ನಿರೂಪಕಿ ಅನುಶ್ರೀ ತಮ್ಮ ವರುಣ್ ಗೌಡ ಅವರ ಜನ್ಮದಿನದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತ ವರುಣ್ ಅವರನ್ನು ಪುನೀತ್ ರಾಜ್‌ಕುಮಾರ್ ಅವರ ಗುಣಗಳಿಗೆ ಹೋಲಿಸಿ, ರಕ್ತಸಂಬಂಧವಿಲ್ಲದಿದ್ದರೂ ಅಣ್ಣನಾಗಿ ತನ್ನ ಮದುವೆ ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ.
ಜನಪ್ರಿಯ ನಿರೂಪಕಿ ಅನುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಬದುಕಿನ ಏಳುಬೀಳುಗಳಲ್ಲಿ, ಕಷ್ಟಕಾಲದಲ್ಲಿ ಸದಾ ಬೆನ್ನೆಲುಬಾಗಿ ನಿಂತ ಆಪ್ತ ಗೆಳೆಯ ವರುಣ್ ಗೌಡ ಅವರ ಜನ್ಮದಿನದಂದು ವರುಣ್ ಅವರ ಗುಣಗಳನ್ನು ಕೊಂಡಾಡಿ ಭಾವುಕರಾಗಿದ್ದಾರೆ.
26
ಅಪ್ಪು ಗುಣದ ಗುಣವಂತ ನೀನು!
ವರುಣ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವ ಅನುಶ್ರೀ, "ಅಣ್ಣ ಎನ್ನಲೇ ನಿನ್ನ.. ಗೆಳೆಯ ಎಂದು ಕೂಗಲೇ ನಿನ್ನ… ಅಥವಾ ಪರಮಾತ್ಮ ಅಪ್ಪುವಿನ ಗುಣವುಳ್ಳ ಗುಣವಂತ ಎನ್ನಲೇ ನಿನ್ನ…" ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆ, ದಿವಂಗತ ನಟ ಪುನೀತ್ ರಾಜ್‌ಕುಮಾರ್ (ಅಪ್ಪು) ಅವರಂತೆ ಎಲ್ಲರಿಗೂ ಸಹಾಯ ಮಾಡುವ, ಎಲ್ಲರ ಕಷ್ಟಕ್ಕೂ ಮಿಡಿಯುವ ಅದ್ಭುತ ಗುಣ ವರುಣ್ ಅವರಲ್ಲಿದೆ ಎಂಬುದನ್ನು ಅನುಶ್ರೀ ಈ ಮೂಲಕ ಮನಸಾರೆ ಶ್ಲಾಘಿಸಿದ್ದಾರೆ.
36
ನೋವು ನಲಿವಿನ ಸದಾ ಹೆದರು ನಿಂತ ಧೈರ್ಯ
ಬದುಕಿನ ಕಠಿಣ ಸಂದರ್ಭಗಳನ್ನು ನೆನೆದಿರುವ ಅನುಶ್ರೀ, "ನನ್ನ ಬದುಕಿನ ನೋವು ನಲಿವುಗಳಲ್ಲಿ ಸದಾ ನನ್ನ ಹಿಂದೆ ನಿಂತು ಧೈರ್ಯ ಹೇಳಿ, ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳೆಯ ನೀನು" ಎಂದು ಹೇಳಿದ್ದಾರೆ. ಕೇವಲ ಸಂತೋಷದ ಸಮಯದಲ್ಲಿ ಮಾತ್ರವಲ್ಲದೆ, ಬದುಕಿನ ಪ್ರತಿಯೊಂದು ನೋವಿನ ಕ್ಷಣದಲ್ಲೂ ವರುಣ್ ತಮಗೆ ಧೈರ್ಯ ತುಂಬಿದ ರೀತಿಯನ್ನು ಅವರು ಸ್ಮರಿಸಿದ್ದಾರೆ.
ರಕ್ತಸಂಬಂಧ ಇಲ್ಲದಿದ್ದರೂ ತಂಗಿಯ ಮದುವೆ ಮುನ್ನಡೆಸಿದ ಅಣ್ಣ!
ವರುಣ್ ಅವರ ಜವಾಬ್ದಾರಿಯುತ ನಡವಳಿಕೆಯನ್ನು ಶ್ಲಾಘಿಸಿರುವ ಅನುಶ್ರೀ, "ರಕ್ತ ಸಂಬಂಧ ಇಲ್ಲದಿದ್ದರೂ ಈ ತಂಗಿಯ ಮದುವೆಯನ್ನು ಬಲು ಜೋರಾಗಿ ಮುಂದೆ ನಿಂತು ನಡೆಸಿಕೊಟ್ಟ ಅಣ್ಣ ನೀನು" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಯಾವುದೇ ರಕ್ತದ ನಂಟಿಲ್ಲದಿದ್ದರೂ ಒಬ್ಬ ಸ್ವಂತ ಅಣ್ಣನ ಸ್ಥಾನದಲ್ಲಿ ನಿಂತು ಮದುವೆಯ ಇಡೀ ಜವಾಬ್ದಾರಿಯನ್ನು ವರುಣ್ ಹೊತ್ತುಕೊಂಡಿದ್ದನ್ನು ಅವರು ಭಾವುಕರಾಗಿ ನೆರೆದಿದ್ದಾರೆ.
56
ಎಂದಿಗೂ ತೀರಿಸಲಾಗದ ಋಣ
ವರುಣ್ ಅವರು ಮಾಡಿದ ಸಹಾಯ ಮತ್ತು ತೋರಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ಅನುಶ್ರೀ, "ನಾನು ಮತ್ತು ನನ್ನ ಗಂಡ ಎಂದಿಗೂ ತೀರಿಸಲಾಗದು ಈ ನಿನ್ನ ಋಣ… ಪ್ರತಿಯೊಬ್ಬರಿಗೂ ಮಾದರಿ ಈ ನಿನ್ನ ಗುಣ!!!!" ಎಂದು ಬರೆದಿದ್ದಾರೆ. ವರುಣ್ ಅವರ ನಿಸ್ವಾರ್ಥ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
66
ಕಷ್ಟದಲ್ಲಿದ್ದವರ ಪಾಲಿನ ಆಶಾಕಿರಣ ಈ ವರುಣ್!
ಕೊನೆಯದಾಗಿ ವರುಣ್ ಅವರ ಪರೋಪಕಾರಿ ಗುಣವನ್ನು ಕೊಂಡಾಡಿರುವ ಅವರು, "ಯಾರೇನೆ ಕಷ್ಟ ಅಂದ್ರು ಎಲ್ಲರಿಗಾಗಿ ಸದಾ ನಿಲ್ಲುವ ಜೀವ ನೀ ವರುಣ್!!! ನೀನು ನೂರು ಕಾಲ ಚೆನ್ನಾಗಿರು, ಖುಷಿಯಾಗಿರು, ನೆಮ್ಮದಿಯಿಂದಿರು…" ಎಂದು ಪ್ರಾರ್ಥಿಸಿದ್ದಾರೆ. ಅತ್ಯುತ್ತಮ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು (Happiest birthday to the bestest soul) ಎಂದು ಬರೆಯುವ ಮೂಲಕ ವರುಣ್ ಗೌಡ ಅವರಿಗೆ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.