ಎಲ್ಲಾ ಭಾಷೆಗಳ Bigg Bossನಲ್ಲಿ ನಂ.1 ಪಟ್ಟ ಯಾರಿಗೆ? TVR ರಿವೀಲ್​- ಕನ್ನಡಕ್ಕೆ ಎಷ್ಟನೇ ಸ್ಥಾನ?

Published : Oct 19, 2025, 04:16 PM IST

ಭಾರತದ ಜನಪ್ರಿಯ ಶೋ ಬಿಗ್​ಬಾಸ್​ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಟಿವಿಆರ್ ರೇಟಿಂಗ್​ನಲ್ಲಿ ಮಲಯಾಳಂ ಆವೃತ್ತಿ ಮೊದಲ ಸ್ಥಾನದಲ್ಲಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್​ಬಾಸ್ ಎರಡನೇ ಸ್ಥಾನ ಪಡೆದಿದ್ದು, ಹಿಂದಿ ಆವೃತ್ತಿ ಜನಪ್ರಿಯತೆ ಕಳೆದುಕೊಂಡಿದೆ.

PREV
18
ಹಲವಾರು ಭಾಷೆಗಳಲ್ಲಿ ಬಿಗ್​ಬಾಸ್​

ಕನ್ನಡ ಮಾತ್ರವಲ್ಲದೇ ಹಲವಾರು ಭಾಷೆಗಳಲ್ಲಿ ಬಿಗ್​ಬಾಸ್​ ಪ್ರದರ್ಶನಗೊಳ್ಳುತ್ತಿದೆ. Bigg Boss ಭಾರತದ ಅತಿ ಹೆಚ್ಚು ವೀಕ್ಷಿಸಲ್ಪಡುವ ಟಿವಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ TVR (Television Rating) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

28
ಟಿವಿಆರ್ ಎಂದರೇನು?

ಟಿವಿಆರ್ ಎಂದರೆ ಟೆಲಿವಿಷನ್ ರೇಟಿಂಗ್ ಅಥವಾ ಟೆಲಿವಿಷನ್ ವೀಕ್ಷಕರ ರೇಟಿಂಗ್. ಇದು ಒಂದು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕಾರ್ಯಕ್ರಮ ಅಥವಾ ಚಾನೆಲ್ ಅನ್ನು ವೀಕ್ಷಿಸಿದ ಗುರಿ ಪ್ರೇಕ್ಷಕರ ಶೇಕಡಾವಾರು ಪ್ರಮಾಣವನ್ನು ಅಳೆಯುತ್ತದೆ. ಸರಳವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಎಷ್ಟು ಜನರು (ಒಟ್ಟು ಸಂಭಾವ್ಯ ವೀಕ್ಷಕರಲ್ಲಿ) ಟ್ಯೂನ್ ಆಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಉದಾಹರಣೆಗೆ, 5 ರ ಟಿವಿಆರ್ ಎಂದರೆ ಒಟ್ಟು ಟಿವಿ ಹೊಂದಿರುವ ಪ್ರೇಕ್ಷಕರಲ್ಲಿ 5% ಆ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ ಎಂದರ್ಥ.

38
ಜಾಹೀರಾತು ನಿರ್ಧರಿಸಲು ಮುಖ್ಯ

ಪ್ರಸಾರ ಉದ್ಯಮದಲ್ಲಿ ಜಾಹೀರಾತು ದರಗಳನ್ನು ನಿರ್ಧರಿಸಲು ಇದು ಮುಖ್ಯವಾಗಿದೆ. ಟಿವಿಆರ್​ ಆಟವನ್ನು "ಟ್ರಿವಿಯಾ ಗೇಮ್" ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ಸತ್ಯಗಳು, ಕುತೂಹಲಕಾರಿ ವಿಷಯಗಳು, ಮತ್ತು ಜ್ಞಾನದ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

48
ಸದ್ಯ ಯಾರು ನಂಬರ್​ 1?

ಬಿಗ್ ಬಾಸ್ ಮಲಯಾಳಂ (Bigg Boss Malayalam) ಸೀಸನ್ 7 ನಂಬರ್​ 1 ಸ್ಥಾನದಲ್ಲಿದೆ. 12.1 ರೇಟಿಂಗ್‌ನೊಂದಿಗೆ ಇದು ಮುಂದಿದೆ. ಇದನ್ನು ಸೂಪರ್‌ಸ್ಟಾರ್ ಮೋಹನ್‌ಲಾಲ್ ಆಯೋಜಿಸಿದ್ದಾರೆ.

58
ಕನ್ನಡಕ್ಕೆ ನಂಬರ್​ 2

ಬಿಗ್ ಬಾಸ್ ಕನ್ನಡ ಸೀಸನ್ 12 ವಾರದ ದಿನಗಳಲ್ಲಿ 7.4 ಮತ್ತು ವಾರಾಂತ್ಯಗಳಲ್ಲಿ 10.9 ರೇಟಿಂಗ್‌ನೊಂದಿಗೆ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಕನ್ನಡದ ಸೂಪರ್​ ಸ್ಟಾರ್​ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದಾರೆ.

68
ತೆಲುಗು ನಂ.3

ಬಿಗ್ ಬಾಸ್ ತೆಲುಗು ಸೀಸನ್ 9 ಇದು 11.1 ರೇಟಿಂಗ್‌ನೊಂದಿಗೆ ಬಲವಾದ ಪ್ರದರ್ಶನವನ್ನು ಕಾಯ್ದುಕೊಂಡಿದೆ. ನಟ ನಾಗಾರ್ಜುನ ಇದನ್ನು ನಡೆದುತ್ತಿದ್ದಾರೆ.

78
ನಾಲ್ಕನೇ ಸ್ಥಾನ ಯಾರಿಗೆ?

ಬಿಗ್ ಬಾಸ್ ತಮಿಳು ಸೀಸನ್ 9, 3.4 ಕೋಟಿ ವೀಕ್ಷಕರನ್ನು ತಲುಪಿದೆ ಮತ್ತು 5.61 ಟಿವಿಆರ್ ಪಡೆದುಕೊಂಡಿದೆ. ತಮಿಳು ಸೀಸನ್​ ಅನ್ನು ನಟ ವಿಜಯ್ ಸೇತುಪತಿ ಆಯೋಜಿಸಿದ್ದಾರೆ.

88
ಐದನೇ ಸ್ಥಾನಕ್ಕೆ ಕುಸಿದ ಹಿಂದಿ

ಹಿಂದಿಯಲ್ಲಿಯೇ ಮೊದಲ ಬಾರಿಗೆ ಬಿಗ್​ಬಾಸ್​ ಆರಂಭಿಸಲಾಗಿತ್ತು. ಯಾಕೋ ಹಿಂದಿಯ ವೀಕ್ಷಕರು ಬಿಗ್​ಬಾಸ್​​ನಿಂದ ವಿಮುಖರಾಗುತ್ತಿದ್ದಾರೆ ಎನ್ನುವುದಕ್ಕೆ ಟಿವಿಆರ್​ ರೇಟಿಂಗ್​ ಸಾಕ್ಷಿಯಾಗಿದೆ. ಆದರೆ ಕಳೆದ ವಾರಕ್ಕಿಂತ ತುಸು ಏರಿಕೆ ಕಂಡಿದೆ ಅಷ್ಟೇ. ಬಿಗ್ ಬಾಸ್ ಹಿಂದಿ ಸೀಸನ್ 19 ಈ ವಾರ ರೇಟಿಂಗ್‌ಗಳಲ್ಲಿ 1.1 ರಿಂದ 1.3 ಕ್ಕೆ ಏರಿಕೆಯಾಗಿದ್ದು, ವಾರಾಂತ್ಯದ ರೇಟಿಂಗ್ 1.8 ಆಗಿದೆ. ನಟ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories