ಬಿಗ್ಬಾಸ್ 12ರಲ್ಲಿ ರಕ್ಷಿತಾ ಶೆಟ್ಟಿಗೆ 'ಸೆಡೆ' ಎಂದು ನಿಂದಿಸಿದ್ದ ಕಾಕ್ರೋಚ್ ಸುಧಿಗೆ ಹಾಗೂ ಸೈಲೆಂಟ್ ಇದ್ದ ಅಶ್ವಿನಿ ಗೌಡ ಅವರಿಗೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ತರಗತಿ ತೆಗೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ತಪ್ಪಾಯಿತು ಎಂದು ಸುಧಿ ಕ್ಷಮೆ ಕೇಳಿದರೂ, ಸುದೀಪ್ ಹೇಳಿದ್ದೇನು?
ಬಿಗ್ಬಾಸ್ 12 (Bigg Boss 12) ಮಾತಿನ ಭರದಲ್ಲಿ ವೈಯಕ್ತಿಕ ನಿಂದನೆ ಮಾಡಿರುವ ಅಶ್ವಿನಿ ಗೌಡ ಅವರ ವಿರುದ್ಧ ಕೇಸ್ ದಾಖಲಾಗಿದೆ. ಇದೀಗ, ಸಿಟ್ಟಿನ ಭರದಲ್ಲಿ ಕಾಕ್ರೋಚ್ ಸುಧಿ ಅವರು ‘‘ಅವಳ್ಯಾವಳೋ ನಿನ್ನೆ ಮೊನ್ನೆ ಬಂದಿರೋ ಸೆಡೆ..’’ ಅಂತ ರಕ್ಷಿತಾ ಶೆಟ್ಟಿಗೆ ಹೇಳುವ ಮೂಲಕ ವೀಕ್ಷಕರ ಆಕ್ರೋಶಕ್ಕೆ ಕಾರಣ ಆಗಿದ್ದರು. ಈ ಸಂದರ್ಭದಲ್ಲಿ ಸುಧಿಗೆ ಗಿಲ್ಲಿ ನಟ ಎಚ್ಚರಿಸಿದ್ದರು ಕೂಡ.
26
ಕಾಕ್ರೋಚ್ ಸುಧಿ ಕ್ಷಮೆ
ಕೊನೆಗೆ, ಮಧ್ಯರಾತ್ರಿ 1.55 ಸುಮಾರಿಗೆ ಬಾತ್‌ರೂಮ್ ಏರಿಯಾದಲ್ಲಿ ರಕ್ಷಿತಾ ಶೆಟ್ಟಿಗೆ ಕಾಕ್ರೋಚ್ ಸುಧಿ ಕ್ಷಮೆ ಕೇಳಿದರು. ಸೂರಜ್ ಸಿಂಗ್, ಅಶ್ವಿನಿ ಗೌಡ ಹಾಗೂ ಜಾಹ್ನವಿ ಸಮ್ಮುಖದಲ್ಲಿ ರಕ್ಷಿತಾ ಶೆಟ್ಟಿ ಬಳಿ ಕಾಕ್ರೋಚ್ ಸುಧಿ ಕ್ಷಮೆಯಾಚಿಸಿದ್ದರು.
36
ಸುದೀಪ್ ಕ್ಲಾಸ್
ಇದೀಗ ಆ ಬಗ್ಗೆ ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ಎಲ್ಲರನ್ನೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೆಡೆ ಅಂದ್ರೆ ಏನು ಅರ್ಥ ಎಂದ್ರು ಸುಧಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಸುಧಿ ಅವರು ಮಗು ಅಂತ ಸರ್ ಎಂದಿದ್ದಾರೆ.
ಇದಕ್ಕೆ ಸುಮ್ಮನಾಗದ ಸುದೀಪ್, ನನಗೂ ನೀವು ಮಗು ಥರ ಕಾಣಿಸ್ತೀರಿ, ಸೆಡೆ ಅಂತನೇ ಕರೀಲಾ ಎಂದಾಗ, ಸುಧಿ ಏನೋ ಮಾತಿನ ಭರದಲ್ಲಿ ತಪ್ಪಾಯ್ತು, ಕ್ಷಮಿಸಿ ಎಂದಿದ್ದಾರೆ. ಆಗ ಸುದೀಪ್ ಇದು ಮಾತಿನ ಭರದಲ್ಲಿ ಆಗಿರೋದು ಅಲ್ಲ, ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
56
ಅಶ್ವಿನಿ ಗೌಡಗೂ ಕ್ಲಾಸ್
ಇದೇ ವಿಷಯವಾಗಿ ಅಶ್ವಿನಿ ಗೌಡ (Ashwini Gowda) ಅವರಿಗೂ ಕ್ಲಾಸ್ ತೆಗೆದುಕೊಂಡಿರುವ ಸುದೀಪ್ ಅವರು, ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದಾಗ ಏಕವಚನ ಬಳಸಬೇಡಿ, ಹಾಗೆ ಮಾಡಬೇಡಿ, ಹೀಗೆ ಮಾಡಬೇಡಿ ಎನ್ನುತ್ತೀರಿ. ಸುಧಿ ಅವರು ಈ ಶಬ್ದ ಹೇಳಿದಾಗ ಯಾಕೆ ಸೈಲೆಂಟ್ ಇದ್ರಿ ಎಂದು ಪ್ರಶ್ನಿಸಿದಾಗ, ಅಶ್ವಿನಿ ಅವರು ಫುಲ್ ನರ್ವಸ್ ಆದರು.
66
ಕಮೆಂಟಿಗರು ಏನಂದ್ರು?
ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿದೆ. ಜಾನ್ವಿಗೂ ಸರಿಯಾಗಿ ಬುದ್ಧಿ ಕಲಿಸಿ ಎಂದು ಹಲವು ಮಂದಿ ಕಮೆಂಟ್ಸ್ನಲ್ಲಿ ಹೇಳುತ್ತಿದ್ದಾರೆ.