Bhagyalakshmi Serial ಮುಗಿಯಲ್ಲ ಎಂದಿದ್ಯಾಕೆ ನಟಿ ಸುಷ್ಮಾ ರಾವ್​? ಕೊನೆಗೂ ರಿವೀಲ್​ ಆಯ್ತು ಸತ್ಯ!

Published : Mar 05, 2026, 06:07 PM IST

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಮುಗಿಯಲಿದೆ ಎಂಬ ವದಂತಿಗೆ ನಟಿ ಸುಷ್ಮಾ ತೆರೆ ಎಳೆದಿದ್ದಾರೆ. ಭಾಗ್ಯ ಮತ್ತು ಆದಿ ಒಂದಾಗಿದ್ದರೂ,ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಹೀಗಾಗಿ ಸೀರಿಯಲ್ ಸದ್ಯಕ್ಕೆ ಮುಗಿಯುವುದಿಲ್ಲ ಎಂಬುದು ಖಚಿತವಾಗಿದೆ.

PREV
16
ಮೂರು ವರ್ಷಗಳ ಸೀರಿಯಲ್​

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಆರಂಭವಾಗಿ ಮೂರು ವರ್ಷಗಳಾಗಿವೆ. ಭಾಗ್ಯಳಿಗೆ ತಾಂಡವ್​ನಿಂದ ಆಗ್ತಿದ್ದ ಟಾರ್ಚರ್​ ನೋಡಿ ನೋಡಿ ಬೇಸತ್ತವರಿಗೆ ಕೆಲ ದಿನಗಳಿಂದ ಖುಷಿಯ ಸುದ್ದಿಯೂ ಸಿಕ್ಕಿದೆ. ಭಾಗ್ಯ ಮತ್ತು ಆದಿ ಒಂದಾಗಿದ್ದಾರೆ. ತಾಂಡವ್​ ಬದಲಾಗಿದ್ದರೂ, ಭಾಗ್ಯ ಆತನನ್ನು ಒಪ್ಪಿಕೊಳ್ಳುತ್ತಿಲ್ಲ. ಭಾಗ್ಯ ನನ್ನನ್ನು ಕ್ಷಮಿಸಿದರೆ ಸಾಕು ಎನ್ನುತ್ತಿದ್ದಾನೆ ತಾಂಡವ್​. ಆದರೆ ಮಗಳು ಮತ್ತು ಅತ್ತೆ ಬಿಟ್ಟು ಯಾರೂ ಆತನನ್ನು ನಂಬುತ್ತಿಲ್ಲ.

26
ಸೀರಿಯಲ್ ಮುಗಿಯುವ ಸುದ್ದಿ

ಶ್ರೇಷ್ಠಾ ಮತ್ತು ತಾಂಡವ್​ನನ್ನು ಒಂದು ಮಾಡಿ ಭಾಗ್ಯ-ಆದಿ ಮದ್ವೆಯಾದ್ರೆ ಅಲ್ಲಿಗೆ ಸೀರಿಯಲ್​ ಮುಗಿಯತ್ತೆ ಎಂದು ಸಕತ್​ ಸುದ್ದಿಯಾಗಿತ್ತು. ಸೀರಿಯಲ್​ ತಂಡಗಳು ಟೂರ್​ ಮಾಡಿದ್ದು ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದರಿಂದು ಶೂಟಿಂಗ್​ ಮುಗಿದಿದೆ ಎನ್ನಲಾಗಿತ್ತು.

36
ನಟಿಯಿಂದ ಸ್ಪಷ್ಟನೆ

ಆದರೆ ಕೊನೆಗೆ ಭಾಗ್ಯ ಅರ್ಥಾತ್​ ನಟಿ ಸುಷ್ಮಾ ಕೆ. ರಾವ್​ ಅವರು ಸೀರಿಯಲ್​ ಮುಗಿಯಲ್ಲ, ಇವೆಲ್ಲಾ ಸುಳ್ಳು ಸುದ್ದಿ. ಸೀರಿಯಲ್​ ಇನ್ನೂ ಇದೆ ಎಂದು ಅವರ ಇನ್​ಸ್ಟಾದಲ್ಲಿ ಹೇಳಿದ್ದರು. ಇದರ ಅಸಲಿಯತ್ತು ಇದೀಗ ಬಯಲಾಗಿದೆ.

46
ಆದಿಯನ್ನು ಒಪ್ಪಿದ ಭಾಗ್ಯ

ಅಷ್ಟಕ್ಕೂ ಆಗಿರುವುದು ಏನೆಂದರೆ, ಇದೀಗ ಭಾಗ್ಯ ಕೂಡ ಆದಿಯನ್ನು ಮನಸಾರೆ ಒಪ್ಪಿಕೊಂಡಿದ್ದಾಳೆ. ತಾಂಡವ್​ ಬದಲಾಗಿದ್ದರಿಂದ, ಆತನ ಮೇಲೆ ಭಾಗ್ಯಳಿಗೆ ಏನಾದ್ರೂ ಮತ್ತೆ ಅನುಕಂಪ ಬರಬಹುದಾ ಎನ್ನುವ ಆದಿಯ ಸಂದೇಹವನ್ನೂ ದೂರ ಮಾಡಿರುವ ಭಾಗ್ಯ, ನಾನು ಎಂದೆಂದಿಗೂ ನಿಮ್ಮವಳೇ ಎಂದಿದ್ದಾಳೆ. ಅಲ್ಲಿಗೆ ಸದ್ಯದ ಮಟ್ಟಿಗೆ ಆದಿ ಮತ್ತು ಭಾಗ್ಯ ಒಂದಾಗುವ ನಿರೀಕ್ಷೆ ಇದೆ.

56
ತನ್ವಿ ಒಪ್ಪಿಗೆ

ಆದರೆ, ಇಲ್ಲೇ ಇರೋದು ಟ್ವಿಸ್ಟ್​. ಮಗಳು ತನ್ವಿ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲ್ಲ. ಅವಳು ಏನಿದ್ದರೂ ಬದಲಾಗಿರುವ ಅಪ್ಪನ ಪರ. ಆದ್ದರಿಂದ ಮಗಳನ್ನು ಒಪ್ಪಿಸಿ ನಾನು ಮದುವೆಯಾಗುವುದಾಗಿ ಆದಿಗೆ ಭಾಗ್ಯ ಹೇಳಿದ್ದು, ಅದಕ್ಕೆ ಆದಿನೂ ಒಪ್ಪಿಕೊಂಡಿದ್ದಾನೆ. ಕೈಮೇಲೆ ಕೈಯಿಟ್ಟು ಭರವಸೆ ಕೊಟ್ಟಿದ್ದಾನೆ ಆದಿ.

66
ಸೀರಿಯಲ್​ ಮುಗಿಯಲ್ಲ

ಅಲ್ಲಿಗೆ ತನ್ವಿ ಒಪ್ಪಲ್ಲ, ಭಾಗ್ಯ-ಆದಿ ಸದ್ಯ ಒಂದಾಗಲ್ಲ ಎನ್ನೋದಂತೂ ನಿಜ. ಇನ್ನೊಂದೆಡೆ, ಆದಿ ಮತ್ತು ಭಾಗ್ಯಳನ್ನು ದೂರ ಮಾಡಲು ಆದಿಯ ಅಪ್ಪನೂ ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು ಎಂದು ಜ್ಯೋತಿಷಿ ಹೇಳಿದ್ದಾನೆ. ಒಟ್ಟಿನಲ್ಲಿ ಹುಣ್ಣಿಮೆ ಬರಲು ಸೀರಿಯಲ್​ನಲ್ಲಿ ಇನ್ನೆಷ್ಟು ವರ್ಷ ಕಾಯಬೇಕೋ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿರಬೇಕು ಅಷ್ಟೇ. ಸೀರಿಯಲ್​ ಅಂತೂ ಸದ್ಯ ಮುಗಿಯಲ್ಲ ಎನ್ನುವುದು ಕನ್​ಫರ್ಮ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories