ನಟಿ ಶಿಲ್ಪಾ ಶೆಟ್ಟಿ ದಂಪತಿ ದೊಡ್ಡ ಮಟ್ಟದ ಉದ್ಯಮವನ್ನು ಹೊಂದಿದ್ದಾರೆ, ಸಿನಿಮಾ, ಚಿತ್ರರಂಗದಿಂದಾಚೆ ಅವರು ಒಂದಷ್ಟು ಆದಾಯ ಮೂಲವನ್ನು ಹೊಂದಿದ್ದಾರೆ. ಮುಂಬೈನಲ್ಲಿರುವ ಅವರ ರೆಸ್ಟೋರೆಂಟ್‌ವೊಂದರಲ್ಲಿ ರಾತ್ರಿ ಆಗುವ ಆದಾಯದಿಂದ ಬೆಂಗಳೂರಿನಲ್ಲಿ ಲಕ್ಷುರಿ ಮನೆ ಕೂಡ ಬರುವುದು.
ರೈಟರ್ ಶೋಭಾ ಡೇ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶಿಲ್ಪಾ ಶೆಟ್ಟಿಯ ಮುಂಬೈ ಮೂಲದ ರೆಸ್ಟೋರೆಂಟ್ 'ಬಾಸ್ಟಿಯನ್' ಪಾಪುಲಾರಿಟಿಯ ಬಗ್ಗೆ ಮಾತನಾಡಿದ್ದಾರೆ. ರೆಸ್ಟೋರೆಂಟ್ ಆದಾಯ ಎಷ್ಟು? ಹೇಗೆಲ್ಲ ಜನರು ಬರುತ್ತಾರೆ? ನಿತ್ಯ ಎಷ್ಟು ಊಟ ಮಾರಾಟ ಆಗುವುದು? ಎಂದು ಅವರು ಮಾತನಾಡಿದ್ದಾರೆ.
27
ಇದು 21,000 ಚದರ ಅಡಿ ಇದೆ
"ಅದು ಬಾಸ್ಟಿಯನ್ ರೆಸ್ಟೋರೆಂಟ್. ಇದು ಮೇಲ್ಭಾಗದಲ್ಲಿದೆ. ಮುಂಬೈ ನಗರದ 360° ವ್ಯೂ ನೋಡೋಕೆ ಸಿಗುತ್ತದೆ. ಇದು 21,000 ಚದರ ಅಡಿ ಇದೆ, ನಾವು ಅಲ್ಲಿಗೆ ಹೋದಾಗ 'ನಾನು ಎಲ್ಲಿದ್ದೇನೆ?' ಅಂತ ಅನಿಸುತ್ತದೆ” ಎಂದು ಅವರು ಹೇಳಿದ್ದಾರೆ.
37
ಒಂದೇ ರಾತ್ರಿಯಲ್ಲಿ 1,400 ಜನರು ಊಟ ಮಾಡ್ತಾರೆ
ರೆಸ್ಟೋರೆಂಟ್‌ನಲ್ಲಿ ಒಂದೇ ರಾತ್ರಿಯಲ್ಲಿ 1,400 ಜನರು ಬರಬಹುದು. ಅಲ್ಲಿಗೆ ಬರುವವರು ಲಕ್ಷುರಿ ಕಾರ್‌ನಲ್ಲಿ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಎರಡು ಪಂಕ್ತಿಗಳು ಇದ್ದು, ಒಂದು ಪಂಕ್ತಿಯಲ್ಲಿ 700 ಜನರು ಕೂರುತ್ತಾರೆ, ಒಟ್ಟೂ ಒಂದೇ ರಾತ್ರಿಯಲ್ಲಿ 1,400 ಜನರು ಅಲ್ಲಿ ಸೇವೆ ಪಡೆಯಬಹುದು” ಎಂದಿದ್ದಾರೆ.
“ಲ್ಯಾಂಬೋರ್ಗಿನಿ ಮುಂತಾದ ಲಕ್ಷುರಿ ಕಾರ್‌ನಲ್ಲಿ ಬಂದು ಈ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವ ಜನರಿದ್ದಾರೆ. 700 ಜನರಲ್ಲಿ ನನಗೆ ಒಬ್ಬರೂ ಗೊತ್ತಿರಲಿಲ್ಲ. ಅವರೆಲ ಯುವಕರಾಗಿದ್ದರು, ಟೇಬಲ್‌ಗಾಗಿ ಅತ್ಯುತ್ತಮ ಟಕಿಲಾದ ಬಾಟಲಿಗಳನ್ನು ಆರ್ಡರ್ ಮಾಡುತ್ತಿದ್ದರು. ಪ್ರತಿ ಟೇಬಲ್ ಲಕ್ಷಗಟ್ಟಲೆ ರೂಪಾಯಿಯನ್ನು ಖರ್ಚು ಮಾಡುತ್ತಿತ್ತು. ಆದರೆ ಅವರು ಯಾರೆಂದು ಗೊತ್ತರಲಿಲ್ಲ” ಎಂದು ಅವರು ಹೇಳಿದ್ದಾರೆ.
57
50% ಶೇರ್
ಬಾಸ್ಟಿಯನ್ ಬ್ರಾಂಡ್‌ನ ಸಂಸ್ಥಾಪಕ ರಂಜಿತ್ ಬಿಂದ್ರಾ ಜೊತೆ ಪಾರ್ಟ್ನರ್‌ಶಿಪ್ ಮಾಡಿದ್ದರು. ಇವರು ಇಡೀ ಭಾರತದಲ್ಲಿ ಹೋಟೆಲ್ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಅವರು 50% ಶೇರ್ ಹೊಂದಿದ್ದಾರೆ. ಕುನಾಲ್ ವಿಜಯಕರ್ ಅವರೊಂದಿಗಿನ ಚರ್ಚೆಯಲ್ಲಿ, ಭಾರತದಲ್ಲಿರುವ ಅತಿದೊಡ್ಡ ರೆಸ್ಟೋರೆಂಟ್ ಉದ್ಯಮಿಗಳಲ್ಲಿ ನಾವು ಕೂಡ ಒಬ್ಬರು ಎಂದು ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದರು.
67
ನಿತ್ಯದ ಬ್ಯುಸಿನೆಸ್ ಎಷ್ಟು?
“ಮುಂಬೈನಲ್ಲಿ ಜನರ ಬಳಿ ಇರುವ ಹಣದ ಪ್ರಮಾಣ ನಿಜಕ್ಕೂ ಅಚ್ಚರಿ ಉಂಟು ಮಾಡುವುದು. ಮುಂಬೈನ ಒಂದು ರೆಸ್ಟೋರೆಂಟ್ ಪ್ರತಿ ರಾತ್ರಿ 2-3 ಕೋಟಿ ರೂಪಾಯಿ ವ್ಯವಹಾರ ಮಾಡುವುದು” ಎಂದಿದ್ದಾರೆ.
77
ವಾರಾಂತ್ಯದ ಆದಾಯ ಎಷ್ಟು?
ವಾರಾಂತ್ಯದಲ್ಲಿ ಏನಿಲ್ಲ ಅಂದರೂ 3 ಕೋಟಿ ರೂಪಾಯಿ ಬ್ಯುಸಿನೆಸ್ ಆಗುವುದು. ಇದು ನಿಜವೋ ಅಲ್ಲವೋ ಎಂದು ಚೆಕ್ ಮಾಡಲು ನಾನು ಅಲ್ಲಿಗೆ ಹೋಗಿದ್ದೆ” ಎಂದಿದ್ದಾರೆ.