Bigg Bossಗೆ ಹೋದ ನಟಿ: 'Puttakkana Makkalu' ಬಂಗಾರಮ್ಮ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ದಾಖಲು!

Published : Oct 29, 2025, 12:23 PM IST

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಂಗಾರಮ್ಮ ಖ್ಯಾತಿಯ ಮಂಜು ಭಾಷಿಣಿ ಅವರು ಬಿಗ್ ಬಾಸ್ 12 ರಿಂದ ಹೊರಬಂದಿದ್ದಾರೆ. ಅವರು ಬಿಗ್ ಬಾಸ್‌ಗೆ ಹೋದ ಕಾರಣ, ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಕೋಮಾಕ್ಕೆ ಜಾರುವಂತೆ ತೋರಿಸಲಾಗಿದ್ದು, ಮುಂದೆ ಅವರೇ ಈ ಪಾತ್ರದಲ್ಲಿ ಮುಂದುವರೆಯುತ್ತಾರೆಯೇ ಎಂಬ ಕುತೂಹಲ ಮೂಡಿದೆ.

PREV
17
ಬಂಗಾರಮ್ಮನಾಗಿದ್ದ ಮಂಜು ಭಾಷಿಣಿ

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್​ ಇದೀಗ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗಿದೆ. ಇದರಲ್ಲಿ ಎಲ್ಲರ ಗಮನ ಸೆಳೆದ ಕ್ಯಾರೆಕ್ಟರ್​ಗಳಲ್ಲಿ ಒಂದು ಬಂಗಾರಮ್ಮನ ಕ್ಯಾರೆಕ್ಟರ್​. ಅದನ್ನು ನಿಭಾಯಿಸಿದವರು Bigg Boss 12 ಖ್ಯಾತಿಯ ಮಂಜು ಭಾಷಿಣಿ ಅವರು.

27
ಬಂಗಾರಮ್ಮ ಎಂದೇ ಫೇಮಸ್​

ಮಂಜು ಭಾಷಿಣಿ ಎಂದರೆ, ಇಲ್ಲಿಯವರೆಗೆ ಯಾರಿಗೂ ತಿಳಿಯುತ್ತಿರಲಿಲ್ಲ. ಬಂಗಾರಮ್ಮ ಎಂದೇ ಫೇಮಸ್​ ಆಗಿರುವ ನಟಿ, ಇದೀಗ ಬಿಗ್​ಬಾಸ್​​ನಿಂದಾಗಿ ಮಂಜು ಭಾಷಿಣಿ (Manju Bhashini) ಎನ್ನುವುದು ಎಲ್ಲರಿಗೂ ತಿಳಿಯುವಂತಾಗಿದೆ.

37
ಬಂಗಾರಮ್ಮ ಸ್ಥಿತಿ ಚಿಂತಾಜನಕ

ಬಿಗ್​ಬಾಸ್​ಗೆ ಹೋದ ಹಿನ್ನೆಲೆಯಲ್ಲಿ, ಪುಟ್ಟಕ್ಕನ ಮಕ್ಕಳು ಬಂಗಾರಮ್ಮನ ಕ್ಯಾರೆಕ್ಟರ್​ ಅನ್ನು ಸಾಯಿಸಿಯೇ ಬಿಟ್ಟರು ಎನ್ನಲಾಗಿತ್ತು. ಆದರೆ ಬಂಗಾರಮ್ಮನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

47
ಪುಟ್ಟಕ್ಕನ ಹರಕೆ

ಅತ್ತ ಸಹನಾ ಮತ್ತು ಪುಟ್ಟಕ್ಕ ಬಂಗಾರಮ್ಮನಿಗಾಗಿ ಹರಕೆ ಹೊತ್ತಿದ್ದಾರೆ. ಈಗ ರಿಲೀಸ್​ ಆಗಿರುವ ಪ್ರೊಮೋದಲ್ಲಿ ಬಂಗಾರಮ್ಮನ ಕ್ಯಾರೆಕ್ಟರ್​ ಬದಲಾಗಿರುವುದನ್ನು ನೋಡಬಹುದು. ಬಿಗ್​ಬಾಸ್​​ನಿಂದ ನಟಿ ಇಷ್ಟು ಬೇಗ ಹೊರಕ್ಕೆ ಬರುತ್ತಾರೆ ಎಂದು ತಿಳಿದಿದ್ದರೆ ಬಹುಶಃ ಈ ಪಾತ್ರವನ್ನು ಬದಲು ಮಾಡುತ್ತಿರಲಿಲ್ಲವೇನೋ.

57
ಸಂದರ್ಶನದಲ್ಲಿ ಹೇಳಿದ್ದೇನು?

ನಟಿ ಮಂಜು ಭಾಷಿಣಿ ಕೂಡ ಇದನ್ನೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಇದೀಗ ಪಾತ್ರ ಬದಲಾಗಿರುವುದನ್ನು ನೋಡಬಹುದಾಗಿದೆ. ಕೋಮಾಕ್ಕೆ ಜಾರಿರುವುದನ್ನು ತೋರಿಸಲಾಗಿದೆ. ಇನ್ನು ಮಂಜು ಭಾಷಿಣಿ ಅವರು ಹೊರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮುಂದೆ ಅವರೇ ಈ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನುವುದನ್ನು ಇನ್ನಷ್ಟೇ ನೋಡಬೇಕಿದೆ.

67
ಮೂರನೇ ವಾರಕ್ಕೆ ಹೊರಗೆ

ಇನ್ನು ನಟಿಯ ಕುರಿತು ಹೇಳುವುದಾದರೆ, ಮಂಜು ಭಾಷಿಣಿ ಅವರು, ಮೂರನೇ ವಾರಕ್ಕೆ Bigg Boss 12 ಮನೆಯಿಂದ ಹೊರಬಂದಿದ್ದಾರೆ. ಅಷ್ಟಕ್ಕೂ, ನಟಿ ಇದಾಗಲೇ ಸಿನಿಮಾಗಳಲ್ಲಿಯೂ ಫೇಮಸ್​. 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ `ಭೂಮಿ ತಾಯಿ' ಮೂಲಕ ಜನಪ್ರಿಯರಾದರು.

77
ಅಕಾಡೆಮಿ ನಡೆಸುತ್ತಿದ್ದಾರೆ

ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸಿಲ್ಲಿ ಲಲ್ಲಿ' ಧಾರವಾಹಿಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು. ಇವರು `ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಯನ್ನು ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ:  ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ Bigg Boss ಮಂಜು ಭಾಷಿಣಿ: ನಟಿಯ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ

Read more Photos on
click me!

Recommended Stories