Bhagyalakshmi ಸೀರಿಯಲ್​ ಮುಗಿದೇ ಹೋಯ್ತಾ? ಏನಿದು ಇಷ್ಟು ಖುಷಿ- ಇಲ್ಲೇ ಇರೋದು ಟ್ವಿಸ್ಟ್​!

Published : Nov 24, 2025, 05:37 PM IST

ಟಿಆರ್‌ಪಿಗಾಗಿ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯನ್ನು ಎಳೆಯಲಾಗುತ್ತಿದ್ದು, ಆದಿ ಪಾತ್ರದ ಎಂಟ್ರಿಯಿಂದ ಹೊಸ ತಿರುವು ಪಡೆದಿದೆ. ಇತ್ತೀಚೆಗೆ ಭಾಗ್ಯ, ಆದಿ, ತಾಂಡವ್, ಶ್ರೇಷ್ಠಾ ಒಟ್ಟಿಗೆ ಕಾಣಿಸಿಕೊಂಡ ವೈರಲ್ ವಿಡಿಯೋ ಕೇವಲ ರೀಲ್ಸ್ ಆಗಿದ್ದು, ಸೀರಿಯಲ್ ಮುಗಿದಿಲ್ಲ ಎಂಬುದನ್ನು ಈ ಲೇಖನ ವಿವರಿಸುತ್ತದೆ.

PREV
17
ಇನ್ನೂ ನಾಲ್ಕೈದು ವರ್ಷ

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ವೀಕ್ಷಕರಿಗೆ ತಿಳಿದಿರುವಂತೆ ಸದ್ಯದ ಪರಿಸ್ಥಿತಿ ನೋಡಿದರೆ, ಇನ್ನೂ ನಾಲ್ಕೈದು ವರ್ಷ ಈ ಸೀರಿಯಲ್​ ಮುಗಿಯುವಂತೆ ಕಾಣಿಸುವುದಿಲ್ಲ. ಕಥೆ ಬೆಳೆಯುತ್ತಲೇ ಸಾಗಿದೆ.

27
ಎಳೆಯುತ್ತಿರುವ ಸ್ಟೋರಿ

ಟಿಆರ್​ಪಿ ಹೆಚ್ಚಿರುವ ಕಾರಣದಿಂದ ಕಥೆಯನ್ನು ಎಳೆಯಲಾಗುತ್ತಿದೆ ಎನ್ನುವುದು ಸತ್ಯವಾದರೂ, ಟ್ವಿಸ್ಟ್​ ಮೇಲೆ ಟ್ವಿಸ್ಟ್​ ತಂದು ಈ ಸೀರಿಯಲ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವುದೂ ಅಷ್ಟೇ ಸತ್ಯ.

37
ಅತಿಯಾದ ಗೋಳು

ಭಾಗ್ಯಳ ಅತಿಯಾದ ಗೋಳು, ತಾಂಡವ್​ನ ಅತಿಯಾದ ಕ್ರೂರತನ ಹಲವು ಬಾರಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವುದು ಇದೆ. ಇನ್ನೇನು ಒಳ್ಳೆಯದಾಗುತ್ತದೆ ಎಂದಾಗ ಮತ್ತದೇ ಕೆಟ್ಟ ಸ್ಥಿತಿ. ಅದೇ ಇನ್ನೊಂದೆಡೆ ವಿಲನ್​ ಆಗಿರೋ ತಾಂಡವ್​ನ ಅತಿಯಾದ ಕ್ರೂರತನ.

47
ನಿಷ್ಕಲ್ಮಷ ಸ್ನೇಹ

ಇದರ ನಡುವೆಯೇ ಆದಿ ಎಂಟ್ರಿ ಆಗಿದೆ. ಆದಿ ಮತ್ತು ಭಾಗ್ಯ ಮದುವೆಯಾಗಬೇಕು ಎಂದು ಕೆಲವರು ಬಯಸಿದರೆ, ಇವರ ನಿಷ್ಕಲ್ಮಷ ಸ್ನೇಹ ಹಾಗೆಯೇ ಮುಂದುವರೆಯಲಿ ಎಂದು ಹಾರೈಸುವವರು ಇನ್ನು ಕೆಲವರು.

57
ಎಲ್ಲರೂ ಒಟ್ಟಿಗೇ...

ಇದರ ನಡುವೆಯೇ ಈಗ ಭಾಗ್ಯ, ಆದಿ, ತಾಂಡವ್, ಶ್ರೇಷ್ಠಾ ಎಲ್ಲರೂ ಒಟ್ಟಿಗೇ ಇರುವ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಸೀರಿಯಲ್​ ಮುಗಿದಿದೆ ಎಂದುಕೊಳ್ಳಬೇಡಿ ಮತ್ತೆ. ಇದು ರೀಲ್ಸ್ ಅಷ್ಟೇ.

67
ಭಾಗ್ಯ ರೀಲ್ಸ್​

ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಅವರು ಬಿಡುವಿನ ಸಂದರ್ಭದಲ್ಲಿ ತಮ್ಮ ಸೀರಿಯಲ್​ ತಂಡದಿಂದ ತರ್ಲೆ ಮಾಡುತ್ತಲೇ ರೀಲ್ಸ್​ ಮಾಡುವುದು, ಹಾಡಿಗೆ ಸ್ಟೆಪ್​ ಹಾಕುವುದು ಇದೆ. ಅದೇ ರೀತಿ ಇನ್ನೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಅಷ್ಟೇ.

77
ತಾಂಡವ್​ ತರ್ಲೆ

ತಾಂಡವ್​ ಪಾತ್ರಧಾರಿ ಸುದರ್ಶನ್​ ರಂಗಪ್ರಸಾದ್​, ಈ ಸೀರಿಯಲ್​ನಲ್ಲಿ ಎಷ್ಟು ಕ್ರೂರಿಯೋ, ಸೀರಿಯಲ್​ ಆಚೆಗೆ ಬಂದಾಗ ಅಷ್ಟೇ ಜಾಲಿ ಮೂಡ್​ನಲ್ಲಿ ಇರುತ್ತಾರೆ. ರೀಲ್ಸ್​ ಮಾಡುವಾಗಲೆಲ್ಲಾ ತರ್ಲೆ ಮಾಡುತ್ತಲೇ ಇರುತ್ತಾರೆ. ಇದನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

Read more Photos on
click me!

Recommended Stories