Bigg Boss: ಈಗ ಬಂತು ನೋಡಿ ಮಜಾ! Ashwini Gowda ತನ್ನಂತೇ ಮಾತಾಡೋ ಹಾಗೆ ಮಾಡಿದ Rakshita Shetty!

Published : Dec 12, 2025, 04:02 PM IST

ಬಿಗ್‌ಬಾಸ್‌ನಲ್ಲಿ ತನ್ನ ಅರೆಬರೆ ಕನ್ನಡದಿಂದಲೇ ಫೇಮಸ್ ಆಗಿರುವ ರಕ್ಷಿತಾ ಶೆಟ್ಟಿಯನ್ನು, ಅಶ್ವಿನಿ ಗೌಡ ನಿರಂತರವಾಗಿ ಟೀಕಿಸುತ್ತಿದ್ದರು. ಆದರೆ ಇದೀಗ ಅಶ್ವಿನಿ ಗೌಡ ಅವರೇ ರಕ್ಷಿತಾ ಶೈಲಿಯಲ್ಲಿ 'ಮಿನಿಷ' ಎಂದು ಕನ್ನಡ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

PREV
17
ರಕ್ಷಿತಾ ಮತ್ತು ಅಶ್ವಿನಿ

ಬಿಗ್​ಬಾಸ್​ನಲ್ಲಿ (Bigg Boss) ಸದ್ಯ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಇಬ್ಬರೂ ಫೇಮಸ್ಸೇ. ಇಬ್ಬರೂ ಫೈನಲಿಸ್ಟ್​ ಎಂದು ಇದಾಗಲೇ ವೀಕ್ಷಕರು ತೀರ್ಪನ್ನೂ ಕೊಟ್ಟಾಗಿ ಬಿಟ್ಟಿದೆ. ರಕ್ಷಿತಾ ಶೆಟ್ಟಿ (Bigg Boss Rakshita Shetty) ಅರೆ ಬರೆ ಕನ್ನಡದಿಂದ ಫೇಮಸ್ ಆಗ್ತಿದ್ರೆ, ಅಶ್ವಿನಿ ಗೌಡ ಜಗಳದಿಂದ ಬಿಗ್​ಬಾಸ್​ ಟಿಆರ್​ಪಿ ಏರಿಸುತ್ತಿದ್ದಾರೆ.

27
ರಕ್ಷಿತಾ ಮೇಲೆ ಆರೋಪ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಕನ್ನಡ ಚೆನ್ನಾಗಿ ಬಂದರೂ ಆಕೆ ನಾಟಕ ಮಾಡುತ್ತಿದ್ದಾಳೆ ಎಂದು ಇದಾಗಲೇ ಕೆಲವು ಬಿಗ್​ಬಾಸ್​​ ಸ್ಪರ್ಧಿಗಳು ಆರೋಪ ಮಾಡಿದ್ದು, ಈಗಲೂ ಆ ಆರೋಪ ಕೇಳಿಬರುತ್ತಲೇ ಇದೆ.

37
ಕನ್ನಡದ ಬಗ್ಗೆ ಅನುಮಾನ

ಅದರಲ್ಲಿಯೂ ಮುಖ್ಯವಾಗಿ, ಅಶ್ವಿನಿ ಗೌಡ (Bigg Boss Ashwini Gowda) ಇಂಥ ಆರೋಪ ಮಾಡುತ್ತಿರುವವರಲ್ಲಿ ಮೊದಲಿಗರು. ಆಕೆ ಎಲ್ಲರ ಅಟೆನ್ಷನ್​ ಸೀಕ್​ ಮಾಡಲು ಹೀಗೆ ಮಾಡುತ್ತಾಳೆ. ಜಗಳ ಆಡುವಾಗ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾಳೆ ಎಂದೆಲ್ಲಾ ಆರೋಪ ಮಾಡಿದ್ದಾರೆ.

47
ಅಭಿಮಾನಿಗಳು ಹೇರಳ

ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಒಂದರ್ಥದಲ್ಲಿ ಬಿಗ್​ಬಾಸ್​ಗೆ ಸೆಲೆಕ್ಟ್​ ಆಗಿದ್ದೇ ಆಕೆಯ ಯುಟ್ಯೂಬ್​ನಲ್ಲಿ ಅಭಿಮಾನಿಗಳ ಕ್ರೇಜ್​ ನೋಡಿ. ಯುಟ್ಯೂಬ್​ ಆರಂಭಿಸಿ ಆರೇ ತಿಂಗಳಿನಲ್ಲಿ ಈ ಪರಿಯ ಅಭಿಮಾನಿಗಳನ್ನು ಪಡೆದುಕೊಂಡಿರುವ ಹಿಂದೆಯೂ ಇರುವುದು ಆಕೆಯ ಅರೆಬರ ಕನ್ನಡವೇ.

57
ಕನ್ನಡದಿಂದ ಫ್ಯಾನ್ಸ್​

ತುಳುನಾಡು ಮೂಲ ಆದರೂ ಹುಟ್ಟಿ ಬೆಳೆದ್ದೆಲ್ಲಾ ಮುಂಬೈನೇ ಆಗಿರೋ ಕಾರಣ ಕನ್ನಡವೇ ಗೊತ್ತಿಲ್ಲದ ರಕ್ಷಿತಾ ಶೆಟ್ಟಿ, ಇಲ್ಲೇ ಹುಟ್ಟಿ ಬೆಳೆದು ಕನ್ನಡ ಮಾತನಾಡಲು ಅಸಹ್ಯ ಪಟ್ಟುಕೊಳ್ಳುವವರ ತಲೆಯ ಮೇಲೆ ಹೊಡೆದಂತೆ ಕನ್ನಡ ಮಾತನಾಡುತ್ತಿದ್ದಾರೆ. ಹಲವು ಭಾಷೆಗಳು ಅದರಲ್ಲಿ ಮಿಕ್ಸ್​ ಆದರೂ ಅವರ ಕನ್ನಡ ಕಲಿಕೆ ಅವರಿಗೆ ಲಕ್ಷಾಂತರ ಅಭಿಮಾನಿಗಳನ್ನು ಕೊಟ್ಟಿದೆ.

67
ರಕ್ಷಿತಾಳ ಮಾತು

ಅದೇನೇ ಇದ್ದರೂ, ಇದೀಗ ಕುತೂಹಲ ಎನ್ನುವಂತೆ ರಕ್ಷಿತಾರನ್ನು ಬೈದುಕೊಳ್ಳುವ ಅಶ್ವಿನಿ ಗೌಡ ಈಗ ರಕ್ಷಿತಾ ಮಾತನಾಡಿದಂತೆ ಕನ್ನಡ ಮಾತನಾಡಿದ್ದು, ಅದರ ಪ್ರೊಮೋ ಅನ್ನು ವಾಹಿನಿ ಹಂಚಿಕೊಂಡಿದೆ.

77
ಮಿನಿಷ ಮಿನಿಷ..

ಒನ್​ ಮಿನಿಟ್​ ಎನ್ನೋಕೆ ಕನ್ನಡದಲ್ಲಿ ಏನಂತಾರೆ ಎಂದು ಸೂರಜ್​ ಸಿಂಗ್​ ಕೇಳಿದಾಗ, ರಕ್ಷಿತಾಗೂ ಮೊದಲೇ ಅಶ್ವಿನಿ ಒಂದು ಮಿನಿಷ ಎಂದಿದ್ದಾರೆ. ಮಿನಿಷ ಮಿನಿಷ ಎಂದು ಅದನ್ನೇ ಹೇಳುವಂತೆ ರಕ್ಷಿತಾಗೂ ಹೇಳಿದ್ದಾರೆ. ಆದರೆ ಆಕೆ ಹೇಳುವುದೇ ಹಾಗೆ ಆಗಿದ್ದರಿಂದ ಮಿನಿಷ ಎಂದೇ ಹೇಳಿದ್ದಾರೆ. ಆಮೇಲೆ ಆಕೆ ಸರಿಯಾಗಿ ಹೇಳಿದ್ರೂ ಅಶ್ವಿನಿ ಮಾತ್ರ ಮಿನಿಷ ಮಿನಿಷ ಎನ್ನುತ್ತಲೇ ಇರುವುದನ್ನು ಇದರಲ್ಲಿ ನೋಡಬಹುದು.

Read more Photos on
click me!

Recommended Stories