ಹುಟ್ಟೂರಿನಲ್ಲಿ ಕುಟುಂಬದ ಕನಸಿನ ಮನೆ ಕಟ್ಟಿಸಿದ 'ಕಾಮಿಡಿ ಕಿಲಾಡಿಗಳು’ ದೀಪಿಕಾ ಗೌಡ

Published : Aug 21, 2025, 06:01 PM IST

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಗಳಿಸಿ, ಇದೀಗ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ದೀಪಿಕಾ ಗೌಡ, ತಮ್ಮ ಹುಟ್ಟೂರಿನಲ್ಲಿ ಕನಸಿನ ಮನೆಯನ್ನು ನಿರ್ಮಿಸಿದ್ದಾರೆ.

PREV
17

ತಮ್ಮ ಕನಸಿನ ಮನೆ ನಿರ್ಮಾಣ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಅದನ್ನು ನನಸಾಗಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಪ್ರಯತ್ನ ಮಾಡಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಪಿಕಾ ಗೌಡ.

27

ಕಾಮಿಡಿ ಕಿಲಾಡಿಗಳು  (Comedy Khiladigalu) ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರು ದೀಪಿಕಾ ಗೌಡ. ಇವರು ತಮ್ಮ ಪಂಚಿಂಗ್ ಕಾಮಿಡಿ ಮೂಲಕವೇ ಕನ್ನಡದ ಕಿರುತೆರೆ ವೀಕ್ಷಕರ ಮನಸನ್ನು ಗೆದ್ದಿದ್ದರು. ಮಂಡ್ಯದ ಹುಡುಗಿಯ ನಟನೆ, ಡೈಲಾಗ್ ಗೆ ಜನ ಮನಸೋತಿದ್ದರು.

37

ಸದ್ಯ ದೀಪಿಕಾ ಅಣ್ಣಯ್ಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು, ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮಾವನ ಮಗಳು ಮಂಜಿ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದು, ಈ ಪಾತ್ರವನ್ನು ಸಹ ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಮಂಜಿ ಮತ್ತು ಗೋಡಂಬಿ ಆದಷ್ಟು ಬೇಗನೆ ಮದುವೆಯಾಗಲಿ ಎಂದು ಹಾರೈಸುತ್ತಿದ್ದಾರೆ.

47

ಇದೀಗ ದೀಪಿಕಾ ಗೌಡ (Deepika Gowda) ತಮ್ಮ ಪರಿಶ್ರಮದಿಂದ ಹಾಗೂ ಕುಟುಂಬದ ಸಹಾಯದಿಂದ ಹುಟ್ಟೂರಿನಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ‘ಕನಸಿನ ಮನೆ’ ಎಂದೇ ನಾಮಕರಣ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗೃಹಪ್ರವೇಶದ ವಿಡಿಯೋ, ಫೋಟೊಗಳನ್ನು ಶೇರ್ ಮಾಡಿದ್ದಾರೆ.

57

ಮೂಲತಃ ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿ ಮಾಡರಹಳ್ಳಿ ಗ್ರಾಮದ ಹುಡುಗಿಯಾಗಿರುವ ದೀಪಿಕಾ ತಮ್ಮ ಊರಿನಲ್ಲಿ ಅಕ್ಕ-ಭಾವ, ತಂದೆ-ತಾಯಿ ಹಾಗೂ ಕೂಡು ಕುಟುಂಬದ ಜೊತೆ ಸೇರಿ ಹೊಸ ಮನೆ ಕಟ್ಟಿಸಿದ್ದಾರೆ.

67

ಈಗಾಗಲೇ ದೀಪಿಕಾ ಗೌಡ ಮನೆ ಗೃಹ ಪ್ರವೇಶ ಕೂಡ ನಡೆದಿದ್ದು, ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ, ಧೀರಜ್, ಅನೀಶ್ ಪೂಜಾರಿ ಹಾಗೂ ಪ್ರವೀಣ್ ಜೈನ್ ಹಾಗೂ ಇನ್ನಿತರ ಸಾ ಸ್ಪರ್ಧಿಗಳು ಕೂಡ ಭಾಗಿಯಾಗಿದ್ದರು.

77

ಇನ್ನು ದೀಪಿಕಾ ತಮ್ಮ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದು, ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮತ್ತಷ್ಟು ದೊಡ್ಡ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

Read more Photos on
click me!

Recommended Stories