ನಿರೂಪಕಿ ಅನುಶ್ರೀ ಉಸಿರು ಉಸಿರಲ್ಲೂ ಇದೆಯಂತೆ ಗಂಡನ ಹೆಸರು!

Published : Mar 05, 2026, 04:56 PM IST

Anchor Anushree: ನಿರೂಪಕಿ ಅನುಶ್ರೀಯವರು ತಮ್ಮ ಪತಿ ಜೊತೆಗಿನ ಕ್ಯೂಟ್ ಆಗಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಜೊತೆಗೆ ಗಂಡನಿಗೆ ಮುದ್ದಾದ ಮೆಸೇಜ್ ಕೂಡ ನೀಡಿದ್ದಾರೆ. ಅನುಶ್ರೀ ಫೋಟೊದಲ್ಲಿ ಅಂತದ್ದೇನಿದೆ, ನೀವೆ ನೋಡಿ ಈ ಮುದ್ದಾದ ಜೋತೆಯ ಮುದ್ದಾದ ಫೋಟೊಗಳು. 

PREV
16
ಅನುಶ್ರೀ

ಅನುಶ್ರೀಯವರು ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಮದುವೆಯಾದ ಬಳಿಕ ಪತಿ ಜೊತೆ ಟ್ರಾವೆಲ್ ಮಾಡೋದ್ರಲ್ಲಿ, ಮಧುರ ಸಮಯಗಳನ್ನು ಕಳೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪತಿ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಅನುಶ್ರೀ ಗಂಡನಿಗೊಂದು ಮೆಸೇಜ್ ಕೂಡ ಕೊಟ್ಟಿದ್ದಾರೆ.

26
ಜನಪ್ರಿಯ ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆಯಲ್ಲಿ ತಮ್ಮ ಮುದ್ದು ಮುದ್ದು ಮಾತುಗಳು, ಸ್ಪಾಟ್ ನಲ್ಲಿ ಮಾತನಾಡುವ ಕಲೆ, ಆ ಕನ್ನಡದ ನುಡಿಗಳು, ಎಲ್ಲೂ ಬೋರ್ ಹೊಡೆಸದ ಆಂಕರಿಂಗ್ ಎಲ್ಲವೂ ಸೇರಿ ಜನಪ್ರಿಯತೆಯನ್ನು ಹೆಚ್ಚಿಸಿದೆ. ಇದೀಗ ನಿರೂಪಕಿ ಅನುಶ್ರೀ ಮದುವೆಯ ಬಳಿಕ ಅವರ ಪತಿ ಜೊತೆಗಿನ ಫೋಟೊಗಳು ಸಹ ಅಭಿಮಾನಿಗಳ ಮನ ಗೆದ್ದಿದೆ.

36
ಉಸಿರಲ್ಲೆಲ್ಲಾ ನಿನ್ನ ಹೆಸರಿದೆ ಎಂದ ಅನುಶ್ರೀ

ನಿರೂಪಕಿ ಅನುಶ್ರೀಯವರು ಗಂಡನ ಜೊತೆಗೆ ಹಸಿರು ಸಿರಿಯ ಮಧ್ಯೆ ಹಸಿರು ಬಣ್ಣದ ಕಪ್ ಹಿಡಿದು ಕಾಫಿ ಕುಡಿಯುತ್ತಾ, ಮಧುರ ಕ್ಷಣಗಳನ್ನು ಕಳೆಯುತ್ತಾ, ಹಸಿರಲ್ಲೂ ಉಸಿರು…ಆ ಉಸಿರಲ್ಲಿರಲಿ ನಿನ್ನ ಹೆಸರು ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಗಂಡನ ಮೇಲಿನ ಪ್ರೀತಿಯನ್ನು ಹೊರ ಹಾಕಿದ್ದಾರೆ.

46
ರೋಶನ್ ರೊಮ್ಯಾಂಟಿಕ್ ಬಾಯ್

ಅನುಶ್ರೀ ಮತ್ತು ರೋಶನ್ ಮುದ್ದಾದ ಫೋಟೊಗಳನ್ನು ನೋಡಿ ಅಭಿಮಾನಿಗಳು, ಕಲಾವಿದರರು ಕಾಮೆಂಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ನಿರೂಪಕರಾದ ಅಕುಲ್ ಬಾಲಾಜಿ ಕಾಮೆಂಟ್ ಮಾಡಿ ರೋಶನ್ ರೊಮ್ಯಾಂಟಿಕ್ ಬಾಯ್ ಎಂದಿದ್ದಾರೆ.

56
ಅನುಶ್ರೀ-ರೋಶನ್ ಮದುವೆ

ಅನುಶ್ರೀಯವರು ಆಗಸ್ಟ್ 28, 2025 ರಂದು ಕೊಡಗು ಮೂಲದ ಉದ್ಯಮಿಯಾಗಿರುವ ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ರೋಷನ್ ಅವರನ್ನು ವಿವಾಹವಾದರು. ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್‌ ನಲ್ಲಿ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆದಿತ್ತು. ಸಿನಿಮಾ ತಾರೆಯರು ಮದುವೆಗೆ ಆಗಮಿಸಿ ಶುಭ ಕೋರಿದ್ದರು.

66
ಡಿಕೆಡಿ ನಿರೂಪಕಿ

ಒಟ್ಟಿನಲ್ಲಿ ತಮ್ಮ ಮಾತಿನ ಮೂಲಕವೇ ಇಡೀ ಕರ್ನಾಟಕ ಜನತೆಯ ಮನಸ್ಸು ಗೆದ್ದಿರುವ ಅನುಶ್ರೀ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಿತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories