25 ಲಕ್ಷ ರೂಪಾಯಿ ಕಾರ್ ಖರೀದಿ ಹಿಂದೆ Oyo ರೂಮ್ ಕಥೆ ಇದೆಯಾ? ಕೊನೆಗೂ ಮೌನ ಮುರಿದ Sonu Srinivas Gowda

Published : Jun 04, 2026, 08:49 PM IST

ಬಿಗ್‌ ಬಾಸ್‌ ಕನ್ನಡ ಒಟಿಟಿ ಸೋನು ಶ್ರೀನಿವಾಸ್‌ ಗೌಡ ಅವರು ಹೊಸ ಕಾರ್‌ ತಗೊಂಡಿದ್ದಾರೆ. 25 ಲಕ್ಷ ರೂಪಾಯಿ ಕಾರ್‌ಗೆ ಎಲ್ಲಿಂದ ಹಣ ಬಂತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವರು ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದು, ಈ ಬಗ್ಗೆ Sonu Srinivas Gowda ಅವರು ಮಾತನಾಡಿದ್ದಾರೆ. 

PREV
16
ನಾಯಿಗೆ ಕಿಯಾ ಹೆಸರಿಟ್ಟಿದ್ದೆ

ಕಳೆದ ಐದು ವರ್ಷಗಳಿಂದ ಸೋನು ಶ್ರೀನಿವಾಸ್‌ ಗೌಡ ಅವರು ಕಿಯಾ ಕಾರ್‌ ತಗೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ಪದೇ ಪದೇ ಕಾರ್‌ ತಗೊಳ್ಳೋದು ನೆನಪಾಗಬೇಕು ಎಂದು ನನ್ನ ಮನೆ ನಾಯಿಗೆ ಕಿಯಾ ಎಂದು ಕೂಡ ಹೆಸರಿಟ್ಟಿದ್ದೇನೆ ಎಂದು ಸೋನು ಶ್ರೀನಿವಾಸ್‌ ಗೌಡ ಹೇಳಿದ್ದಾರೆ. 

26
ದುಡ್ಡು ಹೇಗೆ ಬಂತು?

ಯುಟ್ಯೂಬ್‌ ವ್ಲಾಗ್ಸ್‌, ಪ್ರಮೋಶನ್‌ ಮಾಡ್ತೀನಿ, ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡ್ತೀನಿ, ಸಬ್‌ಸ್ಕ್ರೈಬ್‌ ಆಪ್ಶನ್‌ ಕೂಡ ಇದೆ, ಒಂದೊಂದು ವಿಡಿಯೋ ಪ್ರಮೋಶನ್‌ಗೆ ಲಕ್ಷ ರೂಪಾಯಿಗೆ ಜಾಸ್ತಿ ಸಂಭಾವನೆ ಪಡೆಯುತ್ತೇನೆ. ಒಂದು ಕಂಪೆನಿಗೆ ರಾಯಭಾರಿ ಆಗಿದ್ದು, ಪ್ರತಿ ತಿಂಗಳು ಕೂಡ ಹಣ ಬರುತ್ತದೆ ಎಂದು ಸೋನು ಶ್ರೀನಿವಾಸ್‌ ಗೌಡ ಹೇಳಿದ್ದಾರೆ. 

36
ಕಾರ್‌ಗೆ ಎಷ್ಟು ರೂಪಾಯಿ ಆಯ್ತು?

25 ಲಕ್ಷ ರೂಪಾಯಿ ಕಾರ್‌ ತಗೊಂಡೆ, ಆಮೇಲೆ ಒಂದಿಷ್ಟು ಖರ್ಚು ಆಗಿ 30 ಲಕ್ಷ ರೂಪಾಯಿ ಆಗಿದೆ. ಐದು ಲಕ್ಷ ರೂಪಾಯಿ ಡೌನ್‌ ಪೇಮೆಂಟ್‌ ಮಾಡಿದೆ. ತುಂಬ ಆಸೆ ಇದ್ದಿದ್ದಕ್ಕೆ ಈ ಕಾರ್‌ ತಗೊಂಡೆ ಎಂದು ಸೋನು ಹೇಳಿದ್ದಾರೆ. 

46
ಬೆವರು ಸುರಿಸಿದ್ಯಾ ಅಂತ ಕೇಳಿದ್ರು..!

ರಾತ್ರಿಯೆಲ್ಲ ಬೆವರು ಸುರಿಸಿ, ಆ ಸಂಪಾದನೆಯಿಂದ ನಾನು ಈ ಕಾರ್‌ ತಗೊಂಡೆ ಎಂದು ಓರ್ವ ವ್ಯಕ್ತಿ ಕಾಮೆಂಟ್‌ ಮಾಡಿದ್ದಾನೆ. ಒಂದು ಹುಡುಗಿ ಏನೋ ಒಂದು ತಗೊಂಡರೆ ಆ ಹುಡುಗಿ, ಬೇರೆಯವರ ಜೊತೆ ದೈಹಿಕ ಸಂಬಂಧ ಬೆಳೆಸಿ, ಹಣ ಮಾಡಿ ತಗೊಂಡಳು ಎಂದು ಅಂದುಕೊಳ್ತಾರೆ. ಹುಡುಗ ವ್ಲಾಗ್‌ ಮಾಡಿ ಕಾರ್‌, ಮನೆ ತಗೊಂಡರೆ ನೀವು ಯಾಕೆ ಆ ರೀತಿ ಯೋಚನೆ ಮಾಡೋದಿಲ್ಲ. ಹುಡುಗ ಏನೇ ಮಾಡಿದ್ರೂ ಒಳ್ಳೆಯ ರೀತಿಯಿಂದ ಬಂದಿದ್ದಾನೆ ಅಥವಾ ಸಂಪಾದನೆ ಮಾಡಿದ್ದಾನೆ ಎಂದುಕೊಳ್ಳುವ ಸಮಾಜ, ಹುಡುಗಿ ವಿಚಾರದಲ್ಲಿ ಯಾಕೆ ಯೋಚನೆ ಮಾಡೋದಿಲ್ಲ? ಎಂದು ಸೋನು ಶ್ರೀನಿವಾಸ್‌ ಗೌಡ ಅವರು ಹೇಳಿದ್ದಾರೆ.

56
ಆ ರೀತಿ ಯೋಚನೆ ಮಾಡ್ತೀರಾ?

ಯಾಕೆ ಜನರು ಇಷ್ಟು ಅಸಹ್ಯವಾಗಿ ಯೋಚನೆ ಮಾಡುತ್ತೀರಾ? ಒಂದು ಹುಡುಗ ಸಾವಿರಾರು ಹುಡುಗಿಯರ ಜೊತೆ ರೀಲ್ಸ್‌ ಮಾಡಿದ್ರೂ ಓಕೆ. ಇವಳೇ ನಾನು ಮದುವೆ ಆಗುವ ಹುಡುಗಿ ಎಂದು ಈಗ ಹುಡುಗಿಯ ಮುಖ ತೋರಿಸೋದು ಶುರುವಾಗಿದೆ, ಅದೆಲ್ಲ ಓಕೆನಾ? ನಾನು ಹಾಗೆಲ್ಲ ಹಣ ಮಾಡ್ತೀನಿ ಎಂದಿದ್ರೆ ಕಾರ್‌ ತಗೊಳ್ಳಲು ಐದು ವರ್ಷ ಬೇಕಿರಲಿಲ್ಲ.

66
ಅವೆಲ್ಲ ಓಯೋ ರೂಮ್‌ ಆಗಿರಲ್ಲ

ನಾನು ಟ್ರಿಪ್‌ಗೆ ಹೋದಾಗ ಅಲ್ಲಿರುವ ರೂಮ್‌ನಲ್ಲಿ ಫೋಟೋ ತಗೊಂಡು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿರುತ್ತೇನೆ. ಅದನ್ನು ನೋಡಿದ ಕೆಲವರು ಓಯೋ ರೂಮ್‌ ಎಂದು ಕಾಮೆಂಟ್‌ ಮಾಡ್ತಾರೆ. ವರ್ಷಾ ಕಾವೇರಿ ಎನ್ನುವ ಯುಟ್ಯೂಬರ್‌ಗೂ ಹೀಗೆ ಕಾಮೆಂಟ್‌ ಮಾಡಿದ್ದನ್ನು ನಾನು ನೋಡಿದ್ದೇನೆ. ನಿಮ್ಮ ಮನೆಯಲ್ಲಿ ಅಕ್ಕ, ತಂಗಿ, ತಾಯಿ ಹೀಗೆಲ್ಲ ಮಾಡ್ತಾರೆ ಅನಿಸುತ್ತದೆ, ಹೀಗಾಗಿ ಪ್ರಪಂಚದಲ್ಲಿ ಎಲ್ಲ ಹುಡುಗಿಯರೂ ಹೀಗೆ ಮಾಡ್ತಾರೆ ಎಂದುಕೊಂಡಿದ್ದೀರಿ ಎಂದು ಅನಿಸುತ್ತದೆ ಎಂದು ಸೋನು ಗೌಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories