‘ಅಮೃತಧಾರೆ’ಯ ಮಲ್ಲಿ ಹಾಗೂ ‘ಭಾರ್ಗವಿ ಎಲ್ಎಲ್ಬಿ’ಯ ಭಾರ್ಗವಿಯಾಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಿರುತೆರೆ ಮಾತ್ರವಲ್ಲದೆ ಬೆಳ್ಳಿಪರದೆಗೂ ಕಾಲಿಟ್ಟಿದ್ದಾರೆ. ನಟನೆ, ಮಾಡೆಲಿಂಗ್ ಜೊತೆಗೆ ಹಿನ್ನೆಲೆ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಇವರು ಕಲಾವಿದರ ಕುಟುಂಬದಿಂದ ಬಂದವರು
ಅಕ್ಕವ್ರೇ ಅಕ್ಕವ್ರೇ ಎಂದು ಅಮೃತಧಾರೆಯ ಭೂಮಿಕಾ ಹಿಂದೆ ಮುಂದೆ ಓಡಾಡ್ತಿದ್ದ ಮಲ್ಲಿ ಭಾರ್ಗವಿ ಎಲ್ಎಲ್ಬಿ ಆಗಿ ಕೆಲ ತಿಂಗಳುಗಳೇ ಕಳೆದಿವೆ. ಮಾವನ ವಿರುದ್ಧವೇ ಸಿಡಿದೆದ್ದು ಹೆಣ್ಣೊಬ್ಬಳಿಗೆ ನ್ಯಾಯ ಕೊಡಿಸುವ ಪಾತ್ರದಲ್ಲಿ, ಭಾರ್ಗವಿ ಆಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವವರು ನಟಿ ರಾಧಾ ಭಗವತಿ (Radha Bagavathi)
27
ವಿರುದ್ಧ ಕ್ಯಾರೆಕ್ಟರ್ನಲ್ಲಿಯೂ ಸೈ
ಅಲ್ಲಿ ಮಲ್ಲಿಯಾಗಿ, ಇಲ್ಲಿ ಭಾರ್ಗವಿಯಲ್ಲಿ ಎರಡೂ ವಿಭಿನ್ನ, ತದ್ವಿರುದ್ಧ ಕ್ಯಾರೆಕ್ಟರ್ನಲ್ಲಿ ನಟಿಸಿ ಎರಡರಲ್ಲಿಯೂ ಸೈ ಎನ್ನಿಸಿಕೊಂಡಿರುವ ನಟಿ ರಾಧಾ ಭಗವತಿ, ಭಾರ್ಗವಿಯಾಗಿ ಹವಾ ಸೃಷ್ಟಿಸುತ್ತಿದ್ದಾರೆ. ಇದಾಗಲೇ ಇವರ ನಟನೆಯ ಅಪಾಯವಿದೆ ಎಚ್ಚರಿಕೆ ಸಿನಿಮಾ ಕೂಡ ರಿಲೀಸ್ ಆಗಿದೆ.
37
ಮದುಮಗಳಾಗಿ ಮಿಂಚಿಂಗ್
ಇದೀಗ ನಟಿ ಕ್ಯೂಟ್ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮದುಮಗಳಾಗಿ ಮಿಂಚುತ್ತಿದ್ದಾರೆ. ಅಂದಹಾಗೆ ರಾಧಾ ಭಗವತಿ ಅವರು, ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು.
ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸಿದರು. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ.
57
ಹಲವು ಸಿನಿಮಾಗಳಲ್ಲಿಯೂ ನಟನೆ
ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.
67
'ಅಪಾಯವಿದೆ ಎಚ್ಚರಿಕೆ'
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
77
ಕಲಾವಿದರ ಕುಟುಂಬ
ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ.