ಬ್ರಹ್ಮಗಂಟು ಸೀರಿಯಲ್‌ನಲ್ಲಿ, ತನ್ನ ತಂಗಿ ದೀಪಾಳಿಗೆ ಚಿರಾಗ್ ಮೋಸ ಮಾಡುತ್ತಿದ್ದಾನೆಂದು ನರಸಿಂಹ ತಪ್ಪಾಗಿ ಭಾವಿಸುತ್ತಾನೆ. ದೀಪಾ-ಚಿರಾಗ್ ವಿವಾಹ ವಾರ್ಷಿಕೋತ್ಸವದಂದೇ ಸೌಂದರ್ಯಳ ಕುತಂತ್ರದಿಂದ ನರಸಿಂಹ ಎಲ್ಲರ ಮುಂದೆ ಚಿರಾಗ್‌ನನ್ನು ನಿಂದಿಸುತ್ತಾನೆ.
ಬ್ರಹ್ಮಗಂಟು ಸೀರಿಯಲ್ (Brahmagantu Serial) ನಲ್ಲಿ ಇದುವರೆಗೆ ದೀಪಾ ಮತ್ತು ದಿಶಾ ಇಬ್ಬರೂ ಒಬ್ಬರೇ ಎನ್ನುವ ಸತ್ಯ ರೂಪಾ ಬಿಟ್ಟರೆ ಯಾರಿಗೂ ತಿಳಿದಿಲ್ಲ. (ಇದು ಸ್ವಲ್ಪ ಹಾಸ್ಯಾಸ್ಪದ ಎನ್ನಿಸಿದರೂ ಸೀರಿಯಲ್‌ನಲ್ಲಿ ಎಲ್ಲವೂ ಸಾಧ್ಯ ಎಂದುಕೊಂಡು ವೀಕ್ಷಕರೂ ಸುಮ್ಮನೇ ನೋಡುತ್ತಿದ್ದಾರೆ ಅನ್ನಿ).
26
ಚಿರಾಗ್-ದಿಶಾ ನೋಡಿದ ಅಣ್ಣ
ಆದರೆ, ದೀಪಾಳ ಅಣ್ಣ ನರಸಿಂಹ, ಚಿರಾಗ್‌ನನ್ನು ಬೇರೆ ಒಬ್ಬಾಕೆಯ ಜೊತೆ ಆತ್ಮೀಯವಾಗಿ ಇರುವುದನ್ನು ನೋಡಿ ಉರಿದು ಹೋಗಿದ್ದಾನೆ. ತನ್ನ ತಂಗಿಗೆ ಮೋಸ ಆಗುತ್ತಿದೆ ಎಂದುಕೊಂಡಿರುವ ಆತ ಸುಮ್ಮನೇ ಬಿಟ್ಟಾನೆಯೆ?
36
ತಪ್ಪು ತಿಳಿದುಕೊಂಡ ನರಸಿಂಹ
ಅಷ್ಟಕ್ಕೂ ಆಗಿದ್ದೇನೆಂದರೆ, ನರಸಿಂಹ ತಾನೇ ಸ್ವತಃ ದುಡಿಯಬೇಕು ಎನ್ನುವ ಕಾರಣಕ್ಕೆ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಆ ಕಟ್ಟಡದ ಮಾಲೀಕ ಚಿರಾಗ್. ಚಿರಾಗ್ ಅಲ್ಲಿ ದಿಶಾಳನ್ನು ಕರೆದುಕೊಂಡು ಬಂದಿದ್ದ. ಚಿರುನ ಕಣ್ಣಿಗೆ ಧೂಳು ಹೋದಾಗ ದಿಶಾ ಹತ್ತಿರ ಹೋಗಿ ಸರಿ ಮಾಡಿದ್ದಳು. ಒಟ್ಟಿಗೇ ಆತ್ಮೀಯತೆಯಿಂದ ಇರುವುದನ್ನು ನೋಡಿ ನರಸಿಂಹ ಚಿರು ಬಗ್ಗೆ ತಪ್ಪು ತಿಳಿದುಕೊಂಡು ಬಿಟ್ಟಿದ್ದಾನೆ!ಯಾವುದೋ ಮಾಡೆಲ್ ಜೊತೆ ಚಿರುಗೆ ಸಂಬಂಧ ಇದೆ ಎಂದುಕೊಂಡು ಬಿಟ್ಟಿದ್ದಾನೆ.
ಅದೇ ಇನ್ನೊಂದೆಡೆ, ದೀಪಾ ಮತ್ತು ಚಿರಾಗ್ ಮೊದಲ ವಿವಾಹ ವಾರ್ಷಿಕೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ, ನರಸಿಂಹನನ್ನು ಮುಂದಿಟ್ಟುಕೊಂಡು ಕಿಚ್ಚು ಹೊತ್ತಿಸಲು ಸೌಂದರ್ಯ ರೆಡಿಯಾಗಿ ನಿಂತಿದ್ದಾಳೆ. ವಿಶೇಷ ಅತಿಥಿ ಬರ್ತಾನೆ ನೋಡು ಎಂದು ಹೇಳುತ್ತಲೇ ಖುಷಿ ಪಟ್ಟುಕೊಳ್ಳುತ್ತಿದ್ದಾಳೆ.
56
ನರಸಿಂಹ ಕೆಂಡಾಮಂಡಲ
ಅಷ್ಟೊತ್ತಿಗಾಗಲೇ ದೀಪಾ ಚಿರು ಜೊತೆ ತನ್ನ ಮುದ್ದು ಮುದ್ದು ಮಾತಿನಿಂದ ರೊಮಾನ್ಸ್ ಶುರು ಮಾಡಿಕೊಂಡಿದ್ದಳು. ಆದರೆ, ದೀಪಾಳೇ ದಿಶಾ ಎನ್ನುವ ಸತ್ಯ ತಿಳಿಯದ ನರಸಿಂಹ, ಕೆಂಡಾಮಂಡಲನಾಗಿ ಬಂದು ಚಿರಾಗ್ ವಿರುದ್ಧ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ.
66
ಸತ್ಯ ಬ್ಲಾಸ್ಟ್!
ಅವನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾನೆ. ಸೌಂದರ್ಯ ಖುಷಿಪಟ್ಟುಕೊಂಡರೆ ಉಳಿದವರು ಶಾಕ್ ಆಗಿದ್ದಾರೆ. ಇದೀಗ ದೀಪಾ ಸತ್ಯವನ್ನು ಬಯಲು ಮಾಡಲೇಬೇಕಿದೆ. ಆ ಸತ್ಯ ಬ್ಲಾಸ್ಟ್ ಆಗುತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.