Bhagyalakshmi ಶೂಟಿಂಗ್​ನಲ್ಲಿ ಬೆಚ್ಚಿಬಿದ್ದ ನಟಿಯರು! ಏನೆಲ್ಲಾ ಆಯ್ತು ನೋಡಿ: ಇಷ್ಟು ರಿಸ್ಕ್​ ಯಾಕೆ ಕೇಳ್ತಿರೋ ಫ್ಯಾನ್ಸ್​!

Published : Dec 18, 2025, 06:31 PM IST

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ'ಯ ಚಿತ್ರೀಕರಣದ ವಿಡಿಯೋವೊಂದು ವೈರಲ್ ಆಗಿದೆ. ಬೆಟ್ಟದ ಮೇಲಿನಿಂದ ಬೀಳುವ ಅಪಾಯಕಾರಿ ದೃಶ್ಯಕ್ಕಾಗಿ ನಟಿಯರಾದ ಸುಷ್ಮಾ ರಾವ್ ಮತ್ತು ಕಾವ್ಯಾ ಗೌಡ ತೆಗೆದುಕೊಂಡ ರಿಸ್ಕ್ ಹಾಗೂ ಗ್ರೀನ್ ಸ್ಕ್ರೀನ್ ತಂತ್ರಜ್ಞಾನದ ಬಳಕೆಯ ಬಗ್ಗೆ ಈ ಲೇಖನ ವಿವರಿಸುತ್ತದೆ.

PREV
18
ಇಡೀ ಟೀಂ ಸರ್ಕಸ್​

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ.

28
ಭಾಗ್ಯಲಕ್ಷ್ಮಿ ಸೀರಿಯಲ್​ BTS

ಅಂಥದ್ದೇ ಒಂದು ಶೂಟಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದು ಕಲರ್ಸ್​ ಕನ್ನಡದ ಫೇಮಸ್​ ಸೀರಿಯಲ್​ ಭಾಗ್ಯಲಕ್ಷ್ಮಿ. ಇದಾಗಲೇ ಕೆಲವು ವರ್ಷಗಳನ್ನು ಪೂರೈಸಿರುವ ಭಾಗ್ಯಲಕ್ಷ್ಮಿಯಲ್ಲಿ, ಭಾಗ್ಯಳಿಗೆ ಗೋಳು ಕೊಡುವುದಕ್ಕಾಗಿ ಆಕೆಯ ಪತಿ ತಾಂಡವ್​ ಮತ್ತು ಪತಿಯ ಲವರ್​ ಶ್ರೇಷ್ಠಾ ಮಾಡುವ ಕಿತಾಪತಿಗಳನ್ನು ನೋಡುತ್ತಲೇ ಇದ್ದಾರೆ ಸೀರಿಯಲ್​​ ಪ್ರೇಮಿಗಳು.

38
ಶ್ರೇಷ್ಠಾ-ಭಾಗ್ಯ

ಇದೀಗ ಬೆಟ್ಟದ ಮೇಲಿನಿಂದ ಬೀಳುವ ದೃಶ್ಯವೊಂದರ ಚಿತ್ರೀಕರಣದ ಮೇಕಿಂಗ್​ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಶ್ರೇಷ್ಠಾ, ಭಾಗ್ಯಲಕ್ಷ್ಮಿ ಸೇರಿದಂತೆ ಇಡೀ ತಂಡ ಯಾವ ರೀತಿಯಲ್ಲಿ ರಿಸ್ಕ್​ ತೆಗೆದುಕೊಂಡಿದೆ ಎನ್ನೋದನ್ನು ನೋಡಬಹುದು. ಇದನ್ನು ಮಲ್ಲೇಶ್ ​ಮೇಕಪ್​ ಸ್ಟುಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ.

48
ಮೇಕಿಂಗ್​ ವಿಡಿಯೋ

ಇದರಲ್ಲಿ ಶ್ರೇಷ್ಠಾ ಬೆಟ್ಟದಿಂದ ಕೆಳಕ್ಕೆ ಬೀಳುವಾಗ ಭಾಗ್ಯ ಆಕೆಯನ್ನು ಎತ್ತಿಹಿಡಿಯುವ ದೃಶ್ಯವಿದೆ. ಅದನ್ನು ಯಾವ ರೀತಿಯಲ್ಲಿ ಶೂಟಿಂಗ್ ಮಾಡಲಾಗಿದೆ ಎನ್ನುವುದನ್ನು ಇದರಲ್ಲಿ ನೋಡಬಹುದು.

58
ಗ್ರೀನ್​ ಸ್ಕ್ರೀನ್​ ಟೆಕ್ನಿಕ್​

ಅಷ್ಟಕ್ಕೂ ಇವೆಲ್ಲಾ ಗ್ರೀನ್​ ಸ್ಕ್ರೀನ್​ ಟೆಕ್ನಿಕ್​. ಇದರ ಅರ್ಥ ಹಸಿರು ಅಥವಾ ನೀಲಿ ಪರದೆಯನ್ನು ಹಾಕಿ ಇಂಥ ದೃಶ್ಯಗಳನ್ನು ಚಿತ್ರಿಸುತ್ತಾರೆ. ಬಳಿಕ ಆ ಸ್ಕ್ರೀನ್​ ವೀಕ್ಷಕರಿಗೆ ಪರದೆಯ ಮೇಲೆ ಕಾಣಿಸುವುದಿಲ್ಲ. ಅಲ್ಲಿ ಬೆಟ್ಟ, ಗುಡ್ಡ, ಮನೆ ಹೀಗೆ ಏನು ಆ ದೃಶ್ಯಕ್ಕೆ ಸೂಟ್​ ಇರುತ್ತದೆಯೋ ಅದು ಕಾಣಿಸುತ್ತದೆ. ಇಲ್ಲಿಯೂ ಅದೇ ಟೆಕ್ನಿಕ್​ ಬಳಕೆಯಾಗಿದೆ.

68
ಬೆಟ್ಟದಿಂದ ಎತ್ತುವ ದೃಶ್ಯ

ಅದೇ ರೀತಿ ಬೆಟ್ಟದಿಂದ ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತುವ ದೃಶ್ಯದಲ್ಲಿ ಯಾರೂ ಬೆಟ್ಟದ ಕೆಳಗೆ ಇರುವುದಿಲ್ಲ. ಇಲ್ಲಿ ಕೂಡ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಅವರು, ಕೆಳಗೆ ಶ್ರೇಷ್ಠಾ ಇದ್ದಾಳೆ ಎನ್ನುವ ಕಲ್ಪನೆ ಮಾಡಿಕೊಂಡು ಆಕೆಯನ್ನು ಹಿಡಿದು ಎಳೆಯುತ್ತಿದ್ದಾರೆ. ಆದರೆ ಬೆಟ್ಟದ ತುದಿಯಲ್ಲಿಯೇ ಈ ದೃಶ್ಯ ಚಿತ್ರೀಕರಿಸುವ ಹಿನ್ನೆಲೆಯಲ್ಲಿ, ಸುಷ್ಮಾ ಅವರು ಅರೆಕ್ಷಣ ಕೆಳಕ್ಕೆ ನೋಡಿ ಗಾಬರಿಯಾದದ್ದನ್ನು ಇಲ್ಲಿ ನೋಡಬಹುದು.

78
ಬೆಟ್ಟದಿಂದ ಬೀಳುವುದು

ಅದೇ ರೀತಿ ಶ್ರೇಷ್ಠಾ ಬೆಟ್ಟದಿಂದ ಬೀಳುವ ದೃಶ್ಯದ ಸಮಯದಲ್ಲಿ ಹೇಗೆ ಹಗ್ಗ ಕಟ್ಟಲಾಗುತ್ತದೆ. ಮೇಲೆ ಹೇಗೆ ಕ್ಯಾಮೆರಾಮನ್​ ನಿಂತಿರುತ್ತಾರೆ ಹಾಗೂ ಹಗ್ಗದ ಸಹಾಯದಿಂದ ಶ್ರೇಷ್ಠಾ ಕ್ಯಾಮೆರಾವನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ ಇತ್ಯಾದಿಯನ್ನು ನೋಡಬಹುದಾಗಿದೆ.

88
ಇಂಥ ರಿಸ್ಕ್​ ಯಾಕೆ?

ಈ ಶೂಟಿಂಗ್​ ವೇಳೆ ಒಂದು ಹಂತದಲ್ಲಿ ಭಾಗ್ಯಲಕ್ಷ್ಮಿ ಪಾತ್ರಧಾರಿ ಸುಷ್ಮಾ ಕೆ. ರಾವ್​ ಮತ್ತು ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಅಕ್ಷರಶಃ ಬೆಚ್ಚಿಬಿದ್ದರು. ಇದನ್ನು ನೋಡಿದ ವೀಕ್ಷಕರು ಇಷ್ಟೊಂದು ರಿಸ್ಕ್​ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಸುಲಭದಲ್ಲಿ ಹಲವಾರು ರೀತಿಯ ಟೆಕ್ನಿಕ್​ ಇರುವಾಗ ಇಂಥ ರಿಸ್ಕ್​ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

Read more Photos on
click me!

Recommended Stories