ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿಯಿಂದ ಖ್ಯಾತ ನಟ ಹೊರ ಬಂದಿದ್ದಾರೆ. ಈ ಕುರಿತು ನಟಿ ಸ್ವತಃ ಸೋಶಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವೀಕ್ಷಕರು ನಟಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ಇವರು ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುತ್ತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರ ನಡೆದಿದ್ದು, ಈ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಈಗಾಗಲೇ ಜನರು ಇವರನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ಇವರೇನು ಬಿಗ್ ಬಾಸ್ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆಯೇ? ಎಂದು ಕೇಳುತ್ತಿದ್ದಾರೆ.
28
ಪೂಜಾ ಪಾತ್ರಧಾರಿ ಆಶಾ ಅಯ್ಯನಾರ್ ಔಟ್
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಆಶಾ ಅಯ್ಯನಾರ್ ಸೀರಿಯಲ್ ನಿಂದ ಹೊರ ನಡೆದಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಸೀರಿಯಲ್ ತಂಡಕ್ಕೆ ಭಾವಪೂರ್ಣ ವಿದಾಯ ಹೇಳಿದ್ದಾರೆ.
38
ಏನು ಹೇಳಿದ್ರು ಪೂಜಾ
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಭಾಗ್ಯಲಕ್ಷ್ಮಿ ಪೂಜಾ. ಆದರೆ ಇನ್ಮುಂದೆ ಭಾಗ್ಯಲಕ್ಷ್ಮಿಯಲ್ಲಿ ಪೂಜಾ ಆಗಿ ಬರೋಲ್ಲ ಅಂತ ಹೇಳೋಕೆ ತುಂಬಾ ಬೇಸರ ಇದೆ. ಈ ಟೀಂ ನ ಬಿಡೋದು ಸುಲಭದ ಮಾತಾಗಿರಲಿಲ್ಲ. ಅನಿವಾರ್ಯ ಕಾರಣಗಳಿಂದಾಗಿ ನಾನು ಭಾಗ್ಯಲಕ್ಷ್ಮಿ ಬಿಡುತ್ತಿದ್ದೇನೆ. ಮೂರು ವರ್ಷ ಭಾಗ್ಯಲಕ್ಷ್ಮಿ ಟೀಂ ನನಗೆ ತುಂಬಾನೇ ಸಪೋರ್ಟ್ ಮಾಡಿದೆ. ತುಂಬಾನೇ ಮೆಮೊರಿಸ್ ಕೊಟ್ಟಿದೆ. ತುಂಬಾನೇ ಕಲಿಸಿದೆ. ಅದನ್ನ ನಾನು ನನ್ನ ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳುತ್ತೀನಿ.
ನನಗೆ ಭಾಗ್ಯಲಕ್ಷ್ಮಿ ಟೀಂ ನ ಟೆಕ್ನಿಷಿಯನ್ಸ್ , ಕಲರ್ಸ್ ಕನ್ನಡ ಟೀಂ, ಜೈ ಮಾತಾ ಕಂಬೈನ್ಸ್ ಪ್ರೊಡಕ್ಷನ್ ಹೌಸ್ ನ ಹಾಗೂ ಎಲ್ಲಾ ಕಲಾವಿದರು (co-artist ) ತುಂಬಾನೇ ಸಪೋರ್ಟ್ ಮಾಡಿ ತುಂಬಾನೇ ಪ್ರೀತಿ ಕೊಟ್ಟಿದೀರ, push ಮಾಡಿದ್ದೀರಾ, ಎಲ್ಲಾ ವಿಷಯದಲ್ಲೂ. ನಾನು ಈ ಪಾತ್ರನ ಇಲ್ಲಿ ತನಕ ತರಲು ಕಾರಣ ನೀವೆಲ್ಲರೂ ಆಗಿರುತ್ತೀರಿ, ನಿಮ್ಮೆಲ್ಲರಿಗೂ ನಾನು ಎಷ್ಟು ಥ್ಯಾಂಕ್ಸ್ ಹೇಳಿದರು ಸಲೋದಿಲ್ಲ.
58
ಮುಂದೆ ಬರುವ ಪೂಜಾಗೂ ಪ್ರೀತಿ ಕೊಡಿ
ಹಾಗೆ ಇಷ್ಟು ವರ್ಷ ಭಾಗ್ಯಲಕ್ಷ್ಮಿ ನ, ಪೂಜಾ ನ ತುಂಬ ಪ್ರೀತಿಯಿಂದ ಬೆಳಿಸಿಕೊಂಡು ಬಂದಿದ್ದೀರಿ. ಹಾಗೇನೇ ಇನ್ಮುಂದೆ ಬರುವಂತ ಪೂಜಾನ ಕೂಡ ಅಷ್ಟೇ ಪ್ರೀತಿ ಮಾಡಿ, ಅಷ್ಟೇ ಬೆಂಬಲಿಸಿ. ಹಾಗೂ ಭಾಗ್ಯಲಕ್ಷ್ಮಿ ನ ಇನ್ನೂ ಎತ್ತರಕ್ಕೆ ಬೆಳೆಸಿ ಎಂದು ನನ್ನ ಅಭಿಮಾನಿಗಳಿಗೆ ಹಾಗೂ ನನ್ನ ಪ್ರೀತಿಯ ವೀಕ್ಷಕರಿಗೆ ವಿನಂತಿಸುತ್ತೇನೆ. ಥ್ಯಾಂಕ್ಸ್ ಯು ಸೋ ಮಚ್ ತುಂಬ ಪ್ರೀತಿ ಕೊಟ್ಟು ಇಲ್ಲಿ ತನಕ ಕರೆದುಕೊಂಡು ಬಂದಿದೀರಾ. ಇನ್ನು ಮುಂದೆ ನಾನು ಏನೇ ಮಾಡಿದರೂ ಕೂಡ ಸಪೋರ್ಟ್ ಹಾಗೂ ಪ್ರೀತಿ ಮಾಡಿ ಇದಕೆ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ.
68
ಭವಿಷ್ಯದಲ್ಲಿ ಮತ್ತೆ ಈ ಟೀಂ ಜೊತೆ ಕೆಲಸ ಮಾಡುವೆ
ಈ ಟೀಂ ಜೊತೆ ಮತ್ತೆ ಭವಿಷ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳದೇ ಕೆಲಸ ಮಾಡ್ತೀನಿ. ಯಾಕಂದರೆ ನನಗೆ ಅಷ್ಟು ಪ್ರೀತಿ ಕೊಟ್ಟಿದೆ. ಅಷ್ಟು ಸಪೋರ್ಟ್ ಮಾಡಿದೆ. ಈ ಚಾನೆಲ್ ಕಲರ್ಸ್ ಕನ್ನಡ ಹಾಗೂ ಜೈ ಮಾತಾ ಕಂಬೈನ್ಸ್ ಹೌಸ್ , ಅಶ್ವಿನಿ ಕರುಂಬಯ ಮೇಡಂ, ಪ್ರಕಾಶ್ ಸರ್, ನಮ್ಮ ಡೈರೆಕ್ಟರ್ ದರ್ಶನ್ ಗೌಡ ಸರ್, ಯಶವಂತ್ ಪಾಂಡು ಸರ್, ಕ್ಯಾಮರಾಮ್ಯಾನ್ (DOP)ಅರುಣ್ ಮಂಡ್ಯ, ಅನಂತ್ ಗೌಡ ಸರ್ ಎಲ್ಲರಿಗೂ ಥ್ಯಾಂಕ್ಯೂ..
78
ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ
ಮತ್ತೆ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿ ಅಂತ ಹೇಳುತ್ತಾ. ಈ ಪೂರ್ತಿ ಟೀಂ ಜೊತೆ ತುಂಬ ಒಳ್ಳೆ ಸಂಬಂಧ ಇದೆ, ಅದನ್ನ ಉಳಿಸಿಕೊಂಡು ಹೋಗ್ತೀನಿ. ಹಾಗೆ ನನ್ನಿಂದ ಏನಾದರೂ ತೊಂದರೆ ಆಗಿದ್ದರೆ ಅಥವಾ ಬೇಜಾರಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. Thanks for the opportunity. ಈ ಮೂರು ವರ್ಷ ಅದ್ಭುತ ನೆನಪುಗಳನ್ನು ಕೊಟ್ಟಿರೋದಕ್ಕೆ ಥ್ಯಾಂಕ್ಯೂ. ಎಲ್ಲಾದಕ್ಕೂ ಥ್ಯಾಂಕ್ಯೂ. ಮಿಸ್ ಯೂ ಆಲ್ ಎಂದು ಬರೆದುಕೊಂಡಿದ್ದಾರೆ.
88
ಸೀರಿಯಲ್ ಬಿಡಲು ಕಾರಣ ಏನು?
ಆಶಾ ಅಯ್ಯನಾರ್ ದಿಢೀರ್ ಎಂದು ಸೀರಿಯಲ್ ಬಿಡಲು ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಅಭಿಮಾನಿಗಳು ನಿಮ್ಮ ಮತ್ತು ಕಿಶನ್ ನ ಮುದ್ದಾದ ಫೈಟ್, ರೊಮ್ಯಾನ್ಸ್ ಮಿಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಆಶಾ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಅನುಮಾನವೂ ಜನರಿಗೆ ಕಾಡುತ್ತಿದೆ.