Bigg Bossನಲ್ಲಿ ಊಹಿಸದ ತಿರುವು; ತಬ್ಬಿ ಭಾವುಕರಾದ ಹಾವು-ಮುಂಗುಸಿ! ಗಿಲ್ಲಿಗೆ ಅಶ್ವಿನಿ ಬಹು ಪರಾಕ್​

Published : Jan 15, 2026, 04:34 PM IST

ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸದಾ ಹಾವು-ಮುಂಗುಸಿಯಂತಿದ್ದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಒಂದಾಗಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಕ್ಕೆ ಗಿಲ್ಲಿ ನಟ ಅಶ್ವಿನಿಯವರ ಕ್ಷಮೆ ಕೇಳಿದರೆ,  ಅಶ್ವಿನಿ ಧನ್ಯವಾದ ತಿಳಿಸಿದ್ದಾರೆ. ಆಗಿದ್ದೇನು?

PREV
15
ಗ್ರ್ಯಾಂಡ್​ ಫಿನಾಲೆ

ಬಿಗ್​ಬಾಸ್​​ನಲ್ಲಿ (Bigg Boss 12) ಇನ್ನೇನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಇದಾಗಲೇ ಟಾಸ್ಕ್​ ಭರಾಟೆಗಳೂ ಜೋರಾಗಿದ್ದು, ಗೆಲ್ಲುವವರು ಯಾರು ಎನ್ನುವ ಬಗ್ಗೆ ಭಾರಿ ಮಟ್ಟದ ಚರ್ಚೆ ನಡೆಯುತ್ತಲೇ ಇದೆ.

25
ಅಚ್ಚರಿಯ ಬೆಳವಣಿಗೆ

ಇದರ ನಡುವೆಯೇ ಇದೀಗ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಅದೇನೆಂದರೆ ಬಿಗ್​ಬಾಸ್​ ಮನೆಯಲ್ಲಿ ಸದಾ ಹಾವು-ಮುಂಗುಸಿ ರೀತಿಯಲ್ಲಿ ಇದ್ದವರು ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ (Bigg Boss Ashwini Gowda and Gilli Nata). ಇವರಿಬ್ಬರ ನಡುವೆ ಗೆಲ್ಲುವವರು ಯಾರು ಎನ್ನುವ ಬಗ್ಗೆಯೂ ಚರ್ಚೆ ಬಲು ಜೋರಾಗಿಯೇ ನಡೆದಿದೆ.

35
ಒಂದಾದ ಸ್ಪರ್ಧಿ

ಸದಾ ಕಾಲು ಕೆದರಿಕೊಂಡು ಜಗಳ ಮಾಡುತ್ತಿದ್ದ ಇವರಿಬ್ಬರೂ ಇದೀಗ ಫಿನಾಲೆ ಹೊತ್ತಿನಲ್ಲಿಯೇ ಒಂದಾಗಿದ್ದಾರೆ. ಅಷ್ಟಕ್ಕೂ ಬಿಗ್​ಬಾಸ್​​ ಮನೆಯಲ್ಲಿ ಜಗಳ, ಕಾದಾಟ, ಹಾರಾಟ ಎಲ್ಲವೂ ಗೆಲ್ಲುವುದಕ್ಕಾಗಿಯೇ ಇರುವಂಥದ್ದು. ಅವರಲ್ಲಿ ವೈಯಕ್ತಿಕ ದ್ವೇಷ ಏನೂ ಇರುವುದಿಲ್ಲ ಎನ್ನಿ. ಅದೇ ರೀತಿ ಇದೀಗ ಅಶ್ವಿನಿ ಮತ್ತು ಗಿಲ್ಲಿ ಒಂದಾಗಿದ್ದಾರೆ.

45
ಸಾರಿ ಕೇಳಿದ ಗಿಲ್ಲಿ

ಅನೇಕ ಸಂದರ್ಭಗಳಲ್ಲಿ ನಾನು ನಿಮಗೆ ಹೋಗೇ ಬಾರೇ ಎಂದು ಏಕವಚನದಲ್ಲಿ ಕರೆದೆ. ನೀವು ನನಗಿಂತ ತುಂಬಾ ದೊಡ್ಡವರು, ಆ ರೀತಿ ಮಾತನಾಡಿ ತುಂಬಾ ತಪ್ಪು ಮಾಡಿದೆ ಕ್ಷಮಿಸಿಬಿಡಿ ಎಂದು ಗಿಲ್ಲಿ ನಟ ಅಶ್ವಿನಿ ಗೌಡ ಅವರಿಗೆ ಕೇಳಿದ್ದಾರೆ.

55
ನಿನಗೆ ಥ್ಯಾಂಕ್ಸ್​

ಅದಕ್ಕೆ ಅಶ್ವಿನಿ ಗೌಡ ಕೂಡ, ಜೀವನವನ್ನು ನಿನ್ನ ರೀತಿ ತುಂಬಾ ಲೈಟ್​ ಆಗಿಯೂ ತೆಗೆದುಕೊಂಡು ಎಂಜಾಯ್​ ಕೂಡ ಮಾಡಬಹುದು, ಎಲ್ಲವೂ ಸೀರಿಯಲ್​ ಆಗಿಯೇ ತೆಗೆದುಕೊಂಡು ಮಾಡಬೇಕೆಂದೇನೂ ಇಲ್ಲ ಎಂದು ತಿಳಿಸಿದ್ದಿಯಾ. ಈ ವೇದಿಕೆಯಲ್ಲಿ ನಾನು ನಿನಗೆ ಥ್ಯಾಂಕ್ಸ್​ ಕೂಡ ಹೇಳ್ತೇನೆ. ನಿನ್ನಿಂದ ಪಾಠ ಕಲಿತೆ ಎಂದಿದ್ದಾರೆ. ಕೊನೆಗೆ ಇಬ್ಬರೂ ಸೇರಿ ದ್ವೇಷವನ್ನು ಬೆಂಕಿಯಲ್ಲಿ ಸುಟ್ಟಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories