ಬಿಗ್ಬಾಸ್ 12ರ 2ನೇ ರನ್ನರ್ ಅಪ್ ಆದ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ನೋವಿನ ನಡುವೆಯೂ ಬಿಗ್ಬಾಸ್ ತಮಗೊಂದು ಅಮೂಲ್ಯ ರತ್ನ ನೀಡಿದೆ ಎಂದು ಹೇಳಿದ್ದಾರೆ. ಏನದು ರತ್ನ?
Bigg Boss ಮುಗಿದ ಮೇಲೆ, ಬಿಗ್ಬಾಸ್ ಸ್ಪರ್ಧಿಗಳು ಇನ್ನೂ ಅದರ ಮೆಲುಕು ಹಾಕುತ್ತಲೇ ಇದ್ದಾರೆ. ಹಲವರು ಬಿಗ್ಬಾಸ್ ಜರ್ನಿಯ ಬಗ್ಗೆ ಖುಷಿಯಿಂದ ನುಡಿಯುತ್ತಿದ್ದರೆ, ಮತ್ತೆ ಕೆಲವರು ಇನ್ನೂ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.
26
2ನೇ ರನ್ನರ್ ಅಪ್
ಜಗಳದ ಮೂಲಕವೇ ಫಿನಾಲೆವರೆಗೂ ತಲುಪಿದ ಅಶ್ವಿನಿ ಗೌಡ (Ashwini Gowda) ಅವರ ಆಟವನ್ನು ನೋಡಿದ ಹಲವರು ಇವರೇ ವಿನ್ ಆಗುತ್ತಾರೆ ಎಂದು ಹೇಳಿದ್ದರು. ಇಲ್ಲದೇ ಹೋದರೆ ಮೊದಲ ರನ್ನರ್ ಅಪ್ ಆದರೂ ಆಗಬಹುದು ಎಂದಿದ್ದರು. ಆದರೆ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
36
ಗಿಲ್ಲಿಯ ಗೆಲುವು
ಈ ಬಗ್ಗೆ ಅಶ್ವಿನಿ ಗೌಡ ಬಿಗ್ಬಾಸ್ನಿಂದ ಹೊರ ಬಂದ ಮೇಲೆ ಮಾಧ್ಯಮದವರ ಎದುರು ತುಂಬಾ ಅಸಮಾಧಾನ ಹೊರಹಾಕಿದ್ದು ಇದೆ. ಇದು ಕಾಮಿಡಿ ಷೋ ಅಲ್ಲ, ವ್ಯಕ್ತಿತ್ವದ ಆಟ ಎನ್ನುವ ಮೂಲಕ ಗಿಲ್ಲಿ ನಟನ ಗೆಲುವಿಗೆ ಅಸಮಾಧಾನ ಪಟ್ಟುಕೊಂಡಿದ್ದರು.
ಜೊತೆಗೆ, ತಮ್ಮಂಥ ಟಫ್ ಸ್ಪರ್ಧಿ ಹಿಂದೆಂದೂ ಇರಲಿಲ್ಲ. ಮುಂದೆ ಏನಾದ್ರೂ ಬಂದರೆ ನನ್ನನ್ನು ಮೀರಿರಬೇಕು ಎನ್ನುವ ಮೂಲಕ, ಬಿಗ್ಬಾಸ್ ಫಲಿತಾಂಶದ ಬಗ್ಗೆ ನೋವಿನಿಂದ ನುಡಿಯುತ್ತಲೇ ಬಂದವರು ಅಶ್ವಿನಿ ಗೌಡ (Bigg Boss Ashwini Gowda).
56
ಬಿಗ್ಬಾಸ್ನಲ್ಲಿ ಅಮೂಲ್ಯ ರತ್ನ
ಇದೀಗ ಅವರು ಬಿಗ್ಬಾಸ್ನ ಅನುಭವವನ್ನು ಹಂಚಿಕೊಳ್ಳುತ್ತಾ, ನನಗೆ ಬಿಗ್ಬಾಸ್ ಅಮೂಲ್ಯ ರತ್ನ ನೀಡಿದೆ. ಅದು ಎಂದರೆ, ಜಾಹ್ನವಿ ಎಂದಿದ್ದಾರೆ. ಜಾಹ್ನವಿಯಂಥ ಸ್ನೇಹಿತೆ ನನಗೆ ಸಿಕ್ಕಿದ್ದಾರೆ ಎಂದು ಖುಷಿಯಿಂದ ನುಡಿದಿದ್ದಾರೆ.
66
ಅವರು ನನ್ನ ಜಾನು
ನಾನು ಅವರನ್ನು ಜಾನು ಎಂದೇ ಕರೆಯುವುದು. ಈ ಸ್ನೇಹ, ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದುಕೊಳ್ಳುತ್ತೇನೆ. ಸ್ನೇಹ ಎಂದರೆ ಸುಖದಲ್ಲಿ ಭಾಗಿಯಾಗುವುದು ಮಾತ್ರವಲ್ಲ. ಬಿಗ್ಬಾಸ್ನ ನೂರಾರು ದಿನಗಳ ಪಯಣದಲ್ಲಿ ನಿಜವಾದ ಸ್ನೇಹ ಎನ್ನುವುದು ಸಿಗುವುದಿಲ್ಲ. ಅದನ್ನು ನಾನು ಜಾಹ್ನವಿ ಅವರಲ್ಲಿ ಪಡೆದುಕೊಂಡೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.