ಕನ್ನಡ ಕಿರುತೆರೆ ನಟಿ ಭವ್ಯಾ ಗೌಡ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅತ್ತೆ ಲವ್ಸ್ ಯೂ ಅಂದಿದ್ದಾರೆ, ಯಾರಿದು?
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಭವ್ಯಾ ಗೌಡ (Bhavya Gowda), ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಒಂದಲ್ಲ ಒಂದು ಫೋಟೊಗಳನ್ನು ಇವರು ತಮ್ಮ ಖಾತೆಯಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮಗುವಿನ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದು, ಹುಟ್ಟುಹಬ್ಬದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ.
26
ತೋಳಲ್ಲಿ ಮಗುವನ್ನು ಹಿಡಿದು, ಮುದ್ದು ಮಾಡುತ್ತಿರುವ ಹಲವು ಫೋಟೊಗಳನ್ನು ಹಂಚಿಕೊಂಡಿರುವ ಭವ್ಯಾ ಗೌಡ, ಹುಟ್ಟು ಹಬ್ಬದ ಶುಭಾಶಯಗಳು ಪ್ರಸಿದಿ , ಅತ್ತೆ ಲವ್ಸ್ ಯೂ ಸೋ ಮಚ್ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಅತ್ತೆ - ಸೊಸೆ ಜೋಡಿಯನ್ನು ನೋಡಿ ಅಭಿಮಾನಿಗಳಂತೂ ಖುಷಿ ಪಟ್ಟಿದ್ದಾರೆ.
36
ಅಂದ ಹಾಗೆ ಭವ್ಯಾ ಗೌಡ ಕೈಯಲ್ಲಿರುವ ಮಗು ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ (Dhanraj Achar) ಅವರದ್ದು. ಬಿಗ್ ಬಾಸ್ ಮನೆಯಲ್ಲಿ ಮೂರು ತಿಂಗಳ ಕಂದಮ್ಮನನ್ನು ಕರೆದುಕೊಂಡು ಬಂದಿದ್ದರು. ಈ ಮುದ್ದು ಮಗುವಿನ ಹೆಸರು ಪ್ರಸಿದ್ಧಿ. ಇನ್ನು ಧನರಾಜ್ ಆಚಾರ್ ಮತ್ತು ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಹೇಗಿದ್ದರು ಅಂತ ವಿಶೇಷವಾಗಿ ಹೇಳಬೇಕಾಗಿಲ್ಲ.
ಧನರಾಜ್ ಮತ್ತು ಭವ್ಯಾ ಅಣ್ಣ ಮತ್ತು ತಂಗಿ ಜಿಂಕೆ ಅಂತಾನೇ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡ ಈ ಅಣ್ಣ ತಂಗಿ ಜೋಡಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ದೊಡ್ಮನೆಯಿಂದ ಹೊರ ಬಂದ ಮೇಲೆ ಸಹ ಈ ಅಣ್ಣ ತಂಗಿ ಜೋಡಿ ಭೇಟಿಯಾಗುತ್ತಿದ್ದರು. ಇದೀಗ ಅಣ್ಣ ಜಿಂಕೆಯ ಮಗಳ ಹುಟ್ಟುಹಬ್ಬಕ್ಕೆ ತಂಗಿ ಜಿಂಕೆ ಶುಭಾಶಯ ಕೋರಿದ್ದಾರೆ.
56
ಭವ್ಯಾ ಗೌಡ ಫೋಟೊಗಳಿಗೆ ಕಾಮೆಂಟ್ ಮಾಡಿರುವ ಧನರಾಜ್ ಆಚಾರ್ ಥ್ಯಾಂಕ್ಯೂ ಸೋ ಮಚ್ ಅತ್ತೆ ಜಿಂಕೆ ಫ್ರಮ್ ಪ್ರಸಿದ್ದಿ ಎಂದು ಬರೆದುಕೊಂಡಿದ್ದಾರೆ. ಅತ್ತೆ ಸೊಸೆ ಜೋಡಿಯನ್ನು ಜನ ಇಷ್ಟ ಪಟ್ಟಿದ್ದು, ಬ್ಯೂಟಿ ಮತ್ತು ಕ್ಯೂಟಿ ಜೊತೆಯಾಗಿದೆ, ಅತ್ತೆ ಸೊಸೆ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
66
ಕರಿಯರ್ ಬಗ್ಗೆ ಹೇಳೋದಾದರೆ ಭವ್ಯಾ ಗೌಡ ಸದ್ಯ ಝೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ಕರ್ಣನನ್ನು ಹುಚ್ಚಿಯಂತೆ ಪ್ರೀತಿಸುವ ನಿಧಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ಆದಷ್ಟು ಬೇಗ ಕರ್ಣ ಮತ್ತು ನಿಧಿ ಜೋಡಿ ಒಂದಾಗಲಿ ಎಂದು ಹಾರೈಸಿದ್ದಾರೆ.