Bigg Boss ಮನೆಗೆ 'ಗಿಲ್ಲಿ ಅತ್ತೆ' ಆಗಮನ! ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ- ಗಿಲ್ಲಿಗೆ ಬುದ್ಧಿ ಮಾತು

Published : Dec 24, 2025, 02:46 PM IST

ಬಿಗ್​ಬಾಸ್​ ಮನೆಯಲ್ಲಿ ಕುಟುಂಬಸ್ಥರ ಆಗಮನದ ವಾರದಲ್ಲಿ, ಅಶ್ವಿನಿ ಗೌಡ ಅವರ ತಾಯಿ ಆಗಮಿಸಿದ್ದಾರೆ. ಮಗಳನ್ನು ಕಂಡು ಭಾವುಕರಾದ ತಾಯಿ, ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದರು. ಆಗ ಗಿಲ್ಲಿ ನಟ, ಅಶ್ವಿನಿ ತಾಯಿಯನ್ನು 'ಅತ್ತೆ' ಎಂದು ಕರೆದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದರು.

PREV
16
ಕುಟುಂಬಸ್ಥರ ಆಗಮನ

ಬಿಗ್​ಬಾಸ್​ ಮನೆಯಲ್ಲಿ (Bigg Boss) ಈಗ ಕುಟುಂಬಸ್ಥರ ಆಗಮನವಾಗುತ್ತಿದೆ. ಇದಾಗಲೇ ಕೆಲವು ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು. ಇಷ್ಟು ದಿನ ಅವರನ್ನೆಲ್ಲಾ ಬಿಟ್ಟು ಇದ್ದುದರಿಂದ ಸಹಜವಾಗಿ ಸ್ಪರ್ಧಿಗಳಲ್ಲಿ ನೋವು ಇದ್ದೇ ಇದೆ.

26
ಬಿಕ್ಕಿಬಿಕ್ಕಿ ಅತ್ತ ಅಶ್ವಿನಿ ಗೌಡ

ಇದೀಗ ಅಶ್ವಿನಿ ಗೌಡ ಅವರ ಅಮ್ಮನ ಮಾತು ಹೊರಗಿನಿಂದ ಕೇಳಿಬರುತ್ತಿದ್ದಂತೆಯೇ, ಅಶ್ವಿನಿ ಗೌಡ ಆ ಮಾತು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕೊನೆಗೆ ಅಮ್ಮ ಮನೆಯೊಳಕ್ಕೆ ಬರುತ್ತಾರೆ ಎಂದು ತಿಳಿಯುತ್ತಿದ್ದಂತೆಯೇ ಬಿಗ್​ಬಾಸ್​ಗೆ ನಮಸ್ಕಾರ ಮಾಡಿದ್ದಾರೆ.

36
ಅಮ್ಮ-ಮಗಳ ಮಿಲನ

ತುಂಬಾ ದಿನಗಳ ಬಳಿಕ ಅಮ್ಮ- ಮಗಳ ಮಿಲನವಾಗಿದೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಪ್ರೀತಿಯ ಧಾರೆಯನ್ನೇ ಹರಿಸಿದ್ದಾರೆ.

46
ಅಮ್ಮನ ಕಿವಿಮಾತು

ಕೊನೆಗೆ ಗಿಲ್ಲಿ ನಟನ ಬಳಿ (Bigg Boss Gilli Nata) ಅಶ್ವಿನಿ ಗೌಡ ಅವರ ಅಮ್ಮ ಅವರು ಒಬ್ಬರಿಗೊಬ್ಬರು ಮನಸ್ತಾಮ ಮಾಡಿಕೊಳ್ಳಬೇಡಿ. ಚೆನ್ನಾಗಿರಿ ಎಂದಿದ್ದಾರೆ. ಆಮೇಲೆ ಅಶ್ವಿನಿ ಗೌಡ ಅವರು ಅಮ್ಮನ ಬಳಿ ಗಿಲ್ಲಿಯ ಕಂಪ್ಲೇಂಟ್​ ಮಾಡಿದ್ದಾರೆ. ತುಂಬಾ ನನ್ನನ್ನು ರೇಗಿಸ್ತಾನೆ ಎಂದು ಹೇಳಿದ್ದಾರೆ.

56
ಅತ್ತೆ ಮಗಳ ಮೇಲೆ ಸಲುಗೆ

ಆಗ ಗಿಲ್ಲಿ ನಟ ಅವರು, ಅತ್ತೆ ಮಗಳು ಎಂದ ಮೇಲೆ ಅಷ್ಟು ಸಲುಗೆ ಇಲ್ಲ ಎಂದರೆ ಹೇಗೆ ಎಂದಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅಮ್ಮನನ್ನು ಅತ್ತೆ ಅತ್ತೆ ಎಂದೇ ಮಾತನಾಡಿಸಿದ್ದಾರೆ. ಇದನ್ನು ಕೇಳಿ ಬಿಗ್​ಬಾಸ್​ ಮನೆಯಲ್ಲಿ ಎಲ್ಲರೂ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.

66
ವೀಕ್ಷಕರು ಫುಲ್​ ಖುಷ್​

ಅಷ್ಟಕ್ಕೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಆಗಾಗ್ಗೆ ಜಗಳವಾಡುತ್ತಲೇ ಇರುತ್ತಾರೆ. ಇದರ ನಡುವೆಯೇ ಇವರಿಬ್ಬರ ನಡುವೆ ಪ್ರೀತಿಯೂ ಹಾಗೆಯೇ ಇದೆ.  ಒಟ್ಟಿನಲ್ಲಿ ಇವರಿಬ್ಬರೂ ಇಷ್ಟೊಂದು ಅನ್ಯೋನ್ಯವಾಗಿರುವುದನ್ನು ನೋಡಿ ವೀಕ್ಷಕರಂತೂ ಖುಷಿ ಪಟ್ಟುಕೊಳ್ಳುತ್ತಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories