ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ 'ಕ್ವಾಟ್ಲೆ ಕಿಚನ್-2' ಶೋನಲ್ಲಿ ಭಾಗವಹಿಸುತ್ತಿದ್ದು, ಇದೇ ವೇದಿಕೆಯಲ್ಲಿ ನಟ ಭವಿಷ್ ಗೌಡ ಗೆಜ್ಜೆ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಆದರೆ, ರಿಯಾಲಿಟಿ ಶೋಗಳಲ್ಲಿ ಟಿಆರ್‌ಪಿಗಾಗಿ ಇಂತಹ ಘಟನೆಗಳು ಸಾಮಾನ್ಯವಾಗಿದೆ.
Bigg Boss ರಕ್ಷಿತಾ ಶೆಟ್ಟಿ ಸದ್ಯ ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್-2ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇದಿಕೆ ಮೇಲೆ ರಕ್ಷಿತಾಗೆ ಕಂಕಣ ಭಾಗ್ಯವೂ ಕೂಡಿ ಬಂದಿದೆ.
26
ರಕ್ಷಿತಾಗೆ ಪ್ರಪೋಸ್
ನಟ ಭವಿಷ್ ಗೌಡ, ರಕ್ಷಿತಾ ಶೆಟ್ಟಿಗೆ ಗೆಜ್ಜೆ ಹಾಕಿ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದಾರೆ. ರಕ್ಷಿತಾ ನಾನು ನಿನ್ನ ಕಾಲಿಗೆ ಹಾಕಿ ಈ ಗೆಜ್ಜೆ, ತುಳಿಯುವೆ ಏಳು ಹೆಜ್ಜೆ ಎಂದಿದ್ದಾರೆ. ಇದನ್ನು ಕೇಳಿ ರಕ್ಷಿತಾ ಶೆಟ್ಟಿ ನಾಚಿ ನೀರಾಗಿದ್ದಾರೆ.
36
ಷೋಗಳಲ್ಲಿ ಸರ್ವೇ ಸಾಮಾನ್ಯ
ಅಷ್ಟಕ್ಕೂ ರಿಯಾಲಿಟಿ ಷೋಗಳಲ್ಲಿ ಟಿಆರ್‌ಪಿಗಾಗಿ ಇಂಥ ದೃಶ್ಯಗಳನ್ನು ತೋರಿಸುವುದು ಸರ್ವೇ ಸಾಮಾನ್ಯ. ಅದು ಡಾನ್ಸ್ ರಿಯಾಲಿಟಿ ಷೋ ಆಗಿರಲಿ, ಸಂಗೀತದ್ದೇ ಆಗಿರಲಿ, ಇಲ್ಲಿರುವಂತೆ ಅಡುಗೆಯದ್ದೇ ಆಗಿರಲಿ. ಅಲ್ಲಿ ಅವುಗಳಿಗಿಂತಲೂ ಹೆಚ್ಚಿಗೆ ರಾರಾಜಿಸುವುದು ಇಂಥ ಲವ್ ವಿಷಯಗಳೇ. ಇಂಥ ಜೋಕ್ಗಳೇ. ಜನರು ಇಂಥದ್ದನ್ನು ತುಂಬಾ ಇಷ್ಟಪಟ್ಟು ನೋಡುವ ಕಾರಣ ವಾಹಿನಿಗಳು ಇವುಗಳನ್ನು ತೋರಿಸುತ್ತವೆ.
ಅದೇ ರೀತಿ ಇಲ್ಲಿ ಕೂಡ ರಕ್ಷಿತಾ ಶೆಟ್ಟಿಗೆ ನಟ ಭವಿಷ್ ಗೌಡ ಅವರು ರಿಯಾಲಿಟಿ ಷೋನ ಭಾಗವಾಗಿ ಹೀಗೊಂದು ಡೈಲಾಗ್ ಹೇಳಿದ್ದಾರಷ್ಟೇ.
56
ಗಂಧದ ಗುಡಿ ನಾಯಕ
ಇಷ್ಟು ನಟ ಭವಿಷ್ ಗೌಡ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ. ಇವರು ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಮೊದಲು ವಿಶ್ವನ ಪಾತ್ರ ಮಾಡುತ್ತಿದ್ದರು. ಆ ಬಳಿಕ ಕಲರ್ಸ್ ಕನ್ನಡದ ಗಂಧದ ಗುಡಿ ಸೀರಿಯಲ್ನಲ್ಲಿ ಲೀಡ್ ರೋಲ್ ಸಿಕ್ಕ ಕಾರಣ, ಲಕ್ಷ್ಮೀ ನಿವಾಸ ಸೀರಿಯಲ್ ಬಿಟ್ಟರು.
66
ರಕ್ಷಿತಾಗೆ ಜೋಡಿ
ಇದೀಗ ಕ್ವಾಟ್ಲೆ ಕಿಚನ್ (Kwatle Kitchen-02) ಷೋನಲ್ಲಿ ರಕ್ಷಿತಾ ಶೆಟ್ಟಿಗೆ ಜೋಡಿಯಾಗಿ ಬಂದಿದ್ದಾರೆ. ಅದೇ ರೀತಿ ಬಿಗ್ಬಾಸ್ ಸೂರಜ್ ಸಿಂಗ್ ಕೂಡ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮಾ ಗೌಡ ಬದಲು ಈ ಬಾರಿ ಸುಷ್ಮಾ ಕೆ.ರಾವ್ ನಿರೂಪಣೆ ಮಾಡಲಿದ್ದಾರೆ. ಮೇಘನಾ ರಾಜ್ ತೀರ್ಪುಗಾರರಾಗಿ ಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.