ಬಿಗ್ಬಾಸ್ನಲ್ಲಿ ಗಿಲ್ಲಿ ನಟ, ಉಗ್ರಂ ಮಂಜು ಅವರ ಮದುವೆಯ ಬಗ್ಗೆ ಮಾಡಿದ ಕಾಮಿಡಿಯಿಂದ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಸಮಾಧಾನ ಹೊರಹಾಕಿರುವ ಮಂಜು, ಕಾಮಿಡಿ ಹೆಸರಲ್ಲಿ ನೋವು ನೀಡಿ ಸಿಂಪಥಿ ಗಿಟ್ಟಿಸಿಕೊಳ್ಳುವುದು ಸರಿಯಲ್ಲ, ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬಿಗ್ಬಾಸ್ ಗಿಲ್ಲಿ ನಟ (Bigg Boss Gilli Nata) ಬಗ್ಗೆ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಬರುತ್ತಿವೆ. ತಮಾಷೆಯ ಹೆಸರಿನಲ್ಲಿ ತುಂಬಾ ಮನಸ್ಸಿಗೆ ನೋವಾಗುವಂಥ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಿದ್ದರೂ, ಗಿಲ್ಲಿ ನಟನೇ ಬಿಗ್ಬಾಸ್ ವಿನ್ನರ್ ಎಂದೇ ಅಷ್ಟೇ ಜನ ಹೇಳುತ್ತಿದ್ದಾರೆ.
27
ಕಾಮಿಡಿಯ ಅಸಮಾಧಾನ
ಆದರೆ, ಬಿಗ್ಬಾಸ್ನಲ್ಲಿ ಮಾಜಿ ಸ್ಪರ್ಧಿಗಳ ಎಂಟ್ರಿಯಾಗಿದ್ದ ಸಂದರ್ಭದಲ್ಲಿ ಗಿಲ್ಲಿ ನಟ ಉಗ್ರಂ ಮಂಜು ಅವರ ಬಗ್ಗೆ ಮಾಡಿರುವ ಕಾಮಿಡಿ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನಕ್ಕೆ ಗುರಿಯಾಗಿತ್ತು. ಆ ಬಳಿಕ ಉಗ್ರಂ ಮಂಜು (Ugram Manju) ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಕೂಡ ಗರಂ ಆಗಿ ಮೆಸೇಜ್ ಒಂದನ್ನು ಶೇರ್ ಮಾಡಿದ್ದರು.
37
ಉಗ್ರಂ ಮಂಜು ಮದುವೆ
ಉಗ್ರಂ ಮಂಜು ಅವರ ಮದುವೆ ಸಂಧ್ಯಾ ಖುಷಿ ಅವರ ಜೊತೆ ನೆರವೇರಲಿದೆ. ಈ ಬಗ್ಗೆ ಬಿಗ್ಬಾಸ್ ಹೇಳಿದಾಗ, ಎಲ್ಲರೂ ಸೂಪರ್ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ ಗಿಲ್ಲಿ ನಟ ಏಕಾಏಕಿ ‘ಎರಡನೇಯದ್ದಾ?’, ‘ಮೂರನೇಯದ್ದಾ?’ ಎಂದರು. ಇದರಿಂದ ಮಂಜು ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದು ಮಾತಿನ ಚಕಮಕಿಯೂ ಅಲ್ಲಿ ನಡೆದಿತ್ತು.
ಊಟ ಕಿತ್ಕೊಳೋಕೆ ಬಂದಿದ್ದೀರಾ, ಎರಡನೇ ಮದುವೆಯೋ ಅಥವಾ ಮೂರನೇ ಮದುವೆಯೋ ಎಂಬ ಮಾತುಗಳನ್ನು ಗಿಲ್ಲಿ ನಟ ಅವರು ಮಂಜುಗೆ ಹೇಳಿದ್ದರು. ಈ ರೀತಿಯ ಮಾತುಗಳು ಮಂಜುಗೆ ಬೇಸರ ಮೂಡಿಸಿತ್ತು.
57
ಅಸಮಾಧಾನ
ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಗಿಲ್ಲಿ ನಟನ ಬಗ್ಗೆ ಕೇಳಿದ ಪ್ರಶ್ನೆಗೆ ಉಗ್ರಂ ಮಂಜು ಅವರು ಅಸಮಾಧಾನ ಹೊರಹಾಕಿದ್ದಾರೆ. ಕಾಮಿಡಿ ಹೆಸರಿನಲ್ಲಿ ಅವರು ತುಂಬಾ ಹರ್ಟ್ ಮಾಡುತ್ತಾರೆ. ಟಾಸ್ಕ್ ಅನ್ನು ಟಾಸ್ಕ್ ಆಗಿ ನೋಡಬೇಕು, ಅದನ್ನು ಬಿಟ್ಟು ಬೇರೆಯವರಿಗೆ ತುಂಬಾ ನೋವು ಮಾಡುತ್ತಾರೆ ಎಂದಿದ್ದಾರೆ.
67
ಕರ್ಮ ಯಾರನ್ನೂ ಬಿಡುವುದಿಲ್ಲ
ಕರ್ಮ ಯಾರನ್ನೂ ಬಿಡುವುದಿಲ್ಲ, ಧರ್ಮದ ಮಾರ್ಗದಲ್ಲಿ ನಡೆಯಬೇಕು, ಎಲ್ಲಿ ಏನಾಗ್ತಿದೆ ಎಂದು ಆ ತಾಯಿ ನೋಡಿಕೊಳ್ತಾಳೆ. ನಾನು ಇಂಥ ವಿಷಯದಲ್ಲಿ ಏನೂ ಹೇಳಲು ಹೋಗುವುದಿಲ್ಲ ಎಂದು ಅಸಮಾಧಾನವನ್ನೂ ಹೊರಹಾಕಿದ್ದಾರೆ ಉಗ್ರಂ ಮಂಜು.
77
ರಾಂಗ್ ಸೈಡ್ ಗಾಡಿ
ನಾವು ದೊಡ್ಡ ಗಾಡಿಯಲ್ಲಿ ಹೋಗುತ್ತಿರುವಾಗ ಎದುರಿನಿಂದ ರಾಂಗ್ ಸೈಡ್ನಲ್ಲಿ ಚಿಕ್ಕ ಗಾಡಿ ಬಂದು ಗುದ್ದಿದರೂ ದೊಡ್ಡ ಗಾಡಿಯದ್ದೇ ತಪ್ಪು ಕಾಣಿಸುತ್ತದೆ. ಪ್ರತಿಸಾಲ ತಪ್ಪಾಯ್ತು ಕ್ಷಮಿಸಿ ಎಂದುಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಪದೇ ಪದೇ ನನ್ನಿಂದ ತಪ್ಪಾಯ್ತು ಎನ್ನುವುದು, ಮತ್ತದೇ ತಪ್ಪು ಮಾಡುವುದು ಎಷ್ಟು ಸರಿ ಎಂದು ಗಿಲ್ಲಿ ನಟನ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.