Lakshmi Nivasa: ಮೊದಲಿನಿಂದಲೂ ಧಾರಾವಾಹಿ ಫಾಲೋ ಮಾಡುತ್ತಿರುವವರಿಗೆ ಭಾವನಾ ಹಳೆ ಸ್ಟೈಲ್ ಇಷ್ಟವಾಗಿತ್ತು. ಹಾಗೆ ನೋಡಿದರೆ ಸಿದ್ದೇಗೌಡರನ್ನ ಮದುವೆಯಾದ ಮೇಲೆ ಭಾವನಾ ಮೊದಲಿಗಿಂತಲೂ ಚೆನ್ನಾಗಿಯೇ ಡ್ರೆಸ್ ಮಾಡುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಒಂದು ವಿಷಯ ಇರಿಸು ಮುರಿಸು ತರುತ್ತಿದೆ.
'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್- ಜಾಹ್ನವಿ ಜೋಡಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೋ, ಅಷ್ಟೇ ಸಿದ್ದೇಗೌಡ-ಭಾವನಾ ಜೋಡಿಗೂ ಫ್ಯಾನ್ಸ್ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾವನಾ ಬದಲಾಗಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಸದ್ಯ ಮನೆಯವರನ್ನೆಲ್ಲಾ ಎದುರು ಹಾಕಿಕೊಂಡಿರುವ ಭಾವನಾ ಸಿದ್ದೇಗೌಡರಿಗೆ ತನ್ನ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸಲು ಹೊರಟ್ಟಿದ್ದಾರೆ.
26
ಹೀಗೆನ್ನಲು ಕಾರಣವೇನು?
ಮನೆಯಿಂದ ತನ್ನನ್ನು ಹೊರ ಓಡಿಸಲು ಅತ್ತೆ-ಅಕ್ಕ ಮಾಡುತ್ತಿರುವ ಕುತಂತ್ರ ತಿಳಿದ ಮೇಲೆ, ಮಾವ-ಅಜ್ಜಿಗೆ ತನ್ನ ಬಗ್ಗೆ ಸೇಡು ಎಷ್ಟಿದೆ ಎಂದ ಗೊತ್ತಾದ ಮೇಲೂ ಭಾವನಾ ಸುಮ್ಮನಿರಲು ಸಾಧ್ಯವೇ. ಹಾಗಾಗಿ ಈಗ ತನ್ನ ಶಕ್ತಿಯನ್ನೂ ತೋರಿಸಲು ಭಾವನಾ ಸಜ್ಜಾಗಿದ್ದಾಳೆ. ಆದರೆ ಈಗ ವೀಕ್ಷಕರು ಭಾವನಾಗೆ ಒಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಅವರ ಮನವಿ ಏನು, ಹೀಗೆನ್ನಲು ಕಾರಣವೇನು?, ಮುಂದೆ ನೋಡೋಣ ಬನ್ನಿ…
36
ಇಷ್ಟವಾಗಿತ್ತು ಭಾವನಾ ಹಳೆ ಸ್ಟೈಲ್
ತಾವಿಷ್ಟಪಡುವ ನಟ-ನಟಿಯರು ಧಾರಾವಾಹಿಯಲ್ಲಿ ಸಡನ್ನಾಗಿ ಸ್ಟೈಲ್ ಚೇಂಜ್ ಮಾಡಿಕೊಂಡರೆ ಕೆಲವರಿಗೆ ಇಷ್ಟವಾಗಲ್ಲ. ಈಗ ಭಾವನಾ ವಿಷಯದಲ್ಲೂ ಅದೇ ಆಗಿದೆ. ಮೊದಲಿನಿಂದಲೂ ಧಾರಾವಾಹಿ ಫಾಲೋ ಮಾಡುತ್ತಿರುವವರಿಗೆ ಭಾವನಾ ಹಳೆ ಸ್ಟೈಲ್ ಇಷ್ಟವಾಗಿತ್ತು. ಹಾಗೆ ನೋಡಿದರೆ ಸಿದ್ದೇಗೌಡರನ್ನ ಮದುವೆಯಾದ ಮೇಲೆ ಭಾವನಾ ಮೊದಲಿಗಿಂತಲೂ ಚೆನ್ನಾಗಿಯೇ ಡ್ರೆಸ್ ಮಾಡುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಒಂದು ವಿಷಯ ಇರಿಸು ಮುರಿಸು ತರುತ್ತಿದೆ.
ಹೌದು, ಭಾವನಾ ಹೊಸ ಹೇರ್‌ಸ್ಟೈಲ್ ನೋಡಿ ಮೊದಲಿನಿಂದಲೂ ವೀಕ್ಷಕರು ಕಾಮೆಂಟ್ ಮಾಡುತ್ತಲೇ ಬಂದಿದ್ದಾರೆ. ಈಗಂತೂ ರಿಕ್ವೆಸ್ಟ್ ಮಾಡುತ್ತಿದ್ದಾರೆ. ಆ ಕಾಮೆಂಟ್ಸ್‌ಗೆ ಇತರರು ಲೈಕ್ ಬಟನ್ ಒತ್ತಿರುವುದನ್ನ ನೋಡಿದರೆ ಬಹುಶಃ ಭಾವನಾ ಅಭಿಮಾನಿಗಳಿಗೆ ಅವರ ಈಗಿನ ಹೇರ್‌ಸ್ಟೈಲ್ ಇಷ್ಟವಾಗುತ್ತಿಲ್ಲ ಅನಿಸುತ್ತಿದೆ.
56
ಈ ಹಿಂದೆಯೂ ಬಂದಿತ್ತು ಕಾಮೆಂಟ್
ಭಾವನಾ ಮೇಕಪ್, ಸೀರೆ, ಜ್ಯುವೆಲರಿಯ ಬಗ್ಗೆ ಮಾತನಾಡುವೇ ಹಾಗಿಲ್ಲ. ಆದರೆ ಹೇರ್‌ಸ್ಟೈಲ್ ಮಾಡುವಾಗ ಹಣೆಯ ಮೇಲೆ ಎರಡು ಕೂದಲನ್ನ ಬಿಟ್ಟಿದ್ದಾರೆ. ಇದು ಫ್ಯಾಷನ್ ಪ್ರಿಯರಿಗೆ ಫ್ಯಾಷನ್ ಅನಿಸಿದರೂ, ಅನೇಕರು ಇದಕ್ಕೆ " ನಿನ್ನ ಹಣೆಯ ಮೇಲಿನ, ಎರಡು ಮೀಸೆಗಳನ್ನು ದಯವಿಟ್ಟು ತೆಗಿ, ಚೆನ್ನಾಗಿ ಕಾಣುವುದಿಲ್ಲ" ಅಂದಿದ್ದಾರೆ. ವೀಕ್ಷಕರು ಈ ರೀತಿ ಕಾಮೆಂಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಭಾವನಾ ಹೇರ್‌ಸ್ಟೈಲ್ ಬಗ್ಗೆ ಕಾಮೆಂಟ್ ಮಾಡಲಾಗಿತ್ತು.
66
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್
ಧಾರಾವಾಹಿಯಲ್ಲಿ ಏನೇ ಇರಲಿ, ರಿಯಲ್ ಲೈಫ್‌ನಲ್ಲಿ ಭಾವನಾ ಪಾತ್ರಧಾರಿ ದಿಶಾ ಮದನ್ ಅವರ ಸ್ಟೈಲ್ ಬಗ್ಗೆ ಎರಡು ಮಾತೇ ಇಲ್ಲ. ಟ್ರಡಿಶನಲ್ ಇರಲಿ, ಮಾಡರ್ನ್ ಇರಲಿ ಎಲ್ಲದರಲ್ಲೂ ಬಹಳ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ದಿಶಾ ಇನ್‌ಸ್ಟಾ ಪೇಜ್ ಅನ್ನ ಹಾಗೆ ಒಮ್ಮೆ ಸ್ಕ್ರಾಲ್ ಮಾಡಿದರೆ ಬಹುಶಃ ನಿಮಗೂ ಇದು ತಿಳಿಯಬಹುದು.