು ಅರ್ಥಕೊಟ್ಟರೆ ನಾನು ಏನು ಮಾಡೋಕೆ ಆಗುತ್ತದೆ? ಅಲ್ಲಿಗೆ ಆ ಚರ್ಚೆ ಮುಗೀತು, ವೇದಿಕೆ ಮೇಲೆ ನಿಂತು ನಿರೂಪಣೆ ಮಾಡೋದು, ಎಲ್ಲರ ಥರ ಕಾಮೆಂಟ್ ಮಾಡೋ ಹಾಗಲ್ಲ” ಎಂದು ಹೇಳಿದ್ದರು.
ಈ ಬಾರಿ ಕಿಚ್ಚ ಸುದೀಪ್ ಅವರು ಕೂಗಾಡಿದ್ದಾರೆ. ಇದನ್ನು ವೀಕ್ಷಕರು ನಿರೀಕ್ಷಿಸಿರಲಿಲ್ಲ. ಕಾವ್ಯ ಶೈವ ತಾಯಿ ಬಗ್ಗೆ ಅಶ್ವಿನಿ ಗೌಡ ಮಾತನಾಡಿದ್ದು, ಸುದೀಪ್ ಪಿತ್ತ ನೆತ್ತಿಗೇರಿಸಿತ್ತು. ಅಶ್ವಿನಿ ತಮ್ಮ ಮಾತಿನ ಬಗ್ಗೆ ಸಮರ್ಥನೆ ಮಾಡಿಕೊಂಡಾಗಲೂ ಕೂಡ, ಸುದೀಪ್ ಅವರು ಒಪ್ಪದೆ, ಹೀಗೆ ಮಾತನಾಡಬೇಡಿ ಎಂದು ಸಿಟ್ಟಿನಿಂದ ಹೇಳಿದ್ದಾರೆ.
56
ಕಿಚ್ಚ ಸುದೀಪ್, ಅಶ್ವಿನಿ ಗೌಡ ನಡುವಿನ ಸಂಭಾಷಣೆ
ಕಿಚ್ಚ ಸುದೀಪ್: ಚಿಕ್ಕದಾಗಿ ಶುರುವಾಯ್ತು, ಕಾವ್ಯ ತಾಯಿ ತನಕ ಹೋಗಿದ್ದು ಸರಿಯೇ? ಹೋಗಯ್ಯ ಎಂದರೆ ಅವರ ತಂದೆ ತನಕ ಹೋಗ್ತೀವಾ?
ಅಶ್ವಿನಿ ಗೌಡ: ಕಾವ್ಯ ಈ ಹಿಂದೆಯೂ ಮಾತನಾಡಿದ್ದಾರೆ, ಇದು ಮೊದಲ ಬಾರಿ ಅಲ್ಲ. ಈ ಬಾರಿ ನನಗೆ ಕಂಟ್ರೋಲ್ ಮಾಡೋಕೆ ಆಗಲಿಲ್ಲ.
ಕಿಚ್ಚ ಸುದೀಪ್: ಕಾವ್ಯ ಶೈವಗೆ ಹಿಡ್ಕೊಂಡು ಜಡಿರಿ, ಅವರಿಗೆ ಮಾತನಾಡಿ, ಸ್ಪರ್ಧಿಗಳ ಬಗ್ಗೆ ಮಾತನಾಡಿ
ಅಶ್ವಿನಿ ಗೌಡ: ನಾನು ಕಾವ್ಯ ತಾಯಿಗೆ ಯಾವುದೇ ಪದ ಬಳಕೆ ಮಾಡಿಲ್ಲ. ನನ್ನ ಮನೆಯಲ್ಲಿ ಟಿವಿ ನೋಡ್ತಾರೆ. ನಾನು ಕಾವ್ಯ ಅವರ ತಾಯಿಗಿಂತ ಸ್ವಲ್ಪ ದೊಡ್ಡವಳಾಗಿರಬಹುದು…
66
ಕ್ಷಮೆ ಕೇಳಿದ ಅಶ್ವಿನಿ ಗೌಡ
ಕಿಚ್ಚ ಸುದೀಪ್: ಕಾವ್ಯ ತಾಯಿ ಮನೆಯಲ್ಲಿದ್ದಾರೆ, ಅವರು ಏನು ಮಾಡಿದ್ದಾರೆ? ಯಾರು ಏನೇ ಹೇಳಿದ್ರೂ, ನೀವು ಎಷ್ಟು ಸಮರ್ಥನೆ ಮಾಡಿದ್ರೂ ಇದನ್ನು ನಾನು ಒಪ್ಪಲ್ಲ. ಕಾವ್ಯ ತಾಯಿ ಕೂಡ ಟಿವಿ ನೋಡ್ತಾರೆ. ಕಾವ್ಯ ತಪ್ಪು ಮಾಡಿದಾಗ, ಕಾವ್ಯ ತಾಯಿಯೇ ನನ್ನ ಮಗಳು ಮಿಸ್ಟೇಕ್ ಮಾಡಿದ್ರು ಎಂದು ಅವರು ಹೇಳಬಹುದು, ಅದಿಕ್ಕೆ ತಾಯಿ ಎನ್ನಬಹುದು. ನೀವು ಹೋಗಿ ಅಮ್ಮಂಗೆ ಹೇಳು ಎನ್ನೋದನ್ನು ನಿಮ್ಮ ಮನೆಯವರು ನೋಡಲ್ವಾ? ಅದು ತಪ್ಪಲ್ವಾ? ಯಾರು ಏನೇ ಮಾಡಿದರೂ ಕೂಡ ನಿಮ್ಮ ಮನೆಯವರ ಬಗ್ಗೆ ಹೋಗಬೇಡಿ. ಸ್ಪರ್ಧಿಗಳ ಮನೆಯವರು ಕೂಡ ನಮ್ಮ ವೀಕ್ಷಕರು.
ಕಿಚ್ಚ ಸುದೀಪ್ ಅವರು, “ನೀವು ತಪ್ಪು ಒಪ್ಪಲೇಬೇಕು” ಎಂದಾಗ ಅಶ್ವಿನಿ ಗೌಡ ಅವರು ಕ್ಷಮೆ ಕೇಳಿದ್ದಾರೆ, ನನ್ನದು ತಪ್ಪು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.