ಸಾಲು ಸಾಲು ಸಿನಿಮಾ ಆಫರ್ಸ್​ ರಿಜೆಕ್ಟ್​ ಮಾಡಿದ್ಯಾಕೆ Bigg Boss ವಿನ್ನರ್​ ಹನುಮಂತು? ಏನಂದ್ರು ಕೇಳಿ

Published : Jun 18, 2026, 04:10 PM IST

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಕೆವಿಎನ್‌ ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ವಿನ್ನರ್ ಹನುಮಂತ ಲಮಾಣಿ,  ಸಾಲು ಸಾಲು ಆಫರ್ಸ್​ ಬಂದರೂ  ಸಿನಿಮಾ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ. ಅವರು ಕೊಟ್ಟ ಕಾರಣವೇನು?

PREV
16
ಗಿಲ್ಲಿ ನಟ ಗುಡ್​ನ್ಯೂಸ್​

ಬಿಗ್​ಬಾಸ್​​ 12ರ ವಿನ್ನರ್​ ಗಿಲ್ಲಿ ನಟ ನಿನ್ನೆಯಷ್ಟೇ ಬಿಗ್​ ನ್ಯೂಸ್​ ಕೊಟ್ಟಿದ್ದಾರೆ. 'ಟಾಕ್ಸಿಕ್', 'ಜನ ನಾಯಗನ್', 'ಕೆಡಿ: ದಿ ಡೆವಿಲ್' ಮುಂತಾದ ಬಿಗ್ ಬಜೆಟ್‌ ಚಿತ್ರಗಳನ್ನ ನಿರ್ಮಿಸಿರುವ ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಮೂಡಿಬರಲಿರುವ ಚಿತ್ರದ ಮೂಲಕ ಹೀರೋ ಆಗಿ ಗಿಲ್ಲಿ ನಟ ಮಿಂಚಲಿದ್ದಾರೆ. ಗಿಲ್ಲಿ ನಟನಿಗೆ ಸ್ಯಾಂಡಲ್​ವುಡ್ ಕೈ ಹಿಡಿಯಲಿ ಎನ್ನುವುದು ಅವರ ಅಭಿಮಾನಿಗಳ ಆಶಯ.

26
ಹನುಮಂತ ಲಮಾಣಿ ಮಾತು

ಇದೇ ವೇಳೆ, ʻಬಿಗ್‌ ಬಾಸ್‌ ಕನ್ನಡ 11’ರ ವಿನ್ನರ್​ ಹುನಮಂತ ಲಮಾಣಿ ಅವರು ತಾವ್ಯಾಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಾಲು ಸಾಲು ಆಫರ್​ ಬಂದರೂ ತಾವು ರಿಜೆಕ್ಟ್​ ಮಾಡಿದ್ಯಾಕೆ ಎನ್ನುವ ಬಗ್ಗೆ ಹನುಮಂತು ಮಾತನಾಡಿದ್ದಾರೆ.

36
ವೈಲ್ಡ್‌ ಕಾರ್ಡ್‌ ಎಂಟ್ರಿ ಪ್ರವೇಶ

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್​ಬಾಸ್​ ಪ್ರವೇಶಿ ವಿನ್ನರ್​ ಆಗುವ ಮೂಲಕ ದಾಖಲೆ ಮಾಡಿದವರು ಹನುಮಂತು. ಬಳಿಕ ಹಲವು ರಿಯಾಲಿಟಿ ಷೋಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯ 'ಕ್ವಾಟ್ಲೆ ಕಿಚನ್ ಸೀಸನ್ 2' ಅಡುಗೆ ಶೋನಲ್ಲಿ ಭಾಗವಹಿಸುತ್ತಿದ್ದು, ಸಿನಿಮಾ ಮಾತ್ರ ಒಲ್ಲೆ ಎಂದಿದ್ದಾರೆ.

46
ಸಿನಿಮಾ ಆಫರ್​ ರಿಜೆಕ್ಟ್​

'ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಿನಿಮಾ ಆಫರ್ ಬಂತು. ಆದರೆ ನಾನು ಬೇಡ ಎಂದುಬಿಟ್ಟೆ. ಇದಕ್ಕೆ ಕಾರಣ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡ್ತಿಲ್ಲ, ಅಂಥದ್ದರಲ್ಲಿ ಸರಿಯಾಗಿ ನಟನೆಯೇ ಬಾರದ ನಾನು ಸಿನಿಮಾ ಮಾಡಿದರೆ, ನಮ್ಮನ್ನು ನಂಬಿಕೊಂಡ ಸಿನಿಮಾ ತಂಡದ ಕಥೆ ಅಷ್ಟೇ' ಎಂದಿದ್ದಾರೆ.

56
ನಾಲ್ಕು ದಿನಗಳ ಹೆಸರು

ನಮ್ಮದು ನಾಲ್ಕು ದಿನಗಳ ಹೆಸರು. ಈ ಹೆಸರನ್ನೇ ನಂಬಿ ನಮ್ಮನ್ನ ಹಾಕೊಂಡು ಸಿನಿಮಾ ಮಾಡಿದ್ರೆ ಅದು ಓಡಿಲ್ಲ ಎಂದರೆ ಎಲ್ಲರಿಗೂ ಲಾಸ್​ ಎಂದಿದ್ದಾರೆ ಹನುಮಂತು. ನನಗೆ ನಟನೆ ಬರಲ್ಲ, ಆದರೆ ಹಾಡು ಬರುತ್ತೆ. ಅದಕ್ಕಾಗಿಯೇ ಸಿನಿಮಾಗಳಲ್ಲಿ ಹಾಡಿದ್ದೇನೆ. 2-3 ಸಿನಿಮಾಗಳಿಗೆ ಹಾಡಿನ ಮೂಲಕ ದನಿಯಾಗಿದ್ದೇನೆ. ಅವೆಲ್ಲಾ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ.

66
ಮನೆ ಕಟ್ಟಿಸ್ತಿರೋ ಹನುಮಂತು

ಬಿಗ್​ಬಾಸ್​​ ಪ್ರೈಸ್​ ಇದ್ದುದು 50 ಲಕ್ಷ, ಎಲ್ಲಾ ಕಟ್​ ಆಗಿ 35 ಲಕ್ಷ ರೂಪಾಯಿ ಬಂದಿದ್ದು, ಅದರಿಂದ ಮನೆ ಕಟ್ಟಿಸುತ್ತಿದ್ದಾರೆ ಹನುಮಂತು. ಮನೆ ಕಟ್ಟಿಸಿ ನೋಡಿ ಎನ್ನೋ ಗಾದೆ ಮಾತಿದ್ಯಲ್ಲಾ... ಅದೇ ರೀತಿ ಹಿರಿಯರು ಹೇಳಿದ ಹಾಗೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸ. ಈಗ ಅದೇ ದುಡ್ಡಿನಲ್ಲಿ ನಮ್ಮ ಸ್ವಂತ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ, ತುಂಬಾ ಕಷ್ಟವಿದೆ" ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories