Bhagyalakshmi ಆದಿ ಜೊತೆ ಮದ್ವೆಗೆ ರೆಡಿಯಾದಳಾ ಭಾಗ್ಯ? ಮದುಮಗಳ ಲುಕ್ ಹಿಂದಿರೋ ಸೀಕ್ರೆಟ್​ ಏನು?

Published : Oct 29, 2025, 01:12 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಆದಿ ಮತ್ತು ಭಾಗ್ಯಳನ್ನು ಒಂದು ಮಾಡಲು ಕುಸುಮಾ ಪ್ರಯತ್ನಿಸುತ್ತಿದ್ದಾಳೆ. ಈ ನಡುವೆ, ನಟಿ ಸುಷ್ಮಾ ಕೆ. ರಾವ್ ಮದುಮಗಳ ಗೆಟಪ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.

PREV
17
ರೋಚಕ ತಿರುವಿನಲ್ಲಿ ಭಾಗ್ಯಲಕ್ಷ್ಮಿ

ಭಾಗ್ಯಲಕ್ಷ್ಮಿ (Bhagyalakshmi Serial) ಇದೀಗ ರೋಚಕ ತಿರುವಿನತ್ತ ಸಾಗಿದೆ. ಭಾಗ್ಯ ಮತ್ತು ಆದಿಯನ್ನು ಒಂದು ಮಾಡಲು ಕುಸುಮಾ ಹರಸಾಹಸ ಪಡುತ್ತಿದ್ದಾಳೆ. ಅಷ್ಟಕ್ಕೂ ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್​ ಏನೂ ಶುರುವಾಗಿಲ್ಲ. ಭಾಗ್ಯ ಕಂಡರೆ ಆದಿಗೆ ಅದೇನೋ ಸೆಳೆತ, ಒಂಥರಾ ಪ್ರೀತಿ ಅಷ್ಟೇ.

27
ಗುಟ್ಟು ಬಿಚ್ಚಿಟ್ಟ ಕುಸುಮಾ?

ಅದೇ ಇನ್ನೊಂದೆಡೆ, ತಾಂಡವ್​ನೇ ಭಾಗ್ಯಳ ಗಂಡ ಎನ್ನೋದನ್ನು ಕುಸುಮಾ ಆದಿಯ ಎದುರು ಹೇಳಿದಂತೆ ತೋರಿಸಲಾಗಿದೆ. ಈ ಮೊದಲ ಆದಿ ಕಿವಿಯಲ್ಲಿ ಇಯರ್​ಫೋನ್​ ಹಾಕಿಕೊಂಡಿದ್ದು, ಕುಸುಮಾ ಈ ವಿಷಯ ಹೇಳಿದ್ದೆಲ್ಲಾ ಕೇಳಿಸಲಿಲ್ಲ ಎನ್ನುವಂತೆ ತೋರಿಸಲಾಗಿತ್ತು. ಇದೀಗ ಆತನ ಎದುರೇ ಎಲ್ಲ ವಿಷಯವನ್ನೂ ಬಯಲು ಮಾಡಿದ್ದಾಳೆ ಕುಸುಮಾ.

37
ಮದುಮಗಳಾದ ಭಾಗ್ಯ

ಇವೆಲ್ಲವುಗಳ ನಡುವೆಯೇ, ಆದಿ ಮತ್ತು ಭಾಗ್ಯ ಒಂದಾಗಬೇಕು ಎಂದು ಕುಸುಮಾ ಹರಸಾಹಸ ಪಡುತ್ತಿದ್ದ ಹೊತ್ತಿನಲ್ಲಿಯೇ ಭಾಗ್ಯ ಮದುಮಗಳಂತೆ ಶೃಂಗಾರ ಮಾಡಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದಾಳೆ.

47
ನಟಿಯ ಫೋಟೋಶೂಟ್​

ಅಷ್ಟಕ್ಕೂ ಇದೇನು ಮದುವೆ ಫೋಟೋಶೂಟ್​ ಅಲ್ಲ. ಬದಲಿಗೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್​ ಅವರು ಸುಮ್ಮನೇ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಮದುಮಗಳಂತೆ ಕಂಗೊಳಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಚಿಕ್ಕವರಾಗ್ತಾ ಇದ್ದೀರಲ್ಲ ಮೇಡಂ ಎಂದು ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದಾರೆ.

57
ಕಂಪ್ಯೂಟರ್ ಸೈನ್ಸ್‌ ಪದವಿ

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ.

67
ಆರ್ಯಭಟ ಪ್ರಶಸ್ತಿ

ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 39 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

77
ದಾಂಪತ್ಯದಲ್ಲಿ ಬಿರುಕು

ಮದುವೆಯಾಗಿರೋ ಸುಷ್ಮಾ ಅವರ ದಾಂಪತ್ಯದಲ್ಲಿ ಬಿರುಕು ಬಂದಿದ್ದು, ಸದ್ಯ ಅವರು ಒಂಟಿಯಾಗಿ ಬಾಳುತ್ತಿದ್ದಾರೆ. ಸೀರಿಯಲ್​ನಲ್ಲಿಯೂ ಅವರು ಒಂಟಿಯಾಗಿದ್ದು, ಆದಿ ಜೊತೆಯಾಗಿ ಬರಲಿ ಎನ್ನುವುದು ವೀಕ್ಷಕರ ಆಸೆ.

Read more Photos on
click me!

Recommended Stories