Bigg Boss: ದೇವರ ಮುಂದೆ ಬಿಕ್ಕಿಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ವೀಕೆಂಡ್​ ಹೊತ್ತಲ್ಲಿ ಅಂಥದ್ದೇನಾಯ್ತು?

Published : Dec 18, 2025, 06:54 PM IST

ಬಿಗ್‌ಬಾಸ್ ಮನೆಯಲ್ಲಿ ವೀಕೆಂಡ್ ಎಲಿಮಿನೇಷನ್ ಭಯ ಸ್ಪರ್ಧಿಗಳನ್ನು ಕಾಡುತ್ತಿದೆ. ಈ ನಡುವೆ, ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಅರಿಶಿಣ ಇಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದು, ಅವರ ಈ ನಿಗೂಢ ನಡವಳಿಕೆಯ ಹಿಂದಿನ ಕಾರಣವೇನು ಎಂಬ ಕುತೂಹಲ ಮೂಡಿಸಿದೆ.

PREV
16
ವೀಕೆಂಡ್​ನಲ್ಲಿ ನಡುಕ

ಬಿಗ್​ಬಾಸ್​ (Bigg Boss)ನಲ್ಲಿ ವೀಕೆಂಡ್​ ಹತ್ತಿರ ಬರುತ್ತಿದ್ದಂತೆಯೇ ಸ್ಪರ್ಧಿಗಳಲ್ಲಿ ನಡುಕ ಉಂಟಾಗುವುದು ಸಹಜವೇ. ಯಾವ ಸಮಯದಲ್ಲಿ ಯಾರು ಬೇಕಾದರೂ ಹೊರಕ್ಕೆ ಹೋಗಬಹುದು, ಇಲ್ಲಿಯವರೆಗೆ ಬಂದು ಎಲಿಮಿನೇಟ್​ ಆಗುವುದು ಯಾರಿಗೂ ಇಷ್ಟ ಇರುವುದಿಲ್ಲ.

26
ಅಲ್ಲೊಂದು, ಇಲ್ಲೊಂದು

ತಾವು ಹೇಗೆ ಆಡಿದ್ದೇವೆ ಎನ್ನುವುದು ಒಳಗಿರುವ ಸ್ಪರ್ಧಿಗಳಿಗೆ ತಿಳಿದಿರುವುದಿಲ್ಲ. ಅಲ್ಲಿಯೇ ಒಂದು ರೀತಿಯ ಆಟವಾಗಿದ್ದರೆ, ನೋಡುಗರಿಗೆ ಅದು ಇನ್ನೊಂದು ರೀತಿ ಕಾಣಿಸಿರುತ್ತದೆ.

36
ಲೆಕ್ಕಾಚಾರ ಬೇರೆ

ವೀಕ್ಷಕರ ಮತದಿಂದ ಸ್ಪರ್ಧಿಗಳು ಉಳಿದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆಯಾದರೂ, ಅಲ್ಲಿ ಕೆಲವೊಮ್ಮೆ ಬೇರೆಯದ್ದೇ ಲೆಕ್ಕಾಚಾರವೂ ಇರುತ್ತದೆ,, ಎಲ್ಲವೂ ಎಲ್ಲರೂ ಅಂದುಕೊಂಡಂತೆ ಇಲ್ಲ ಎಂದು ಇದಾಗಲೇ ಕೆಲವು ಸ್ಪರ್ಧಿಗಳು ಹೇಳಿದ್ದಾರೆ.

46
ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ

ಅದೇನೇ ಇದ್ದರೂ ಇದೀಗ ಚೈತ್ರಾ ಕುಂದಾಪುರ (Bigg Boss Chaitra Kundapura) ಅವರು ದೇವರ ಮುಂದೆ ಬಂದು ಅರಿಶಿಣವನ್ನು ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಶೇರ್​ ಮಾಡಿದೆ.

56
ಏಕೆ ಹೀಗೆ?

ಅವರು ಯಾಕೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ. ಆದರೆ ಅವರನ್ನು ನೋಡಿ ಅಲ್ಲಿಯೇ ಮಲಗಿರೋ ಗಿಲ್ಲಿನಟ ಮಾತ್ರ ವ್ಯಂಗ್ಯದಿಂದ ನಗುತ್ತಿರುವುದನ್ನು ನೋಡಬಹುದಾಗಿದೆ.

66
ನಿಗೂಢ ನಡೆ

ಪರೀಕ್ಷೆ ಹತ್ತಿರ ಬಂದಾಗ ಹೀಗೆ ದೇವರ ಮುಂದೆ ಬಂದು ಬೇಡಿಕೊಳ್ಳುವ ನಿಮ್ಮ ಸ್ನೇಹಿತರಿಗೆ ಟ್ಯಾಗ್​ ಮಾಡಿ ಎಂದು ಶೀರ್ಷಿಕೆ ಕೊಟ್ಟು ವಾಹಿನಿ ಇದನ್ನು ಶೇರ್​ ಮಾಡಿದೆ. ಆದರೆ ಚೈತ್ರಾ ಕುಂದಾಪುರ ಮಾತ್ರ ಯಾಕೆ ಹೀಗೆಲ್ಲಾ ಮಾಡಿದ್ದಾರೆ ಎನ್ನುವುದು ಮಾತ್ರ ನಿಗೂಢ.

Read more Photos on
click me!

Recommended Stories