Bigg Boss Kannada 12 : ಬಿಗ್ ಬಾಸ್ ಮನೆ ಹುಡುಗಿ ರಕ್ಷಿತಾ, ಗಿಲ್ಲಿ ಅವರನ್ನು ಪ್ರೀತಿ ಮಾಡ್ತಿದ್ದಾರಾ? ಈ ಅನುಮಾನ ಮತ್ತೆ ವೀಕ್ಷಕರನ್ನು ಕಾಡ್ತಿದೆ. ಅದಕ್ಕೆ ರಕ್ಷಿತಾ ನೀಡಿರುವ ಒಂದು ಹೇಳಿಕೆ ಕಾರಣ.
ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕೇಳಿ ಬರ್ತಿರುವ ಹೆಸರು ರಕ್ಷಿತಾ ಹಾಗೂ ಗಿಲ್ಲಿ. ಒಬ್ಬರು ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿ ಪಡೆದ್ರೆ ಇನ್ನೊಬ್ಬರು ಹಾಸ್ಯದ ಮೂಲಕ ಜನರ ಗಮನ ಸೆಳೆದವರು. ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ತಮ್ಮದೇ ಆಟ ಆಡ್ತಿದ್ರೂ ಇಬ್ಬರ ಹೊಂದಾಣಿಗೆ ಚೆನ್ನಾಗಿದೆ.
27
ಗಿಲ್ಲಿ ಅಂದ್ರೆ ಇಷ್ಟ
ರಕ್ಷಿತಾರನ್ನು ಗಿಲ್ಲಿ ವಂಶದ ಕುಡಿ ಅಂತಾನೆ ಕರೀತಾರೆ. ಗಿಲ್ಲಿ ಎಲ್ಲೆ ಹೋದ್ರೂ ರಕ್ಷಿತಾ ಅಲ್ಲಿರ್ತಾರೆ. ಗಿಲ್ಲಿಗೆ ಏನೇ ಆದ್ರೂ ರಕ್ಷಿತಾ ಸಹಿಸೋದಿಲ್ಲ. ಸದಾ ಗಿಲ್ಲಿ ಬೆಂಬಲಕ್ಕೆ ನಿಲ್ಲುವ ರಕ್ಷಿತಾಗೆ ಗಿಲ್ಲಿ ಮೇಲೆ ವಿಶೇಷ ಅಕ್ಕರೆ ಇದೆ.
37
ಗಿಲ್ಲ ಅಣ್ಣ ಅಲ್ಲ ಎಂದ ರಕ್ಷಿತಾ
ಗಿಲ್ಲಿ ಹಾಗೂ ತಮ್ಮ ಸಂಬಂಧದ ಬಗ್ಗೆ ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ. ಸೂರಜ್ ಸಹೋದರಿ ಮನೆಗೆ ಬಂದಾಗ, ಬಿಗ್ ಬಾಸ್ ಮನೆಯಲ್ಲಿರೋರೆಲ್ಲ ರಕ್ಷಿತಾ ಅಣ್ಣಂದಿರು ಅಲ್ವಾ ಅಂತ ಕೇಳ್ತಾರೆ. ಅದಕ್ಕೆ ರಕ್ಷಿತಾ ತಕ್ಷಣ ಉತ್ತರ ನೀಡಿದ್ದಾರೆ. ಗಿಲ್ಲಿ ಒಬ್ಬರನ್ನು ಬಿಟ್ಟು ಎಲ್ಲರೂ ಅಣ್ಣಂದಿರು ಅಂತ. ಹಾಗಿದ್ರೆ ಗಿಲ್ಲಿ ಏನು ಎಂದಾಗ, ಗಿಲ್ಲಿ ನನ್ನ ಫ್ರೆಂಡ್ ಅಂತ ರಕ್ಷಿತಾ ಹೇಳಿದ್ದಾರೆ.
ರಕ್ಷಿತಾ ಈ ಮಾತು ಕೇಳಿದ ಜನರು, ರಕ್ಷಿತಾ ಗಿಲ್ಲಿಯನ್ನು ಪ್ರೀತಿ ಮಾಡ್ತಿರೋದು ಕನ್ಫರ್ಮ್ ಆಗಿದೆ ಎನ್ನುತ್ತಿದ್ದಾರೆ. ಈ ಹಿಂದೆ ರಕ್ಷಿತಾ, ಗಿಲ್ಲಿ ಅಂದ್ರೆ ನನಗೆ ಇಷ್ಟ ಎಂದಿದ್ದರು. ಅದಾದ್ಮೇಲೆ ಗಿಲ್ಲಿ, ನೇರವಾಗಿ ರಕ್ಷಿತಾಗೆ ನೀನು ನನ್ನ ಲವ್ ಮಾಡ್ತಿದ್ಯಾ ಅಂತ ಕೇಳಿದ್ರು. ಅವ್ರ ಮಾತು ಕೇಳಿ ರಕ್ಷಿತಾ ನಕ್ಕಿದ್ದು ಬಿಟ್ರೆ ಉತ್ತರ ನೀಡಿರಲಿಲ್ಲ. ಈಗ ಗಿಲ್ಲಿ ನನ್ನ ಅಣ್ಣ ಅಲ್ಲ ಎಂದಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿ ಸದಾ ಜಗಳ ಆಡ್ಕೊಂಡ್ರೂ, ಪರಸ್ಪರ ಕೇರ್ ಮಾಡ್ತಾರೆ. ಸ್ಟ್ಯಾಂಡ್ ತೆಗೆದುಕೊಳ್ತಾರೆ. ಇದೆಲ್ಲವನ್ನೂ ನೋಡಿದ ವೀಕ್ಷಕರಿಗೆ ಆಗಾಗ ಈ ಬಗ್ಗೆ ಅನುಮಾನ ಬರ್ತಿರುತ್ತದೆ.
57
ವಿಡಿಯೋ ನೋಡಿ ವೀಕ್ಷಕರ ಕಮೆಂಟ್
ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನನ್ನ ಫ್ರೆಂಡ್ ಎನ್ನುವ ರಕ್ಷಿತಾ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಜನರು, ರಕ್ಷಿತಾ ಫ್ರೆಂಡ್ ಎಂದಿದ್ದಾರೆ. ಪ್ರೇಮಿ ಎಂದಿಲ್ಲ ಅಂತ ರಕ್ಷಿತಾ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ರಕ್ಷಿತಾ ಮುಗ್ದೆ. ಅವರು ಮನಸ್ಸಿನಲ್ಲಿ ಏನೂ ಇಟ್ಕೊಳ್ಳೋದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದಿಷ್ಟು ಮಂದಿ, ಪಾಪ ರಕ್ಷಿತಾಗೆ ಗಿಲ್ಲಿ ಮೇಲೆ ಮನಸ್ಸಿದೆ. ಆದ್ರೆ ಗಿಲ್ಲಿ ಕಾವ್ಯಾ ಹಿಂದೆ ಹೋಗ್ತಿದ್ದಾರೆ ಎನ್ನುವ ಕಮೆಂಟ್ ಮಾಡಿದ್ದಾರೆ.
67
ಕಾವ್ಯ ಮೇಲೆ ರಕ್ಷಿತಾಗೆ ಮುನಿಸು
ಬಿಗ್ ಬಾಸ್ ಮನೆಗೆ ಬಂದಾಗಿಂದ್ಲೂ ಗಿಲ್ಲಿ ಕಾವು ಕಾವು ಅಂತ ಕಾವ್ಯ ಹಿಂದೆ ಬಿದ್ದಿದ್ದಾರೆ. ಕಾವ್ಯ ಎಷ್ಟೇ ಬೈದ್ರೂ ಗಿಲ್ಲಿ ಕಾವ್ಯರನ್ನು ಬಿಡೋದಿಲ್ಲ. ರಕ್ಷಿತಾಗೆ ಕಾವ್ಯ ಇಷ್ಟವಿಲ್ಲ. ನeರವಾಗಿಯೇ ಕಾವ್ಯ ಎಲಿಮಿನೇಟ್ ಆಗ್ಬೇಕು ಅಂತ ರಕ್ಷಿತಾ ಅನೇಕ ಬಾರಿ ಹೇಳಿದ್ದಾರೆ. ಕಾವ್ಯ ಮನೆಯಿಂದ ಹೊರ ಹೋಗ್ಬೇಕು, ನಾನು ಗಿಲ್ಲಿ ಫಿನಾಲೆಗೆ ಬರಬೇಕು ಅನ್ನೋದೇ ರಕ್ಷಿತಾ ಮಾತು. ರಕ್ಷಿತಾ ಈ ಮಾತಿನ ಹಿಂದೆ ಬರೀ ಸ್ನೇಹ ಇದ್ಯಾ ಇಲ್ಲ ಪ್ರೀತಿ ಇದ್ಯಾ ಗೊತ್ತಿಲ್ಲ.
77
ರಕ್ಷಿತಾ ಅರ್ಥ ಮಾಡ್ಕೊಳ್ಳೋದು ಕಷ್ಟ
ಬಿಗ್ ಬಾಸ್ ಮನೆಯಲ್ಲಿ ಮಲ್ಟಿಪಲ್ ಪರ್ಸನಾಲಿಟಿ ರಕ್ಷಿತಾ ಅವರದ್ದು. ಒಮ್ಮೆ ನಗ್ತಾರೆ, ಇನ್ನೊಮ್ಮೆ ಅಳ್ತಾರೆ ಮತ್ತೊಮ್ಮೆ ಜಗಳಕ್ಕೆ ಬರ್ತಾರೆ. ಸದಾ ಜೊತೆಗಿರೋರನ್ನೇ ನಾಮಿನೇಟ್ ಮಾಡುವ ರಕ್ಷಿತಾ, ಅವರಿಗೆ ಜನ ವೋಟು ಹಾಕ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸ್ತಾರೆ. ರಕ್ಷಿತಾ ಈ ಕ್ಯಾರೆಕ್ಟರ್ ಯಾರಿಗೂ ಇನ್ನೂ ಅರ್ಥ ಆಗ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.