Amruthadhaare: ಮತ್ತೆ ಚಿಗುರಿದ ಗೌತಮ್​ -ಭೂಮಿಕಾ ಪ್ರೀತಿ: ಕಣ್ಮುಚ್ಚಿಕೊಂಡ ಕಿಲಾಡಿ ಮಿಂಚು-ಆಕಾಶ್​

Published : Dec 18, 2025, 04:49 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಅಜ್ಜಿ ತನ್ನ ಕೊನೆಯ ಆಸೆಯ ನಾಟಕವಾಡಿ ಗೌತಮ್ ಮತ್ತು ಭೂಮಿಕಾರನ್ನು ಒಂದುಗೂಡಿಸಿದ್ದಾಳೆ. ಫೋಟೋ ತೆಗೆಸುವ ನೆಪದಲ್ಲಿ, ಗೌತಮ್-ಭೂಮಿಕಾರನ್ನು ಹತ್ತಿರ ತಂದು, ಅವರಿಬ್ಬರ ನಡುವಿನ ಪ್ರೀತಿಯ ಕ್ಷಣಕ್ಕೆ ಸಾಕ್ಷಿಯಾಗಿದ್ದಾಳೆ.

PREV
17
ಅಜ್ಜಿಯ ಪ್ಲ್ಯಾನ್​

ಅಮೃತಧಾರೆ (Amruthadhaare) ಯಲ್ಲಿ ಅಜ್ಜಿಯ ಪ್ಲ್ಯಾನ್​ ಯಶಸ್ವಿಯಾಗಿದೆ. ಇನ್ನೇನು ಹಾಸಿಗೆ ಹಿಡಿಯುತ್ತಿದ್ದೇನೆ, ಕೊನೆಯ ಆಸೆ ಈಡೇರಿಸುವಂತೆ ಹೇಳಿ ಅಜ್ಜಿ ಗೌತಮ್​ ಮತ್ತು ಭೂಮಿಕಾರನ್ನು ಕರೆಸಿಕೊಂಡಿದ್ದಾಳೆ. ಜೊತೆಗೆ ಮಕ್ಕಳನ್ನೂ ಬರುವಂತೆ ಮಾಡಿದ್ದಾಳೆ.

27
ನಾಟಕಕ್ಕೆ ಸಾಥ್​

ಅಜ್ಜಿಯ ಈ ನಾಟಕಕ್ಕೆ ಆನಂದ್​, ಭಾಗ್ಯಮ್ಮ ಸಾಥ್​ ಕೊಟ್ಟಿದ್ದಾರೆ. ಅದೇ ಇನ್ನೊಂದೆಡೆ, ಆಕಾಶ್​ ಮತ್ತು ಮಿಂಚುಗೆ ಸತ್ಯ ತಿಳಿದಿದ್ದರೂ ಅವರೂ ನಾಟಕವಾಡ್ತಿದ್ದಾರೆ. ಗೌತಮ್​ನೇ ತನ್ನ ಅಪ್ಪ ಎನ್ನುವುದು ತನಗೆ ಗೊತ್ತಾಗಿದೆ ಎಂದು ಆಕಾಶ್​ ಯಾರ ಬಳಿಯೂ ಬಾಯಿ ಬಿಟ್ಟಿಲ್ಲ.

37
ಮಕ್ಕಳ ಚಿಂತೆಯಲ್ಲಿ...

ಇದೀಗ ಅಜ್ಜಿ ಗೌತಮ್​ ಮತ್ತು ಭೂಮಿಕಾರಿಗೆ ಆಶೀರ್ವಾದ ಮಾಡಿದಾಗ ಮಕ್ಕಳು ಪ್ರಶ್ನೆ ಕೇಳಿದ್ರೆ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ಇದ್ದಾಳೆ ಭೂಮಿಕಾ. ಆದರೆ ಮಕ್ಕಳಿಗೆ ಇದಾಗಲೇ ಎಲ್ಲವೂ ಗೊತ್ತಾಗಿದೆ ಎನ್ನೋದು ಮಾತ್ರ ಅವರಿಗೆ ತಿಳಿದಿಲ್ಲ.

47
ಎಲ್ಲರ ಫೋಟೋ

ಅದೇ ಇನ್ನೊಂದೆಡೆ ಇಷ್ಟೆಲ್ಲಾ ಪ್ಲ್ಯಾನ್ ಮಾಡಿದ ಅಜ್ಜಿ ಗ್ರೂಪ್​ ಫೋಟೋ ತೆಗೆಸಿಕೊಳ್ಳೋಣ ಎಂದಿದ್ದಾಳೆ. ಎಲ್ಲರ ಫೋಟೋ ತೆಗೆದ ಬಳಿಕ ಭೂಮಿಕಾ ಮತ್ತು ಗೌತಮ್​ ಫೋಟೋ ತೆಗೆಸಿಕೊಳ್ಳಿ ಎಂದಿದ್ದಾಳೆ.

57
ಫೋಟೋ ಸೆಷನ್​

ಅವರಿಬ್ಬರೂ ದೂರ ದೂರ ಕುಳಿತಾಗ ಹತ್ತಿರ ಕುಳಿತುಕೊಳ್ಳುವಂತೆ ಹೇಳಿದ್ದಾಳೆ ಅಜ್ಜಿ. ಅಲ್ಲಿಗೆ ಒಂದು ಫ್ರೇಮ್​ನಲ್ಲಿ ಆ ಜೋಡಿ ಸೆರೆಯಾಗಿದೆ.

67
ಜಾರಿದ ಭೂಮಿಕಾ

ಅದೇ ಇನ್ನೊಂದೆಡೆ, ಮಕ್ಕಳು ಕೇಳಿದ್ರೆ ಏನು ಹೇಳೋದು ಎಂದು ಭೂಮಿಕಾ ಗೌತಮ್​ಗೆ ಕೇಳ್ತಿರೋ ಹೊತ್ತಿನಲ್ಲಿಯೇ ಭೂಮಿಕಾ ಜಾರಿ ಬೀಳುವಾಗ ಗೌತಮ್​ ಹಿಡಿದುಕೊಂಡಿದ್ದಾನೆ. ಇಬ್ಬರೂ ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾರೆ.

77
ಕಣ್ಣು ಮುಚ್ಚಿದ ಮಿಂಚು-ಆಕಾಶ್​

ಇದನ್ನು ನೋಡಿದ ಮಿಂಚು ಮತ್ತು ಆಕಾಶ್​ ಪರಸ್ಪರ ಕಣ್ಣು ಮುಚ್ಚಿದ್ದಾರೆ. ಮಲ್ಲಿ ಕೂಡ ಕಣ್ಣುಮುಚ್ಚಿಕೊಂಡಿದ್ದಾಳೆ. ಒಟ್ಟಿನಲ್ಲಿ ಅಲ್ಲಿ ಎಲ್ಲವೂ ಸುಖಾಂತ್ಯವಾಗಿದೆ. ಸದ್ಯ ಸೀರಿಯಲ್​ಮುಗಿಯುವುದು ಒಂದೇ ಬಾಕಿ ಇದೆ.

Read more Photos on
click me!

Recommended Stories