ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ: ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ

Published : Dec 08, 2025, 09:47 PM IST

ಪ್ರಬಲ ಸ್ಪರ್ಧಿ ಎನಿಸಿದ್ದ ಅಭಿಷೇಕ್ ಅವರು ಕ್ಯಾಪ್ಟನ್ ಆಗಿದ್ದಾಗಲೇ ಬಿಗ್ ಬಾಸ್ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ಅವರು, ವಿನ್ನರ್ ಹಾಗೂ ಟಾಪ್ 5 ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

PREV
17
ಅಭಿಷೇಕ್​ ಎಲಿಮಿನೇಷನ್​

ಫೈನಲ್​ ಸ್ಪರ್ಧಿಯೆಂದೇ ಬಿಂಬಿತವಾಗಿದ್ದ ಅಭಿಷೇಕ್​  ಶ್ರೀಕಾಂತ್​ (Bigg Boss Abhishek shrikanth) ಅವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಷಿಪ್‌ ಕೊಡಲಾಗಿತ್ತು, ಎರಡನೆಯ ಬಾರಿ ಇವರು ಕ್ಯಾಪ್ಟನ್​ ಆಗಿದ್ದರು. ಆದರೆ ಇದೀಗ ಕುತೂಹಲದ ಸನ್ನಿವೇಶದಲ್ಲಿ ಹೊರಕ್ಕೆ ಬಂದಿದ್ದಾರೆ.

27
ಕ್ಯಾಪ್ಟನ್​ ಆಗಿರುವಾಗಲೇ ಹೊರಕ್ಕೆ

ಈ ಮೂಲಕ ಕ್ಯಾಪ್ಟನ್​ ಆಗಿರುವಾಗಲೇ ಹೊರಕ್ಕೆ ಬಂದಿದ್ದಾರೆ. ಈ ವಾರ ಎಲಿಮಿನೇಷನ್ ಪಟ್ಟಿಯಲ್ಲಿ ಅಭಿಷೇಕ್ ಜೊತೆ, ಸೂರಜ್ ಮತ್ತು ಮಾಳು ಅವರು ಇದ್ದರು. ಈ ಮೂವರೂ ಸಹ ಪ್ರಬಲ ಸ್ಪರ್ಧಿಗಳಾಗಿದ್ದರು. ಅಭಿಷೇಕ್​ ಜರ್ನಿ ಮುಗಿದಿದೆ.

37
ಸೂಟ್​ಕೇಸ್​​ನಲ್ಲಿ ರಹಸ್ಯ

ಅಷ್ಟಕ್ಕೂ ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆ ಎಲ್ಲಕ್ಕಿಂತಲೂ ಡಿಫರೆಂಟ್​ ಆಗಿತ್ತು. ಎಲಿಮಿನೇಟ್​ ಆಗಿದ್ದ ಈ ಮೂವರನ್ನು ‘ಆಕ್ಟಿವಿಟಿ ರೂಮ್’ಗೆ ಕಳುಹಿಸಿದರು. ಅಲ್ಲಿ ಒಂದು ಸೂಟ್​ಕೇಸ್​ ಇತ್ತು. ಅದರಲ್ಲಿ ಹೊರಬೀಳುವವರ ಸಂದೇಶವಿತ್ತು. ಸೂಟ್‌ಕೇಸ್‌ಗಳನ್ನು ತೆರೆದಾಗ, ಅಭಿಷೇಕ್ ಅವರ ಸೂಟ್‌ಕೇಸ್‌ನಲ್ಲಿ ‘The End’ ಎಂದು ಬರೆಯಲಾಗಿತ್ತು.

47
ಸೆಲೆಬ್ರಿಟಿಯಾದ ಅಭಿಷೇಕ್​

ಸಹಜವಾಗಿ ಇದೀಗ ಅಭಿಷೇಕ್​ ಅವರು ಸೆಲೆಬ್ರಿಟಿಯಾಗಿದ್ದಾರೆ. ಹಾಗೆ ನೋಡಿದರೆ, ಅವರು ಇದಾಗಲೇ ಹಲವು ಸೀರಿಯಲ್​ಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದವರೇ. ಆದರೆ ಇದೀಗ ಬಿಗ್​ಬಾಸ್​ನಿಂದಾಗಿ ಇನ್ನು ಒಂದು ಹಂ ಮೇಲಕ್ಕೆ ಹೋಗಿದ್ದಾರೆ.

57
ಗಿಲ್ಲಿ ನಟನಲ್ಲ!

ಈ ಸಂದರ್ಭದಲ್ಲಿ, ಅವರಿಗೆ ಟಾಪ್​ 5 ಮತ್ತು ವಿನ್ನರ್​ ಬಗ್ಗೆ ಕೇಳಲಾಗಿದೆ. ಸಾಮಾನ್ಯವಾಗಿ ಎಲಿಮಿನೇಟ್​ ಆಗಿ ಬಂದ ಎಲ್ಲರ ಬಾಯಲ್ಲೂ ಇರುವುದು ಗಿಲ್ಲಿ ನಟ (Bigg Boss Gilli Nata) ಹೆಸರು. ಆದರೆ, ಅಭಿಷೇಕ್​ ಮಾತ್ರ ಬೇರೆಯವರ ಹೆಸರು ಹೇಳಿದ್ದಾರೆ.

67
ವಿನ್ನರ್​ ಯಾರು?

ಅವರ ದೃಷ್ಟಿಯಲ್ಲಿ ಧನುಷ್​ ಅವರೇ ವಿನ್ನರ್​. ಇವನು ಚೆನ್ನಾಗಿ ಆಡುತ್ತಾನೆ. ನನಗೆ ಅವನು ಮ್ಯಾಚ್​ ಆಗುತ್ತಿದ್ದ. ಸೆನ್ಸಿಬಲ್​ ಆಗಿದ್ದಾನೆ. ಅವನೇ ವಿನ್​ ಆಗಬೇಕು ಎಂದಿದ್ದಾರೆ.

77
ಟಾಪ್​ 5 ಯಾರು?

ಟಾಪ್​ 5 ಯಾರು ಎಂಬ ಪ್ರಶ್ನೆಗೆ, ಸಹಜವಾಗಿ ಎಲ್ಲರಂತೆಯೇ ಧನುಷ್​ ಜೊತೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ಹೆಸರು ಹೇಳಿದ್ದಾರೆ.

Read more Photos on
click me!

Recommended Stories