ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿಗಾಗಿ ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ, ಹಾಲಿ ಸ್ಪರ್ಧಿ ಗಿಲ್ಲಿ ನಟನ ಮಾತುಗಳಿಂದ ವಿವಾದ ಸೃಷ್ಟಿಯಾಗಿದ್ದು, ಅತಿಥಿಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು ಅವರ ಮದುವೆ ನಿಶ್ಚಯವಾದ ಬೆನ್ನಲ್ಲಿಯೇ ಅವರನ್ನು ಬ್ಯಾಚುಲರ್ ಪಾರ್ಟಿ ಮಾಡಿಸುವ ನೆಪದಲ್ಲಿ ಐವರು ಮಾಜಿ ಸ್ಪರ್ಧಿಗಳನ್ನು ಬಿಗ್ ಬಾಸ್ ಸೀಸನ್ 12ರ ಮನೆಯೊಳಗೆ ಕಳುಹಿಸಲಾಗಿದೆ. ಇದೀಗ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಎಲ್ಲರೂ ಸೇರಿ ಹಾಲಿ ಸ್ಪರ್ಧಿ ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಆಕ್ರೋಶ ಅಭಿಮಾನಿಗಳಿಂದ ಕೇಳಿಬಂದಿದೆ.
210
ಬಿಗ್ ಬಾಸ್ ಪ್ಯಾಲೇಸ್
ಬಿಗ್ ಬಾಸ್ ಮನೆಯನ್ನು ಇದೀಗ ಬಿಗ್ ಬಾಸ್ ಪ್ಯಾಲೇಸ್ (BB Palace) ಎಂಬುದಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡುವ ಸೇವಕರನ್ನಾಗಿ ಮಾಡಲಾಗಿದೆ. ಇದರಲ್ಲಿ ಕ್ಯಾಪ್ಟನ್ ಅಭಿ ಮ್ಯಾನೇಜರ್ ಆಗಿದ್ದರೆ, ಗಿಲ್ಲಿ ನಟ ಸರ್ವರ್ (ಹೋಟೆಲ್ ಸಪ್ಲೈಯರ್) ಆಗಿದ್ದಾನೆ.
310
ಗಿಲ್ಲಿಯನ್ನು ಟಾರ್ಗೆಟ್ ಮಾಡಲು ಚರ್ಚೆ
ಗಿಲ್ಲಿ ನಟ ಮೊದಲೇ ಬಾಯಿಗೆ ಫಿಲ್ಟರ್ ಇಲ್ಲದೇ, ಬೇರೊಬ್ಬರಿಗೆ ನೋವಾಗುತ್ತದೆ ಎಂಬುದನ್ನೂ ಆಲೋಚನೆ ಮಾಡದೇ ಇರೋದನ್ನು ನೇರವಾಗಿ ಕಾಮಿಡಿ ಮಾಡುತ್ತಲೇ ಮಾತನಾಡಿಬಿಡುತ್ತಾನೆ. ಹೀಗಾಗಿ, ಪ್ರತಿವಾರದ ಕಿಚ್ಚನ ಪಂಚಾಯಿತಿ ವೇಳೆ ಗಿಲ್ಲಿಯ ಕಾಮಿಡಿಯಿಂದ ಬೇರೊಬ್ಬರಿಗೆ ಅವಮಾನ ಆಗುತ್ತಿದೆ ಎಂಬ ಮಾತು ಮುನ್ನೆಲೆಗೆ ಬರುತ್ತದೆ.
ಇದೀಗ ಎಲ್ಲರ ಮನಸ್ಸಿಗೆ ನಮ್ಮ ಮಾತಿನಿಂದ ನೋವಾಗುತ್ತಿದ್ದರೂ, ನಾನು ಸತ್ಯವನ್ನೇ ಹೇಳ್ತೇನೆ ಎಂದಿದ್ದ ಗಿಲ್ಲಿಯನ್ನೇ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಬಂದ ಮಾಜಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದ್ದಾರೆ.
ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ಉಗ್ರಂ ಮಂಜು ಬಿಗ್ ಬಾಸ್ ಮನೆಗೆ ಬಂದ ಕೂಡಲೇ ಗಿಲ್ಲಿ ನಟ ಅವರಿಗೆ ಮಾತಿನ ಟಾಂಗ್ ಕೊಟ್ಟಿದ್ದಾರೆ. ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ನಾವೆಲ್ಲರೂ ಬ್ಯಾಚುಲರ್ ಪಾರ್ಟಿ ಮಾಡಲು ಬಂದಿದ್ದೇವೆ ಎಂದು ಮೋಕ್ಷಿತಾ ಪೈ ಹೇಳುತ್ತಾರೆ. ಬಿಗ್‌ಬಾಸ್ ಮದುವೆ ವಿಷಯ ಹೇಳುತ್ತಿದ್ದಂತೆ ಗಿಲ್ಲಿ ನಟ, ಎರಡನೇಯದ್ದಾ ಅಥವಾ ಮೂರನೇದ್ದಾ ಅಂತ ಕೇಳುತ್ತಾರೆ.
510
ನೀನು ಸಪ್ಲೈಯರೂ ಅಲ್ಲ, ನಾನು ಅತಿಥಿಯೂ ಅಲ್ಲ
ಕೂಡಲೇ ಮಂಜು ಕೋಪದಿಂದ ಗಿಲ್ಲಿಯತ್ತ ನೋಡುತ್ತಾರೆ. ಪರ್ಸನಲ್ ಅಂತಾ ಬಂದ್ರೆ ನೀನು ಸಪ್ಲೈಯರೂ ಅಲ್ಲ, ನಾನು ಅತಿಥಿಯೂ ಅಲ್ಲ. ಬೇರೆಯೇ ಆಗುತ್ತೆ ಎಂದು ಮಂಜು ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಂದರೆ, ಉಗ್ರಂ ಮಜು ಮದುವೆ ವಿಚಾರದ ಕುರಿತಾದ ಯೂಟೂಬ್ ವಿಡಿಯೋದ ಬಗ್ಗೆ ಮಾತನಾಡಿದ್ದಾಗಿ ಹೇಳಿದರೂ, ಉಗ್ರಂ ಮಂಜು ಅವರು ಗಿಲ್ಲಿ ನಟನ ಮೇಲೆ ಗರಂ ಆಗಿ ಗ್ರಹಚಾರ ಬಿಡಿಸಿದ್ದರು.
610
ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ
ಇದಾದ ನಂತರ ಗಿಲ್ಲಿ ನಟ, ನಿಮಗೆಲ್ಲಾ ಮಂಜಣ್ಣ ಲೀಡರ್ ಅಲ್ಲವಾ? ಬ್ಯಾಚುಲರ್ ಪಾರ್ಟಿ ಮಾಡೋಕೆ ಬಂದಿದ್ದೇವೆ ಎಂದ ಮೋಕ್ಷಿತಾ ಅವರಿಗೆ ನೀವು ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ ಅಂತ ಕೇಳ್ತಾರೆ. ಈ ವೇಳೆ ಮಧ್ಯೆ ಬಂದ ರಜತ್, ನೀನು ನಮಗೆ ಬಿಟ್ಟಿ ಊಟ ಕೊಡ್ತಿದ್ದೇನಪ್ಪಾ? ಮಾತುಗಳು ಸರಿಯಾಗಿರಲಿ. ಎಲ್ಲರ ಹತ್ತಿರ ಮಾತನಾಡಿದಂತೆ ನನ್ನೊಂದಿಗೆ ಮಾತಾಡಬೇಡ ಎಂದು ಹೇಳಿದ್ದಾರೆ. ಇದಾದ ನಂತರ ಗಿಲ್ಲಿ ನಟ ಕ್ಷಮೆ ಕೇಳುತ್ತಾನೆ.
710
ಅತಿಥಿಗಳ ಬಗ್ಗೆ ತೆಗಳುವಂತೆ ಟಾಸ್ಕ್
ಇದೀಗ ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳಿಗೆ ಮನರಂಜನೆ ನೀಡಲು ಎಲ್ಲರಿಗೂ ತಲಾ ಒಂದೊಂದು ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಗಿಲ್ಲಿ ನಟನಿಗೆ ಅತಿಥಿಗಳ ಬಗ್ಗೆ ತೆಗಳುವಂತೆ ಟಾಸ್ಕ್ ನೀಡಲಾಗಿದ್ದು, ಅದನ್ನು ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾನೆ.
810
ಗಿಲ್ಲಿಗೆ ಕ್ಲಾಸ್
ಈ ವೇಳೆ ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಎಲ್ಲರೂ ಬೆಡ್‌ರೂಮಲ್ಲಿ ಕುಳಿತುಕೊಂಡು ಅಲ್ಲಿಗೆ ಗಿಲ್ಲಿಯನ್ನು ಮುಂದೆ ಕೂರಿಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ. ಅದೇನು ಮಾತನಾಡ್ತೀಯ ಮಾತಾಡು ಎಂದು ಕ್ವಾಟ್ಲೆ ಕೊಟ್ಟಿದ್ದಾರೆ.
910
ತಂದಾಕೋರು ನಮಗೆ ಎಷ್ಟಿರಬೇಡ
ಇನ್ನು ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಬಿಬಿ ರೆಸ್ಟೋರೆಂಟ್‌ಗೆ ಬಂದ ಅತಿಥಿಗಳ ಬಗ್ಗೆ ತೆಗಳುತ್ತಾ 'ಮನೆಗೆ 5 ಜನ ನೆಂಟ್ರು ಬಂದ್ರು, ತಿಂದ್ರೂ ತಿಂದ್ರ ತಿಂದ್ರೂ ತಿಂದ ಮೇಲೂ ದವಲತ್ತು..., ತಿನ್ನೋರು ಅವರಿಗೇ ಅಷ್ಟಿರಬೇಕಾದ್ರೆ, ತಂದಾಕೋರು ನಮಗೆ ಎಷ್ಟಿರಬೇಡ ಎಂದು ಹೇಳುತ್ತಾರೆ. ಈ ಮಾತಿಗೆ ಮಾಜಿ ಸ್ಪರ್ಧಿಗಳು ಕೆಂಡಾಮಂಡಲ ಆಗಿದ್ದಾರೆ.
1010
ಗಿಲ್ಲಿಯನ್ನ ಎಷ್ಟು ಟಾರ್ಗೆಟ್ ಮಾಡ್ತೀರಾ ಮಾಡಿ
ಮಾಜಿ ಸ್ಪರ್ಧಿಗಳು ಬಿಬಿ ಪ್ಯಾಲೇಸ್‌ಗೆ ಅತಿಥಿಗಳಾಗಿ ಬಂದಿದ್ದೇವೆ ಎಂಬುದನ್ನು ಮರೆತು, ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದಾರೆ. ಗಿಲ್ಲಿ ಬೈದಿದ್ದನ್ನು ಟಾಸ್ಕ್ ಎಂಬುದನ್ನೂ ಅರ್ಥ ಮಾಡಿಕೊಳ್ಳದೆ ಜಗಳಕ್ಕೆ ಮುಂದಾಗಿರುವುದು ಗಿಲ್ಲಿ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಹೀಗಾಗಿ, ಅಭಿಮಾನಿಗಳು 'ಇವನೇನ್ ಗುರು ಅತಿಥಿಯಾಗಿ ಬಂದಿದ್ದಾನಾ, ಇಲ್ಲ ಬಿಲ್ಡಪ್ ತೋರ್ಸೋಕ್ ಬಂದಿದ್ದಾನಾ? ಗಿಲ್ಲಿಯನ್ನ ಎಷ್ಟು ಟಾರ್ಗೆಟ್ ಮಾಡ್ತೀರಾ ಮಾಡಿ, ಈ ಸಲ ಕಪ್ ಗಿಲ್ಲಿದೇ' ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ.