ಜೀ ಕನ್ನಡ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ತಿರುವು... ಕಾದಿದೆ ಭರ್ಜರಿ ಸಂಚಿಕೆ

Published : Aug 21, 2025, 04:26 PM IST

ಜೀ ಕನ್ನಡದಲ್ಲಿ ಭರ್ಜರಿ ಮನರಂಜನೆ ಶುರುವಾಗಲಿದೆ. ಟಾಪ್ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ ತೆರೆದುಕೊಳ್ಳಲಿದೆ. ಅಣ್ಣಯ್ಯ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ನಾ ನಿನ್ನ ಬಿಡಲಾರೆ ಮಹಾ ತಿರುವು ಏನು?

PREV
17

ಭರ್ಜರಿ ಮನರಂಜನೆ ಕೊಡೋದಕ್ಕೆ ಹೆಸರುವಾಸಿಯಾಗಿರುವ ಜೀ ಕನ್ನಡದ ಧಾರಾವಾಹಿಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗಲಿದೆ. ಅಣ್ಣಯ್ಯ, ನಾ ನಿನ್ನ ಬಿಡಲಾರೆ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಇನ್ನು ಮುಂದೆ ಮಹಾ ತಿರುವಿನ ಮೂಲಕ ಕಥೆ ಬೇರೆಡೆಗೆ ತಿರುಗಲಿದೆ.

27

ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿಯ ಮದುವೆಯ ಬಳಿಕ ಮನೆ ಭಿಕೋ ಎನ್ನುತ್ತಿದೆ. ರಾಣಿಯ ಗಂಡ ಪೆದ್ದ ಎನ್ನುವ ಸುಳ್ಳನ್ನು ಪಾರು ಶಿವುನಿಂದ ಮುಚ್ಚಿಟ್ಟಿದ್ದಾಳೆ. ಮನೆಯಲ್ಲಿ ಜನ ಕಡಿಮೆಯಾದಂತೆ ಶಿವು ಪುಟ್ಟ ತಂಗಿಗೆ ಬೇರೊಂದು ಆಸೆ ಚಿಗುರೊಡೆದಿದೆ.

37

ಈ ಮನೆಗೆ ಪುಟ್ಟ ಮಗು ಬಂದ್ರೆ ಚೆನ್ನಾಗಿರುತ್ತೆ ಅಲ್ವಾ? ಎಂದು ತಂಗಿ ರಮ್ಯಾ ಹೇಳುತ್ತಿದ್ದರೆ. ಶಿವು ಕೈಯನ್ನು ಗಟ್ಟಿಯಾಗಿ ಹಿಡಿದು ಪಾರು ಈ ಮನೆಗೆ ಹೊಸಬ್ಬರು ಬಂದೇ ಬರುತ್ತಾರೆ. ನಾನು ಹೇಳಿದ್ದು ನಿಮ್ಮ ತಾಯಿ ಬಗ್ಗೆ ಎನ್ನುತ್ತಾಳೆ ಪಾರು. ಅಮ್ಮ ಅಂದರೇನೆ ಸಿಡಿದು ಬೀಳುವ ಶಿವು ಇದನ್ನು ಕೇಳಿ ಸುಮ್ಮನಿರುತ್ತಾನೆಯೇ? ಕಾದು ನೋಡಬೇಕು.

47

ಇನ್ನು ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ತಾನೇ ಏನೆ ತಂತ್ರ ಹೂಡಿದರೂ ಅದಕ್ಕೆ ತದ್ವಿರುದ್ಧವಾಗಿ ಏನಾದರೊಂದು ಆಗುತ್ತಿದೆಯಲ್ಲ ಎಂದು ದುರ್ಗಾ ಹಿಂದೆ ಬಂದ ಮಾಳವಿಕಾಗೆ ಅಲ್ಲೊಂದು ದೊಡ್ಡ ಅಘಾತವೇ ಎದುರಾಗುತ್ತದೆ.

57

ಶಂಭುವಿನ ಮುಖಾಮುಖಿಯಾದ ಮಾಳವಿಕ, ಆತನ್ನು ಬಂಧಿಸಲು ತನ್ನ ಶಕ್ತಿ ಪ್ರಯೋಗ ಮಾಡುತ್ತಾಳೆ. ಆದರೆ ನನ್ನ ಬಂಧನ ಭ್ರಮೆ, ಸಾವು ಭ್ರಮೆ ಎನ್ನುತ್ತಾ, ನಿನ್ನ ಮರಣ ಯುಗಾಂತ್ಯ ಆರಂಭ ಎಂದು ಮಾಳಾವಿಕಾಳನ್ನೆ ತನ್ನ ಶಕ್ತಿಯಿಂದ ಬಂಧಿಸುತ್ತಾನೆ ಶಂಭು. ಇವರಿಬ್ಬರಿಗೂ ಏನು ಸಂಬಂಧ, ಶಂಭು ಮುಂದೆ ಸೋತು ಬಿಡ್ತಾಳ ಮಾಳವಿಕಾ ಕಾದು ನೋಡಬೇಕು.

67

ಮತ್ತೊಂದು ಕಡೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಸುಬ್ಬು ಮದುವೆಯಾಗಿಲ್ಲ ಎಂದು ಗೊತ್ತಾದ ಬಳಿಕ ಮನೆಗೆ ಕರೆಯಿಸಿಕೊಂಡಿದ್ದಾರೆ ಶ್ರಾವಣಿ ತಂದೆ. ಇದೀಗ ಕೊನೆಗೂ ಸುಬ್ಬುಗೆ ತಾನು ಶ್ರಾವಣಿಯನ್ನು ಪ್ರೀತಿ ಮಾಡುತ್ತಿರುವ ಅರಿವಾಗಿ, ಆಕೆಯನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾನೆ ಸುಬ್ಬು.

77

ಆದರೆ ಅಲ್ಲೂ ದೊಡ್ಡ ಟ್ವಿಸ್ಟ್. ಶ್ರಾವಣಿಗೆ ಹುಡುಗನನ್ನು ಬೇರೆಲ್ಲೂ ಹುಡುಕೋದು ಬೇಡ, ನಮ್ಮ ಸುಬ್ಬುನೇ ಇದ್ದಾನಲ್ಲ ಎಂದು ಆತನನ್ನು ಬಳಿ ಕರೆದು, ಶ್ರಾವಣಿಗೆ ತಕ್ಕನಾದ ಹುಡುಗನನ್ನು ಸುಬ್ಬುನೇ ಹುಡುಕುತ್ತಾನೆ ಎನ್ನುತ್ತಾರೆ. ಇದರಿಂದ ಎಲ್ಲರಿಗೂ ಶಾಕ್. ಈಗಲಾದರೂ ಈ ಜೋಡಿ ತಮ್ಮ ಮನಸಿನ ಭಾವನೆಯನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆಯೇ? ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

Read more Photos on
click me!

Recommended Stories